)
Infinix Smart 10: ಇನ್ಫಿನಿಕ್ಸ್ ತನ್ನ ಸ್ಮಾರ್ಟ್ ಸರಣಿಯ ಮತ್ತೊಂದು ಆರಂಭಿಕ ಹಂತದ ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಚೀನೀ ಬ್ರ್ಯಾಂಡ್ನ ಈ ಫೋನ್ ಅನ್ನು ಸ್ಮಾರ್ಟ್ 10 ಹೆಸರಿನಲ್ಲಿ ಬಿಡುಗಡೆ ಮಾಡಲಾಗಿದೆ. ಕಂಪನಿಯು ತನ್ನ ವಿಭಾಗದಲ್ಲಿ ಇದು ಮೊದಲ ಫೋನ್ ಎಂದು ಹೇಳಿಕೊಂಡಿದೆ. ಇದು 4 ವರ್ಷಗಳ ಕಾಲ ಲ್ಯಾಗ್-ಮುಕ್ತ ಅನುಭವವನ್ನು ನೀಡುತ್ತದೆ. ಅಂದರೆ ಕಂಪನಿಯು 4 ವರ್ಷಗಳ ಕಾಲ ಭದ್ರತಾ ಅಪ್ಡೇಟ್ಗಳನ್ನ ನೀಡುತ್ತದೆ. ಈ ಫೋನ್ ಇನ್ಫಿನಿಕ್ಸ್ AI ವೈಶಿಷ್ಟ್ಯಗಳನ್ನು ಹೊಂದಿದ್ದು, 5000mAhನ ಪ್ರಬಲ ಬ್ಯಾಟರಿಯನ್ನು ಹೊಂದಿರುತ್ತದೆ.
ಬೆಲೆ ಎಷ್ಟು?
ಇನ್ಫಿನಿಕ್ಸ್ ಸ್ಮಾರ್ಟ್ 10ನ ನೋಟ ಮತ್ತು ವಿನ್ಯಾಸವು ಐಫೋನ್ 16ಗೆ ಹೋಲುತ್ತದೆ. ಕಂಪನಿಯು ಈ ಫೋನ್ ಅನ್ನು ಕೇವಲ 4GB RAM + 64GB ಸ್ಟೋರೇಜ್ ರೂಪಾಂತರದಲ್ಲಿ ಪರಿಚಯಿಸಿದೆ. ಇದು ಐರಿಸ್ ಬ್ಲೂ, ಸ್ಲೀಕ್ ಬ್ಲಾಕ್, ಟೈಟಾನಿಯಂ ಸಿಲ್ವರ್ ಮತ್ತು ಟ್ವಿಲೈಟ್ ಗೋಲ್ಡ್ ಬಣ್ಣಗಳಲ್ಲಿ ಬರುತ್ತದೆ. ಈ ಇನ್ಫಿನಿಕ್ಸ್ ಫೋನ್ನ ಬೆಲೆ ಕೇವಲ 6,799 ರೂ. ಇದೆ. ಈ ಫೋನ್ ಆಗಸ್ಟ್ 2ರಂದು ಮಧ್ಯಾಹ್ನ 12 ಗಂಟೆಗೆ ಇ-ಕಾಮರ್ಸ್ ವೆಬ್ಸೈಟ್ ಫ್ಲಿಪ್ಕಾರ್ಟ್ನಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ.
ಇನ್ಫಿನಿಕ್ಸ್ ಸ್ಮಾರ್ಟ್ 10ನ ವೈಶಿಷ್ಟ್ಯಗಳು
ಇನ್ಫಿನಿಕ್ಸ್ ಸ್ಮಾರ್ಟ್ 10ನ ವೈಶಿಷ್ಟ್ಯಗಳ ಕುರಿತು ಹೇಳುವುದಾದರೆ, ಈ ಫೋನ್ 6.67-ಇಂಚಿನ HD+ ಡಿಸ್ಪ್ಲೇಯೊಂದಿಗೆ ಬರುತ್ತದೆ. ಕಂಪನಿಯು ಫೋನ್ನಲ್ಲಿ IPS LCD ಡಿಸ್ಪ್ಲೇಯನ್ನು ಬಳಸಿದೆ. ಫೋನ್ನ ಡಿಸ್ಪ್ಲೇಯ ಗರಿಷ್ಠ ಹೊಳಪು 700 ನಿಟ್ಗಳವರೆಗೆ ಇರಲಿದ್ದು, ಇದು 240Hz ಟಚ್ ಸ್ಯಾಂಪ್ಲಿಂಗ್ ರೇಟ್ಅನ್ನ ಹೊಂದಿರುತ್ತದೆ. ಈ ಇನ್ಫಿನಿಕ್ಸ್ ಫೋನ್ ಯುನಿಸಾಕ್ T7250 ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸುತ್ತದೆ. ಫೋನ್ 4GB RAM ಜೊತೆಗೆ 64GB ಆಂತರಿಕ ಸ್ಟೋರೇಜ್ಅನ್ನು ಹೊಂದಿದೆ. ಇದನ್ನು ಮೈಕ್ರೋ SD ಕಾರ್ಡ್ ಮೂಲಕ 2TBವರೆಗೆ ವಿಸ್ತರಿಸಬಹುದು.
ಈ ಫೋನ್ ಆಂಡ್ರಾಯ್ಡ್ 15 ಆಧಾರಿತ XOS 15.1ನಲ್ಲಿ ಕಾರ್ಯನಿರ್ವಹಿಸುತ್ತದೆ. ಕಂಪನಿಯು ಈ ಫೋನ್ನಲ್ಲಿ ಇನ್ಫಿನಿಕ್ಸ್ AI ವೈಶಿಷ್ಟ್ಯವನ್ನು ನೀಡಿದೆ. ಈ ಫೋನ್ನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಲಭ್ಯವಿರುತ್ತದೆ. ಫೋನ್ 8MP ಮುಖ್ಯ ಮತ್ತು ದ್ವಿತೀಯ ಕ್ಯಾಮೆರಾವನ್ನು ಹೊಂದಿರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ ಫೋನ್ನಲ್ಲಿ 8MP ಕ್ಯಾಮೆರಾವನ್ನು ನೀಡಲಾಗಿದೆ. ಈ ಫೋನ್ IP64 ರೇಟಿಂಗ್ ಹೊಂದಿದ್ದು, ಧೂಳು ಮತ್ತು ಸ್ಪ್ಲಾಶ್ ನಿರೋಧಕ ವೈಶಿಷ್ಟ್ಯಗಳನ್ನು ಹೊಂದಿದೆ.