)
ಹಬ್ಬದ ಸೀಸನ್ ಆರಂಭವಾಗಿದೆ. ರಕ್ಷಾಬಂಧನ ಮತ್ತು ಸ್ವಾತಂತ್ರೋತ್ಸವದ ಸಲುವಾಗಿ ಇ-ಕಾಮರ್ಸ್ ವೆಬ್ಸೈಟ್ಗಳಲ್ಲಿ ಸೇಲ್ ಪ್ರಾರಂಭವಾಗಿದೆ. ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಜೊತೆಗೆ, ಟಾಟಾದ ಕ್ರೋಮಾದಲ್ಲಿಯೂ ಇಂಡಿಪೆಂಡೆನ್ಸ್ ಸೇಲ್ ಲೈವ್ ಆಗಿದೆ. ಈ ಸೇಲ್ನಲ್ಲಿ, ಎಲೆಕ್ಟ್ರಾನಿಕ್ ಉಪಕರಣಗಳ ಮೇಲೆ 70% ವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಐಫೋನ್ 16 ಮೇಲೆ ಕೂಡಾ ಅದ್ಭುತ ಕೊಡುಗೆಗಳನ್ನು ನೀಡಲಾಗುತ್ತಿದೆ. ಇಲ್ಲಿ ಕೇವಲ 11664 ಪಾವತಿಸುವ ಮೂಲಕ ಈ ಫೋನ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.
ಐಫೋನ್ 16 ಕೊಡುಗೆಗಳು ಮತ್ತು ರಿಯಾಯಿತಿಗಳು :
iPhone 16 ಅನ್ನು 79,900 ರೂಪಾಯಿಗೆ ಬಿಡುಗಡೆ ಮಾಡಲಾಯಿತು. ಕ್ರೋಮಾದಲ್ಲಿ 7.40% ರಿಯಾಯಿತಿಯ ನಂತರ, ಅದನ್ನು 73,990 ಕ್ಕೆ ಮಾರಾಟ ಮಾಡಲಾಗುತ್ತಿದೆ. ಅಂದರೆ, ಈ ಫೋನ್ ಖರೀದಿ ಮೇಲೆ 5,910 ರಿಯಾಯಿತಿಯನ್ನು ನೀಡಲಾಗುತ್ತಿದೆ. ನಂತರ ಅನೇಕ ಬ್ಯಾಂಕ್ ಮತ್ತು ವಿನಿಮಯ ಕೊಡುಗೆಗಳನ್ನು ಕೂಡಾ ನೀಡಲಾಗಿದೆ.
iPhone 16 ಬ್ಯಾಂಕ್ ಕೊಡುಗೆ :
ಕಾರ್ಡ್ ಬಳಸಿ ಐಫೋನ್ 16 ಅನ್ನು ಖರೀದಿಸುತ್ತಿದ್ದರೆ, ಕ್ಯಾಶ್ಬ್ಯಾಕ್ ಕೂಡ ಸಿಗುತ್ತದೆ. SBI ಮತ್ತು ICICI ಕ್ರೆಡಿಟ್ ಕಾರ್ಡ್ಗಳನ್ನು ಬಳಸುವ ಮೂಲಕ, 4 ಸಾವಿರ ರಿಯಾಯಿತಿಯನ್ನು ಪಡೆಯಬಹುದು. ಅಂದರೆ, ಫೋನ್ನ ಬೆಲೆ 69,990 ರೂ.ಗೆ ಆಗಿರುತ್ತದೆ. ಇದರ ಹೊರತಾಗಿ, ನೋ ಕಾಸ್ಟ್ EMI ಆಯ್ಕೆಯೂ ಇದೆ.
iPhone 16 ನೋ ಕಾಸ್ಟ್ EMI ಆಯ್ಕೆ :
ನೀವು ಐಫೋನ್ 16 ಅನ್ನು ಕಂತುಗಳಲ್ಲಿ ಅಂದರೆ EMI ನಲ್ಲಿ ಖರೀದಿಸಲು ಬಯಸಿದರೆ, ಕ್ರೋಮಾ ನೋ ಕಾಸ್ಟ್ EMI ಆಯ್ಕೆಯನ್ನು ನೀಡುತ್ತಿದೆ. SBI ಕ್ರೆಡಿಟ್ ಕಾರ್ಡ್, ICICI ಕ್ರೆಡಿಟ್ ಕಾರ್ಡ್ ಅಥವಾ ICICI ಡೆಬಿಟ್ ಕಾರ್ಡ್ ಹೊಂದಿದ್ದರೆ, ಕೇವಲ 11664.99 ಪಾವತಿಸುವ ಮೂಲಕ ಐಫೋನ್ ಖರೀದಿಸಬಹುದು. ನಂತರ ಮುಂದಿನ 6 ತಿಂಗಳವರೆಗೆ ಪ್ರತಿ ತಿಂಗಳು 11664.99 ಕಂತಿನಲ್ಲಿ ಪಾವತಿಸಬೇಕಾಗುತ್ತದೆ.