ನಿಮ್ಮ ಫೋನ್ ಮತ್ತು ಅದರಲ್ಲಿರುವ ವೈಯಕ್ತಿಕ ಮಾಹಿತಿ ಯಾವಾಗಲೂ ಸುರಕ್ಷಿತವಾಗಿರಬೇಕಾದರೆ, ಕೆಲವು ಸುಲಭ ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ.

ಇಂದಿನ ಕಾಲದಲ್ಲಿ, ಬಹುತೇಕ ಎಲ್ಲರ ಬಳಿಯೂ ಸ್ಮಾರ್ಟ್ಫೋನ್ ಇದೆ. ಕರೆಗಳಿಂದ ಹಿಡಿದು ಪೇಮೆಂಟ್, ಆನ್ಲೈನ್ ಶಾಪಿಂಗ್ ಅಥವಾ ಸಾಮಾಜಿಕ ಮಾಧ್ಯಮದವರೆಗೆ ನಾವು ಸ್ಮಾರ್ಟ್ಫೋನ್ಗಳನ್ನು ಹೆಚ್ಚಾಗಿ ಬಳಸುತ್ತೇವೆ. ಹೀಗಿರುವಾಗ ಸುರಕ್ಷಿತವಾಗಿರಿಸಬೇಕಾದ ಅನೇಕ ಸಂಗತಿಗಳು ನಮ್ಮ ಫೋನ್ ನಲ್ಲಿ ಇರುತ್ತದೆ. ಒಂದು ವೇಳೆ ಈ ಮಾಹಿತಿಗಳು ಆಕಸ್ಮಿಕವಾಗಿ ಹ್ಯಾಕರ್ನ ಕೈಗೆ ಬಿದ್ದರೆ, ದೊಡ್ಡ ಸಮಸ್ಯೆ ಎದುರಾಗಬಹುದು. ನಾವು ಸ್ವಲ್ಪ ಅಜಾಗರೂಕತೆ ವಹಿಸಿದರೂ ಸೈಬರ್ ವಂಚನೆಯಾ ಜಾಲಕ್ಕೆ ಬಲಿಯಾಗಬೇಕಾಗುತ್ತದೆ. ನಿಮ್ಮ ಫೋನ್ ಮತ್ತು ಅದರಲ್ಲಿರುವ ವೈಯಕ್ತಿಕ ಮಾಹಿತಿ ಯಾವಾಗಲೂ ಸುರಕ್ಷಿತವಾಗಿರಬೇಕಾದರೆ, ಕೆಲವು ಸುಲಭ ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ.
ಪಾಸ್ವರ್ಡ್ಗಳನ್ನು ಮರೆತುಬಿಡುವ ಭಯದಿಂದ ಜನರು ನೇರವಾಗಿ ಫೋನ್ನಲ್ಲಿಯೇ ಪಾಸ್ವರ್ಡ್ ಸೇವ್ ಮಾಡಿಟ್ಟುಕೊಳ್ಳುತ್ತಾರೆ. ಆದರೆ, ಇದು ದೊಡ್ಡ ಮಟ್ಟದ ಅಪಾಯವನ್ನು ತಂದೊಡ್ಡಬಹುದು. ನಿಮ್ಮ ಫೋನ್ ಎಂದಾದರೂ ಕದ್ದು ಹೋದರೆ ಅಥವಾ ಹ್ಯಾಕ್ ಆಗಿದ್ದರೆ, ನಿಮ್ಮ ಎಲ್ಲಾ ಖಾತೆಗಳಿಗೆ ಪ್ರವೇಶ ಪಡೆಯುವುದು ಹ್ಯಾಕರ್ ಗಳಿಗೆ ಸುಲಭವಾಗಿ ಬಿಡಬಹುದು. ಈ ಕಾರಣದಿಂದ ಫೋನ್ನಲ್ಲಿ ಪಾಸ್ವರ್ಡ್ಗಳನ್ನು ಸೇವ್ ಮಾಡುವ ಅಭ್ಯಾಸವನ್ನು ಬಿಟ್ಟು ಬಿಡಬೇಕು.
ಇದರೊಂದಿಗೆ, ನಿಮ್ಮ ಫೋನ್ನಲ್ಲಿ ಥರ್ಡ್ ಪಾರ್ಟಿ ಅಪ್ಲಿಕೇಶನ್ಗಳನ್ನು ಎಂದಿಗೂ ಇನ್ಸ್ಟಾಲ್ ಮಾಡಬೇಡಿ. ಇದು ಸ್ಮಾರ್ಟ್ಫೋನ್ನಲ್ಲಿ ವೈರಸ್ಗಳು ಅಥವಾ ಮಾಲ್ವೇರ್ಗಳನ್ನು ಹಾಕಬಹುದು. ಅಂತಹ ಅಪ್ಲಿಕೇಶನ್ಗಳಿಂದಾಗಿ, ನಿಮ್ಮ ಫೋನ್ ಕೂಡಾ ಹ್ಯಾಕ್ ಆಗಬಹುದು. ಅದರ ಕಾರ್ಯಕ್ಷಮತೆ ನಿಧಾನವಾಗಬಹುದು. ಆದ್ದರಿಂದ, ಯಾವಾಗಲೂ Google Play Store ಅಥವಾ ವಿಶ್ವಾಸಾರ್ಹ ಮೂಲಗಳಿಂದ ಮಾತ್ರ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಿ. ಅಲ್ಲದೆ, ಇನ್ಸ್ಟಾಲ್ ಮಾಡುವ ಮೊದಲು, ಆ ಅಪ್ಲಿಕೇಶನ್ನ ವಿಮರ್ಶೆ ಮತ್ತು ರೇಟಿಂಗ್ ಅನ್ನು ಪರಿಶೀಲಿಸಿಕೊಳ್ಳಿ.
ನಿಮ್ಮ ಸ್ಮಾರ್ಟ್ಫೋನ್ ಅನ್ನು ರೂಟ್ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಏಕೆಂದರೆ, ಇದು ನಿಮ್ಮ ಫೋನ್ನ ಸುರಕ್ಷತೆಯನ್ನು ದುರ್ಬಲಗೊಳಿಸುತ್ತದೆ. ರೂಟ್ ಮಾಡಿದ ನಂತರ, ನಿಮ್ಮ ಫೋನ್ ಹ್ಯಾಕರ್ಗಳಿಗೆ ಸುಲಭ ಅವಕಾಶ ನೀಡುತ್ತದೆ. ಅಲ್ಲಿಂದ ಅವರು ನಿಮ್ಮ ಡೇಟಾವನ್ನು ಸುಲಭವಾಗಿ ಕದಿಯಬಹುದು. ರೂಟ್ ಮಾಡುವುದರಿಂದ ಫೋನ್ನ ಬ್ಯಾಟರಿ ಬಾಳಿಕೆ ಹೆಚ್ಚಾಗುತ್ತದೆ ಎನ್ನುವುದು ತಪ್ಪು ಕಲ್ಪನೆ.
ಸಾಮಾನ್ಯವಾಗಿ ನಾವು ಯಾವುದೇ ಅಪ್ಲಿಕೇಶನ್ಗೆ ಯೋಚಿಸದೆ ಅನುಮತಿಗಳನ್ನು ನೀಡುತ್ತೇವೆ. ಇದು ನಾವು ಮಾಡುವ ದೊಡ್ಡ ತಪ್ಪು. ಅನೇಕ ಅಪ್ಲಿಕೇಶನ್ಗಳು ಅಗತ್ಯವಿಲ್ಲದಂಥಹ ಅನುಮತಿಗಳನ್ನು ಕೇಳುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಅಪ್ಲಿಕೇಶನ್ ನಿಜವಾಗಿಯೂ ಅದು ಕೇಳುತ್ತಿರುವ ಅನುಮತಿಯ ಅಗತ್ಯವಿದೆಯೇ ಎನ್ನುವುದನ್ನು ಎಚ್ಚರಿಕೆಯಿಂದ ಪರಿಶೀಲಿಸಿ ಅನುಅತಿ ನೀಡಿ.
ನಿಮ್ಮ ಸ್ಮಾರ್ಟ್ಫೋನ್ನ ಇಂಟರ್ನೆಟ್ ಸುರಕ್ಷತೆಯನ್ನು ಹೆಚ್ಚಿಸಬೇಕಾದರೆ VPN ಬಳಸುವುದು ಉತ್ತಮ ಮಾರ್ಗವಾಗಿದೆ. iOSನಲ್ಲಿ ಭದ್ರತಾ ವ್ಯವಸ್ಥೆಯು ಈಗಾಗಲೇ ಪ್ರಬಲವಾಗಿದೆ, ಆದರೆ Android ಬಳಕೆದಾರರು ಸುರಕ್ಷಿತ ಬ್ರೌಸಿಂಗ್ಗಾಗಿ VPN ಅನ್ನು ಬಳಸಬೇಕು. ಇಂಟರ್ನೆಟ್ನಲ್ಲಿ ನೀವು ಹಲವು ರೀತಿಯ VPN ಗಳನ್ನು ಕಾಣಬಹುದು. , ಆದರೆ ಪ್ರತಿಯೊಂದು VPN ವಿಶ್ವಾಸಾರ್ಹವಲ್ಲ. ತಪ್ಪು ಅಥವಾ ಉಚಿತ VPN ಬಳಸುವುದರಿಂದ ನಿಮ್ಮ ಫೋನ್ ಹೆಚ್ಚು ಅಪಾಯಕ್ಕೆ ಸಿಲುಕಬಹುದು.