)
ವಿಶ್ವದ ಪ್ರತಿಷ್ಠಿತ ಕಂಪನಿ ಆಪಲ್ ಕಂಪನಿ ಐಫೋನ್ 17 ರಿಲೀಸ್ ಮಾಡಿತ್ತು. ಆಗ ಗ್ರಾಹಕರು ಕ್ಯೂನಲ್ಲಿ ನಿಂತುಕೊಂಡು ವಿಶ್ವದ್ಯಾಂತ ಐಫೋನ್ 17 ಅನ್ನು ಖರೀದಿ ಮಾಡಿದ್ದರು. ಇದರ ಸರಣಿ ಮುಂದುವರೆದಿದ್ದು ಐಫೋನ್ 18 ಪ್ರೊ ಮ್ಯಾಕ್ಸ್ ಕೂಡ ಕೆಲವು ತಿಂಗಳಲ್ಲಿ ಮಾರ್ಕೆಟ್ಗೆ ಬರುತ್ತದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಕೆಲವು ಮಾಹಿತಿ ಲೀಕ್ ಆಗಿದ್ದು 2026ರ ಮಧ್ಯದಲ್ಲಿ ಎಲ್ಲರ ಕೈಸೇರಲಿದೆ ಎನ್ನಲಾಗಿದೆ.
ಐಫೋನ್ 17ರಲ್ಲಿ ಇರುವಂತೆ ಐಫೋನ್ 18 ಪ್ರೊ ಮ್ಯಾಕ್ಸ್ನಲ್ಲೂ 120Hz ಪ್ರೊಮೊಷನ್ ಡಿಸ್ಪ್ಲೈ ಅನ್ನೇ ಮುಂದುವರೆಸಿರುವ ಸಾಧ್ಯತೆ ಇದೆ. ಏಕೆಂದ್ರೆ ಐಫೋನ್ ಅಭಿಮಾನಿಗಳು ಎಲ್ಲ 120Hz ಪ್ರೊಮೊಷನ್ ಡಿಸ್ಪ್ಲೈನ ಹೆಚ್ಚು ಇಷ್ಟ ಪಟ್ಟಿದ್ದರು. ವರದಿ ಪ್ರಕಾರ, ಆಪಲ್ ತನ್ನ ಮುಂದಿನ ಜನರೇಷನ್ಗೆ A20 ಪ್ರೊ ಚಿಪ್ ಅನ್ನು ಪರಿಚಯಿಸಲು ತಯಾರಿಯಲ್ಲಿದೆ. AI ಪವರ್ ಫ್ಯೂಚರ್ಗಳನ್ನು ಇದು ಅನ್ಲಾಕ್ ಮಾಡುತ್ತದೆ. 17ರ ಸಿರೀಸ್ನಂತೆ 256 ಜಿಬಿ ಸ್ಟೋರೆಜ್ ಹೊಂದಿರುವ ಸಾಧ್ಯತೆ ಇದೆ.
iOS 27ನೊಂದಿಗೆ ಐಫೋನ್ 18 ಲಾಂಚ್ ಆಗಲಿದೆ. ಬಳಕೆದಾರರಿಗೆ ಹೆಚ್ಚು ಉಪಯೋಗವಾಗುಂತೆ, ಇಷ್ಟವಾಗುಂತೆ ಈ ಫೋನ್ ಸಿದ್ಧಪಡಿಸಲಾಗುತಿದೆ. ಚಾಟ್ಜಿಪಿಟಿ, ಜೆಮಿನಿಗಳಿಗೆ ಪ್ರತಿಸ್ಪರ್ಧಿಗಳಾಗಿ ಆಪಲ್ ಚಾಟ್ಬಾಟ್ ಅನ್ನು ಈ ಐಫೋನ್ನಲ್ಲಿ ಅಳವಡಿಕೆ ಮಾಡುವ ಪ್ಲಾನ್ನಲ್ಲಿದೆ. ಪ್ರತಿ ಬಾರಿ ಐಫೋನ್ ಸರಣಿ ರಿಲೀಸ್ ಮಾಡಿದಾಗ ಕ್ಯಾಮೆರಾ ಕುರಿತು ಹೆಚ್ಚಿನ ಚರ್ಚೆ ಆಗುತ್ತಿತ್ತು. ಅದರಂತೆ ಐಫೋನ್ 18 ಪ್ರೊ ಮ್ಯಾಕ್ಸ್ ಅತ್ಯಂತ ಸುಧಾರಿತ ಕ್ಯಾಮೆರಾವನ್ನ ಹೊಂದಿದೆ.
ಐಪೋನ್ ಪ್ರತಿ ಬಾರಿ ಮಾರ್ಕೆಟ್ಗೆ ಬಂದಾಗ ಅದರ ಕ್ಯಾಮೆರಾ ಬಗ್ಗೆ ಹೆಚ್ಚು ಮಾತನಾಡಲಾಗುತ್ತಿತ್ತು. ಹಾಗೇ ಐಫೋನ್ 18 ಪ್ರೊ ಮ್ಯಾಕ್ಸ್ ತ್ರಿಬಲ್ ಕ್ಯಾಮೆರಾ ಇದ್ದು ಮೂರಕ್ಕೂ 48 ಮೆಗಾಪಿಕ್ಸೆಲ್ ಸೆನ್ಸರ್ ಇರುತ್ತದೆ ಎನ್ನಲಾಗಿದೆ. ಇವುಗಳನ್ನು ಫೈಮರಿ ವೈಡ್ ಲೈನ್ಸ್, ಪೆರಿಸ್ಕೋಪ್ ಟೆಲಿಫೋಟೋ ಮತ್ತು ಅಲ್ಟ್ರಾವೈಡ್ ಶೂಟರ್ ಇವೆ. ಇದರಲ್ಲಿಯೂ ಕ್ಯಾಮೆರಾ ಕಂಟ್ರೋಲ್ ಬಟನ್ ಇನ್ನಷ್ಟು ಸುಲಭವಾಗಿರಲಿದೆ. ಹೊಸ ಐಫೋನ್ ವಿಭಿನ್ನ ಬಣ್ಣಗಳನ್ನು ಹೊಂದಿರುವ ಸಾಧ್ಯತೆ ಇದೆ.
ಅಮೆರಿಕ, ಭಾರತದಲ್ಲಿ ಐಫೋನ್ 18 ಪ್ರೊ ಮ್ಯಾಕ್ಸ್ ರಿಲೀಸ್ ಯಾವಾಗ?
ಹಿಂದಿನ ಬೆಲೆಗಳಿಗೆ ಹೋಲಿಕೆ ಮಾಡಿದರೆ ಐಫೋನ್ 18 ಪ್ರೊ ಮ್ಯಾಕ್ಸ್ ಬೆಲೆ ಜಾಸ್ತಿ ಇರುತ್ತದೆ. ಏಕೆಂದರೆ ಎಲ್ಲ ಹೊಸ ಫ್ಯೂಚರ್ಗಳನ್ನು ಹೊಂದಿರುವುದರಿಂದ ಬೆಲೆ ಸಾಮಾನ್ಯವಾಗಿ ಹೆಚ್ಚಿರುತ್ತದೆ. ಅಮೆರಿಕದಲ್ಲಿ 1,299 ಯುಎಸ್ ಡಾಲರ್ (1,15,839.69 ರೂ), ಭಾರತದಲ್ಲಿ 1,54,900 ರೂಪಾಯಿಗಳು ಮತ್ತು ದುಬೈನಲ್ಲಿ 4,899 ದಿರ್ಹಮ್ (1,19,022.18 ರೂ) ಆಗಿರಲಿದೆ ಎಂದು ಹೇಳಲಾಗುತ್ತಿದೆ.