Realme 5G Smartphones Price Cut: ಇತ್ತೀಚೆಗೆ ಬಿಡುಗಡೆಯಾದ ರಿಯಲ್‌ಮಿ ಪಿ ಸೀರೀಸ್ 5ಜಿ ಸ್ಮಾರ್ಟ್‌ಫೋನ್‌ಗಳ ಮೇಲೆ ಕಂಪನಿ ಭಾರೀ ಕಡಿತವನ್ನು ಘೋಷಿಸಿದೆ. ರಿಯಲ್‌ಮಿ ಕಂಪನಿಯ ಹೊಸದಾಗಿ ಬಿಡುಗಡೆಯಾದ P3,P3ಪ್ರೊ ಮತ್ತು P3 ಅಲ್ಟ್ರಾ ಮಾದರಿಗಳ ಮೇಲೆ ಮೂಲ ಬೆಲೆಗಿಂತ ಬರೋಬ್ಬರಿ 7,000 ರೂಪಾಯಿಗಳ ರಿಯಾಯಿತಿಯನ್ನು ನೀಡುತ್ತಿದೆ.
ರಿಯಲ್‌ಮಿ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ನಡೆಯುತ್ತಿರುವ P-ಸೀರೀಸ್ ಕಾರ್ನಿವಲ್ ಸೇಲ್ ನಲ್ಲಿ ಭಾರತದಲ್ಲಿ ಇತ್ತೀಚೆಗೆ ಪದಾರ್ಪಣೆ ಮಾಡಿರುವ ರಿಯಲ್‌ಮಿ P3 ಸರಣಿಗಳ ಮೇಲೆ ಬ್ಯಾಂಕ್ ರಿಯಾಯಿತಿ, ನೋ ಕಾಸ್ಟ್ ಇಎಂಐ ಸೇರಿದಂತೆ ಹಲವು ಕೊಡುಗೆಗಳನ್ನು ನೀಡಲಾಗುತ್ತಿದೆ.
ಇದನ್ನೂ ಓದಿ- ಕೇವಲ 75ರೂ.ಗೆ ಸೂಪರ್ ರಿಚಾರ್ಜ್ ಆಫರ್ ಬಿಡುಗಡೆ ಮಾಡಿದ Jio: ಅನ್ಲಿಮಿಟೆಡ್ ಕಾಲ್, ಎಸ್ಎಂಎಸ್, ಡೇಟಾ ಎಲ್ಲವೂ ಲಭ್ಯ
ರಿಯಲ್‌ಮಿ P-ಸೀರೀಸ್ ಕಾರ್ನಿವಲ್ ಸೇಲ್ ನ ಕೊಡುಗೆಯಲ್ಲಿ ರಿಯಲ್‌ಮಿ P3 ಮತ್ತು ರಿಯಲ್‌ಮಿ P3 ಪ್ರೊ ಖರೀದಿಯಲ್ಲಿ ಗ್ರಾಹಕರು 4,000 ರೂ.ಗಳವರೆಗೆ ಬ್ಯಾಂಕ್ ರಿಯಾಯಿತಿಯಾಗಿ ಹಾಗೂ 3,000ರೂ.ಗಳ ಎಕ್ಸ್ಚೇಂಜ್ ಕೊಡುಗೆಗಳನ್ನು ಪಡೆಯಬಹುದು. ಇದಲ್ಲದೆ, 23,999ರೂ.ಗಳ ಮೂಲ ಬೆಲೆಯೊಂದಿಗೆ ಬಿಡುಗಡೆಯಾಗಿರುವ ರಿಯಲ್‌ಮಿ P3 ಪ್ರೊ 5ಜಿ ಸ್ಮಾರ್ಟ್‌ಫೋನ್ ಅನ್ನು 19,999 ರೂ.ಗಳಿಗೆ ನಿಮ್ಮದಾಗಿಸಬಹುದು.
ಇದನ್ನೂ ಓದಿ- ಹೈ-ಸ್ಪೀಡ್ ಇಂಟರ್ನೆಟ್ ಜೊತೆಗೆ ದೀರ್ಘಾವಧಿ ಮಾನ್ಯತೆಯ ಅಗ್ಗದ ರಿಚಾರ್ಜ್ ಪ್ಲಾನ್ ಪರಿಚಯಿಸಿದ ಬಿಎಸ್‌ಎನ್‌ಎಲ್
Realme P3 ಮೂಲ ಮಾದರಿಯ 8GB RAM ಮತ್ತು 128GB ಸ್ಟೋರೇಜ್ ಹೊಂದಿರುವ ಸ್ಮಾರ್ಟ್‌ಫೋನ್ ಖರೀದಿಸುವಾಗ 1,000 ರೂ.ವರೆಗೆ ಬ್ಯಾಂಕ್ ಆಫರ್ ಲಭ್ಯವಿದ್ದು 15,999ರೂ.ಗೆ ಈ ಫೋನ್ ಖರೀದಿಸಬಹುದಾಗಿದೆ. ಇದರ ಇನ್ನೆರಡು ರೂಪಾಂತರಗಳ ಮೇಲೆ 2,000 ರೂ.ಗಳ ಬ್ಯಾಂಕ್ ಕೊಡುಗೆ ಲಭ್ಯವಾಗಲಿದೆ.
ಲಭ್ಯವಿರುವ ಮಾಹಿತಿಗಳ ಪ್ರಕಾರ, 50MP ಕ್ಯಾಮರಾ, 12GB RAM, 6,000mAh ಬ್ಯಾಟರಿಯಿಂದ ಚಾಲಿತವಾಗುವ 6.83-ಇಂಚಿನ ವಿಶಾಲವಾದ ಡಿಸ್‌ಪ್ಲೇ ಹೊಂದಿರುವ 256GB ವರೆಗೆ ಶೇಖರಣಾ ಸಾಮರ್ಥ್ಯದ ರಿಯಲ್‌ಮಿ P3 ಅಲ್ಟ್ರಾ ಆವೃತ್ತಿಯನ್ನು ಖರೀದಿಸುವಾಗ 3,000ರೂ.ಗಳ ಬ್ಯಾಂಕ್ ಕೊಡುಗೆ ಲಭ್ಯವಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









