)
iPhone 15: ಐಫೋನ್ಗಳು ಪ್ರೀಮಿಯಂ ಸ್ಮಾರ್ಟ್ಫೋನ್ಗಳ ವರ್ಗಕ್ಕೆ ಸೇರಿವೆ. ಅನೇಕರು ಪ್ರೀಮಿಯಂ ಸ್ಮಾರ್ಟ್ಫೋನ್ ಖರೀದಿಸಲು ಬಯಸಿದಾಗಲೆಲ್ಲಾ, ಐಫೋನ್ ಖರೀದಿಸುತ್ತಾರೆ. ಇವು ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳಿಗಿಂತ ಹೆಚ್ಚು ದುಬಾರಿಯಾಗಿವೆ. ದುಬಾರಿ ಬೆಲೆಯಿಂದ ಬಹುತೇಕ ಮಂದಿಗೆ ಐಫೋನ್ ಖರೀದಿಸಲು ಸಾಧ್ಯವಿಲ್ಲ. ಅನೇಕ ಜನರು ರಿಯಾಯಿತಿ ಕೊಡುಗೆಯ ಮಾರಾಟಕ್ಕಾಗಿ ಕಾಯುತ್ತಾರೆ. ನೀವೂ ಐಫೋನ್ ಖರೀದಿಸಲು ಯೋಜಿಸುತ್ತಿದ್ದರೆ ನಿಮಗೆ ಇಲ್ಲಿದೆ ಸಿಹಿಸುದ್ದಿ. ನೀವು ಇದೀಗ ಐಫೋನ್ 15ಅನ್ನು 10,000 ರೂ.ಗೆ ಖರೀದಿಸಬಹುದು.
ಐಫೋನ್ನ ಇತ್ತೀಚಿನ ಸರಣಿಯು ಐಫೋನ್ 16 ಸರಣಿಯಾಗಿದೆ. ಈ ಸರಣಿಯ ಬಿಡುಗಡೆಯ ನಂತರ ಹಳೆಯ ಮಾದರಿಗಳ ಬೆಲೆಗಳು ತೀವ್ರ ಕುಸಿತ ಕಂಡಿವೆ. ಐಫೋನ್ 16 ಮಾರುಕಟ್ಟೆಯಲ್ಲಿ ಬಿಡುಗಡೆಯಾದ ತಕ್ಷಣವೇ ಆಪಲ್ ಸಹ ಅನೇಕ ಮಾದರಿಗಳನ್ನು ಸ್ಥಗಿತಗೊಳಿಸಿತು. ಈಗ ಐಫೋನ್ 15 ಬೆಲೆಗಳು ಕೂಡ ಗಣನೀಯವಾಗಿ ಇಳಿದಿವೆ. ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳು ಪ್ರಸ್ತುತ ಐಫೋನ್ 15 ಸರಣಿಯಲ್ಲಿ ಗ್ರಾಹಕರಿಗೆ ಉತ್ತಮ ಕೊಡುಗೆ ನೀಡುತ್ತಿವೆ. ಅಮೆಜಾನ್ ಸಹ ತನ್ನ ಗ್ರಾಹಕರಿಗೆ ವಿಶೇಷ ಕೊಡುಗೆಯನ್ನು ನೀಡಿದೆ. ಅಮೆಜಾನ್ನ ಕೊಡುಗೆಯ ಲಾಭವನ್ನು ಪಡೆದುಕೊಳ್ಳುವ ಮೂಲಕ, ನೀವು ಬಜೆಟ್ ವಿಭಾಗದ ಆಂಡ್ರಾಯ್ಡ್ ಫೋನ್ನ ಬೆಲೆಗೆ ಐಫೋನ್ 15 ಖರೀದಿಸಬಹುದು. ಐಫೋನ್ 15ನಲ್ಲಿ ಲಭ್ಯವಿರುವ ಅದ್ಭುತ ಕೊಡುಗೆಯ ಕುರಿತು ವಿವರವಾದ ಮಾಹಿತಿ ಇಲ್ಲಿದೆ ನೋಡಿ...
ಐಫೋನ್ 15 ಬೆಲೆ ಕುಸಿತ
ಐಫೋನ್ 15 ಪ್ರಸ್ತುತ ಅಮೆಜಾನ್ನಲ್ಲಿ 79,900 ರೂ.ಗಳಿಗೆ ಪಟ್ಟಿ ಮಾಡಲಾಗಿದೆ. ಈ ಬೆಲೆ ಅದರ 128GB ರೂಪಾಂತರಕ್ಕಿದೆ. ಇದೀಗ ನೀವು ಅದನ್ನು ಅದರ ನಿಜವಾದ ಬೆಲೆಗಿಂತಲೂ ಕಡಿಮೆ ಬೆಲೆಗೆ ಖರೀದಿಸಬಹುದು. ಅಮೆಜಾನ್ ತನ್ನ ಗ್ರಾಹಕರಿಗೆ ಐಫೋನ್ನ ಈ ರೂಪಾಂತರದ ಮೇಲೆ ನೇರ 23% ರಿಯಾಯಿತಿ ನೀಡುತ್ತಿದೆ. ಈ ಆಫರ್ ನಂತರ ನೀವು ಅದನ್ನು ಆನ್ಲೈನ್ ಪ್ಲಾಟ್ಫಾರ್ಮ್ನಿಂದ ಕೇವಲ 61,400 ರೂ.ಗೆ ಖರೀದಿಸಬಹುದು. ನಿಮ್ಮ ಬಜೆಟ್ ಕಡಿಮೆಯಿದ್ದರೆ ಅಮೆಜಾನ್ನಲ್ಲಿ EMIನಲ್ಲಿ ಮನೆಗೆ ಖರೀದಿಸುವ ಅವಕಾಶವಿದೆ. ನೀವು EMI ಆಯ್ಕೆ ಆರಿಸಿಕೊಂಡರೆ ಕೇವಲ 2,764 ರೂ. ಪಾವತಿಸಬೇಕಾಗುತ್ತದೆ.
10 ಸಾವಿರಕ್ಕೆ ಖರೀದಿಸಲು ಹೀಗೆ ಮಾಡಿ
ಐಫೋನ್ 15 128GBಗಾಗಿ ಅಮೆಜಾನ್ ಉತ್ತಮ ವಿನಿಮಯ ಕೊಡುಗೆ ನೀಡುತ್ತಿದೆ. ಈ ಕೊಡುಗೆಯ ಮೂಲಕ ನೀವು ಈ ಪ್ರೀಮಿಯಂ ಫೋನ್ ಅನ್ನು ನಿರೀಕ್ಷೆಗಿಂತ ದೊಡ್ಡ ರಿಯಾಯಿತಿಯೊಂದಿಗೆ ಖರೀದಿಸಬಹುದು. ಇದರ ಮೇಲೆ ಅಮೆಜಾನ್ 52,200 ರೂ.ಗಳ ವಿನಿಮಯ ಕೊಡುಗೆ ನೀಡುತ್ತಿದೆ. ನೀವು ಪೂರ್ಣ ವಿನಿಮಯ ಮೌಲ್ಯವನ್ನು ಪಡೆದರೆ ಈ ಫೋನ್ ಅನ್ನು ಕೇವಲ 9,200 ರೂ.ಗಳಿಗೆ ಖರೀದಿಸಬಹುದು.
ಐಫೋನ್ 15ನ ವಿಶೇಷಣಗಳು
* ಐಫೋನ್ 15ರಲ್ಲಿ ಆಪಲ್ ಅಲ್ಯೂಮಿನಿಯಂ ಫ್ರೇಮ್ನೊಂದಿಗೆ ಉತ್ತಮ ವಿನ್ಯಾಸವನ್ನು ನೀಡಿದೆ.
* ಈ ಫೋನ್ IP68 ರೇಟಿಂಗ್ ಹೊಂದಿದ್ದು, ಧೂಳು ಮತ್ತು ನೀರಿನಿಂದ ಸಂಪೂರ್ಣವಾಗಿ ಸುರಕ್ಷಿತವಾಗಿದೆ.
* ಆಪಲ್ ಈ ಐಫೋನ್ನಲ್ಲಿ 6.1-ಇಂಚಿನ ಸೂಪರ್ ರೆಟಿನಾ XDR OLED ಡಿಸ್ಪ್ಲೇಯನ್ನು ಒದಗಿಸಿದೆ.
* ಡಿಸ್ಪ್ಲೇ ಒಡೆಯದಂತೆ ರಕ್ಷಿಸಲು ಅದಕ್ಕೆ ಸೆರಾಮಿಕ್ ಶೀಲ್ಡ್ ಗ್ಲಾಸ್ ಒದಗಿಸಲಾಗಿದೆ.
* ಐಫೋನ್ 15 ಆರಂಭಿಕವಾಗಿ ಹೇಳುವುದಾದರೆ, ಈ ಸ್ಮಾರ್ಟ್ಫೋನ್ iOS 17ನಲ್ಲಿ ಕಾರ್ಯನಿರ್ವಹಿಸುತ್ತದೆ.
* ಕಾರ್ಯಕ್ಷಮತೆಗಾಗಿ ಈ ಫೋನ್ನಲ್ಲಿ A16 ಬಯೋನಿಕ್ ಚಿಪ್ಸೆಟ್ ಒದಗಿಸಲಾಗಿದ್ದು, ಇದು ಭಾರೀ ಕೆಲಸಗಳಲ್ಲಿ ಅದ್ಭುತವಾಗಿ ಕಾರ್ಯನಿರ್ವಹಿಸುತ್ತದೆ.
* ಐಫೋನ್ 15 6GBವರೆಗೆ RAM ಮತ್ತು 512GBವರೆಗೆ ಸ್ಟೋರೇಜ್ ಹೊಂದಿದೆ.
* ಛಾಯಾಗ್ರಹಣ ಪ್ರಿಯರಿಗಾಗಿ ಇದು 48 + 12 ಮೆಗಾಪಿಕ್ಸೆಲ್ ಸೆನ್ಸಾರ್ಅನ್ನ ಒದಗಿಸಲಾದ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ.
* ಇದು ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 12 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.