ಬೆಂಗಳೂರು : Apple Event 2023 ಅನ್ನು ಇಂದು ಅಂದರೆ ಸೆಪ್ಟೆಂಬರ್ 12 ರಂದು ಆಯೋಜಿಸಲಾಗುವುದು. ಹೊಸ ಐಫೋನ್ 15 ಆಗಮನದ ಮೊದಲು, ಹಳೆಯ ಐಫೋನ್‌ಗಳ ಬೆಲೆ ಇದ್ದಕ್ಕಿದ್ದಂತೆ ಕುಸಿದಿದೆ. ಫ್ಲಿಪ್‌ಕಾರ್ಟ್ ಐಫೋನ್‌ಗಳ ಮೇಲೆ ಭಾರೀ ರಿಯಾಯಿತಿಗಳನ್ನು ನೀಡುತ್ತಿದೆ. ನೀವು ಹೊಸ ಐಫೋನ್ ಖರೀದಿಸಲು ಯೋಜಿಸುತ್ತಿದ್ದರೆ ಇದು ಅತ್ಯುತ್ತಮ ಸಮಯ. ಐಫೋನ್ 11 ಪ್ರೀಮಿಯಂ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಬರುವ ಪಾಕೆಟ್ ಸ್ನೇಹಿ ಫೋನ್ ಆಗಿದೆ. ಫ್ಲಿಪ್‌ಕಾರ್ಟ್‌ನಿಂದ ಐಫೋನ್ 11 ಅನ್ನು 3 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. 


COMMERCIAL BREAK
SCROLL TO CONTINUE READING

Apple iPhone 11 ಬೆಲೆ ಕಡಿತ : 
ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 11ರ ಬೆಲೆಯಲ್ಲಿ ಭಾರೀ ರಿಯಾಯಿತಿ ನೀಡಲಾಗುತ್ತಿದೆ. iPhone 11ರ ಮಾರುಕಟ್ಟೆ ಬೆಲೆ 43,900 ರೂ. ಆಗಿದೆ.  ಆದರೆ, ಇದು ಫ್ಲಿಪ್‌ಕಾರ್ಟ್‌ನಲ್ಲಿ 37,999 ರೂ.ಗೆ ಲಭ್ಯವಿದೆ. ಫೋನ್ ಖರೀದಿಸಲು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ,  1,900 ರೂಪಾಯಿ ರಿಯಾಯಿತಿ ಸಿಗುತ್ತದೆ. ಅದರ ನಂತರ ಫೋನ್ ಬೆಲೆ 36,099 ರೂ. ಆಗಲಿದೆ. ಇದಾದ ನಂತರ ಎಕ್ಸ್ ಚೇಂಜ್ ಆಫರ್ ಕೂಡಾ ಇದೆ. 


ಇದನ್ನೂ ಓದಿ : ವಾಟ್ಸ್ ಆಪ್ ನಲ್ಲಿ ಬರುತ್ತಿದೆ ಇದುವರೆಗಿನ ಅತಿ ದೊಡ್ಡ ಅಪ್ಡೇಟ್, ಇಲ್ಲಿದೆ ಡೀಟೈಲ್ಸ್!


Apple iPhone 11 ಎಕ್ಸ್ಚೇಂಜ್ ಆಫರ್ :
Apple iPhone 11ರ ಖರೀದಿ ಮೇಲೆ  33,100 ರೂಪಾಯಿಗಳ ಎಕ್ಸ್ಚೇಂಜ್ ಆಫರ್ ನೀಡಲಾಗುತ್ತಿದೆ. ಈ ಆಫರ್ ಮೂಲಕ ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಂಡರೆ ಇಷ್ಟು ರಿಯಾಯಿತಿ ಸಿಗುತ್ತದೆ. ಆದರೆ, ಫೋನ್ ಇತ್ತೀಚಿನದ್ದಾಗಿದ್ದು, ಉತ್ತಮ ಸ್ಥಿತಿಯಲ್ಲಿರಬೇಕು.  ಹೀಗೆ ಸಂಪೂರ್ಣ ರಿಯಾಯಿತಿ ಪಡೆಯುವುದು ಸಾಧ್ಯವಾದರೆ  
Apple iPhone 11 ಬೆಲೆ 2,999 ರೂ.ಗೆ ಇಳಿಯುತ್ತದೆ. 


iPhone 11 ವಿಶೇಷಣಗಳು :
Apple iPhone 11 6.1 ಇಂಚಿನ  ಸ್ಕ್ರೀನ್ ಅನ್ನು ಹೊಂದಿದೆ.  ಇದು ಆಪಲ್‌ನ A13 ಬಯೋನಿಕ್ ಚಿಪ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.  ಇದು ಅತ್ಯಂತ ವೇಗವಾಗಿ ಕಾರ್ಯನಿರ್ವಹಿಸುತ್ತದೆ. ಈ ಪ್ರೀಮಿಯಂ ಸ್ಮಾರ್ಟ್‌ಫೋನ್ 12 ಮೆಗಾಪಿಕ್ಸೆಲ್ ಲೆನ್ಸ್‌ಗಳೊಂದಿಗೆ ಎರಡು ಕ್ಯಾಮೆರಾಗಳನ್ನು ಹೊಂದಿದೆ. ಇದರೊಂದಿಗೆ ನೀವು 4K ಗುಣಮಟ್ಟದಲ್ಲಿ ಅತ್ಯುತ್ತಮ ಫೋಟೋಗಳು ಮತ್ತು ವೀಡಿಯೊಗಳನ್ನು ರೆಕಾರ್ಡ್ ಮಾಡಲು ಸಾಧ್ಯವಾಗುತ್ತದೆ. ಇದು  ನೈಟ್ ಮೋಡ್, ಪೋರ್ಟ್ರೇಟ್ ಮೋಡ್ ಮತ್ತು ಸ್ಮಾರ್ಟ್ HDRನಂತಹ ವೈಶಿಷ್ಟ್ಯಗಳನ್ನು ಸಹ ಒಳಗೊಂಡಿದೆ.


ಇದನ್ನೂ ಓದಿ : ಏರ್‌ಟೆಲ್ ಬಳಕೆದಾರರಿಗೆ ಗುಡ್ ನ್ಯೂಸ್! ಈ ಅಗ್ಗದ ಪ್ಲಾನ್‌ನಲ್ಲಿ ಪ್ರತಿದಿನ 2GB ಡೇಟಾ ಲಭ್ಯ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ