10,000ರೂ.ಗಿಂತ ಕಡಿಮೆ ಬೆಲೆಯಲ್ಲಿ 5ಜಿ ಸ್ಮಾರ್ಟ್‌ಫೋನ್: ಇದರಲ್ಲಿ AI ವೈಶಿಷ್ಟ್ಯವೂ ಲಭ್ಯ

5G Smartphone: ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಬಜೆಟ್ ಸ್ನೇಹಿ ಸ್ಮಾರ್ಟ್‌ಫೋನ್ ಖರೀದಿಸಲು ಯೋಚಿಸುತ್ತಿರುವವರಿಗಾಗಿ ಐಟೆಲ್ ಕಂಪನಿ ಆಕರ್ಷಕ ಫೋನ್ ಬಿಡುಗಡೆ ಮಾಡಿದೆ. 

Written by - Yashaswini V | Last Updated : Jun 3, 2025, 03:28 PM IST
  • ಐಟೆಲ್ A95 5ಜಿ ಸ್ಮಾರ್ಟ್‌ಫೋನ್
  • PANDA ಡಿಸ್ಪ್ಲೇ ಜೊತೆಗೆ ಲಭ್ಯವಿರುವ 5ಜಿ ಸ್ಮಾರ್ಟ್‌ಫೋನ್
  • ಮೃದುವಾದ 120Hz ರಿಫ್ರೆಶ್ ದರದೊಂದಿಗೆ ಲಭ್ಯವಾಗಲಿರುವ ಸ್ಮಾರ್ಟ್‌ಫೋನ್
10,000ರೂ.ಗಿಂತ ಕಡಿಮೆ ಬೆಲೆಯಲ್ಲಿ 5ಜಿ ಸ್ಮಾರ್ಟ್‌ಫೋನ್: ಇದರಲ್ಲಿ AI ವೈಶಿಷ್ಟ್ಯವೂ ಲಭ್ಯ

itel Smartphone: ಜನಪ್ರಿಯ ಸ್ಮಾರ್ಟ್‌ಫೋನ್ ಕಂಪನಿಗಳಲ್ಲಿ ಒಂದಾದ 'ಐಟೆಲ್' A95 5G ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದೆ. ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಪ್ರಾಯೋಗಿಕ ವೈಶಿಷ್ಟ್ಯಗಳು ಮತ್ತು ದೀರ್ಘಕಾಲಿನ ಮೌಲ್ಯವನ್ನು ತಲುಪಿಸುವತ್ತ ಗಮನಹರಿಸುವ ಐಟೆಲ್ ಎಲ್ಲ ವರ್ಗದವರಿಗೂ ಕೊಳ್ಳಲು ಅನುಕೂಲವಾಗುವಂತಹ ಅತ್ಯಂತ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್ ಲಭ್ಯವಾಗುವಂತೆ ಮಾಡಿದೆ. 

Add Zee News as a Preferred Source

ಐಟೆಲ್ ನ A95 5G ಸ್ಮಾರ್ಟ್‌ಫೋನ್ 128GB ಆಂತರಿಕ ಸಂಗ್ರಹಣೆಯೊಂದಿಗೆ ಸಜ್ಜುಗೊಂಡಿದ್ದು 4GB RAM ಮತ್ತು 6GB RAM ಎರಡೂ ರೂಪಾಂತರಗಳಲ್ಲಿ ಲಭ್ಯವಿದ್ದು ಬಜೆಟ್ ಸ್ನೇಹಿಯೂ ಹೌದು ಎಂಬುದು ಇದರ ಪ್ರಮುಖ ವಿಶೇಷತೆಗಲಾಗಿದೆ. 

ಐಟೆಲ್ A95 5G ಬೆಲೆ: 
ಐಟೆಲ್ A95 5G 4GB RAM ಇದರ ಮೆಮೋರಿ ವಿಸ್ತರಣೆ 8ಜಿ‌ಬಿವರೆಗೆ ಇರಲಿದ್ದು, ಈ ರೂಪಾಂತರದ ಬೆಲೆ ₹9,599 ಮತ್ತು 
ಐಟೆಲ್ A95 5G 6GB RAM ಅನ್ನು  12GB ವರೆಗೆ ವಿಸ್ತರಿಸಬಹುದಾಗಿದ್ದು ಈ ರೂಪಾಂತರದ ಬೆಲೆ ₹9,999 ಆಗಿದೆ. 

ಇದನ್ನೂ ಓದಿ- 2 ಜನಪ್ರಿಯ ರಿಚಾರ್ಜ್ ಪ್ಲಾನ್ ಬೆಲೆ ಕಡಿತಗೊಳಿಸಿದ ಬಿ‌ಎಸ್‌ಎನ್‌ಎಲ್... ಗ್ರಾಹಕರಿಗೆ ಜಾಕ್‌ಪಾಟ್!

ಐಟೆಲ್ A95 5G ವೈಶಿಷ್ಟ್ಯಗಳು: 
* ಐಟೆಲ್ A95 5G ಮೀಡಿಯಾ ಟೆಕ್ D6300 ಆಕ್ಟಾ-ಕೋರ್ ಪ್ರೊಸೆಸರ್ ನಿಂದ ಚಾಲನೆಗೊಳ್ಳಲಿದೆ. 
* ಇದು ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಸಂಯೋಜಿತವಾಗಿದೆ.
* ಐಟೆಲ್ A95 5G ಸ್ಮಾರ್ಟ್‌ಫೋನ್ 5ಜಿ ಸಂಪರ್ಕವನ್ನು ಹೊಂದಿದ್ದು, ವರ್ಧಿತ ನೆಟ್‌ವರ್ಕ್ ಕಾರ್ಯಕ್ಷಮತೆಯನ್ನು ದೃಢಪಡಿಸುತ್ತದೆ. 
* ಈ ಫೋನ್ನಲ್ಲಿ  ಡ್ಯುಯಲ್-ಬ್ಯಾಂಡ್ ವೈ-ಫೈ ಜೊತೆಗೆ  ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು  ಸುರಕ್ಷಿತ ಪ್ರವೇಶಕ್ಕಾಗಿ ಫೇಸ್ ಅನ್‌ಲಾಕ್ ಅನ್ನು ಸಹ ಒದಗಿಸುತ್ತದೆ. 

ಐಟೆಲ್ A95 5G ಸ್ಮಾರ್ಟ್‌ಫೋನ್ HD+ ರೆಸಲ್ಯೂಶನ್‌ನೊಂದಿಗೆ 6.67-ಇಂಚಿನ ಪಂಚ್-ಹೋಲ್ ಡಿಸ್ಪ್ಲೇಯನ್ನು ಹೊಂದಿದೆ, ಇದು ಮೃದುವಾದ 120Hz ರಿಫ್ರೆಶ್ ದರ ಮತ್ತು ಸ್ಪಂದಿಸುವ 240Hz ಟಚ್ ಸ್ಯಾಂಪ್ಲಿಂಗ್ ದರದಿಂದ ಪೂರಕವಾಗಿದ್ದು, ನ್ಯವಿಗೇಶನ್ ಮತ್ತು ಗೇಮಿಂಗ್ ಅನುಭವವನ್ನು ಹೆಚ್ಚಿಸುತ್ತದೆ. ಐಟೆಲ್ A95 5G PANDA ಡಿಸ್ಪ್ಲೇ ಹೊಂದಿದ್ದು ಬರೋಬ್ಬರಿ 100 ದಿನಗಳವರೆಗೆ ಫ್ರೀ ಸ್ಕ್ರೀನ್ ಚೇಂಜ್ ಸೇವೆಯನ್ನು ಒದಗಿಸಲಿದೆ. 

ಇದನ್ನೂ ಓದಿ- 200MP ಕ್ಯಾಮೆರಾ ಹೊಂದಿರುವ 2 ಶಕ್ತಿಶಾಲಿ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ ಹಾನರ್; ಫಸ್ಟ್ ಲುಕ್ ನೋಡಿ

ಬ್ಯಾಟರಿ ಸಾಮರ್ಥ್ಯ: 
ಐಟೆಲ್ A95 5G ಸ್ಮಾರ್ಟ್‌ಫೋನ್  10W ಚಾರ್ಜಿಂಗ್ ಬೆಂಬಲದೊಂದಿಗೆ ಗಣನೀಯ 5000mAh ಬ್ಯಾಟರಿಯನ್ನು ಒಳಗೊಂಡಿದ್ದು, ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ. 

ಐಟೆಲ್ A95 5G ಕ್ಯಾಮೆರಾ: 
ಐಟೆಲ್ A95 5G ಸ್ಮಾರ್ಟ್‌ಫೋನ್ ನಲ್ಲಿ AI- ವರ್ಧಿತ 50MP ಹಿಂಭಾಗದ ಕ್ಯಾಮೆರಾ ನೀಡಲಾಗಿದ್ದು ವ್ಲಾಗ್ ಮೋಡ್, ಸ್ಕೈ ಎಫೆಕ್ಟ್‌ಗಳು ಮತ್ತು ಡ್ಯುಯಲ್ ವಿಡಿಯೋ ಕ್ಯಾಪ್ಚರ್ ಸೇರಿದಂತೆ ವಿವಿಧ ಸೃಜನಶೀಲ ಅನುಭವವನ್ನು ಒದಗಿಸುತ್ತದೆ. ಸೆಲ್ಫಿಗಾಗಿ ಮತ್ತು ವಿಡಿಯೋ ಕರೆಗಳಿಗಾಗಿ ಇದರಲ್ಲಿ  8MP ಫ್ರಂಟ್ ಕ್ಯಾಮರಾ ನೀಡಲಾಗಿದೆ. ವಿಶೇಷವೆಂದರೆ  ಇದು 2K ವಿಡಿಯೋ ರೆಕಾರ್ಡಿಂಗ್ ಸಾಮರ್ಥ್ಯವನ್ನು ಸಹ ಹೊಂದಿದೆ. 

AI ವೈಶಿಷ್ಟ್ಯ: 
ಐಟೆಲ್ A95 5G ಸ್ಮಾರ್ಟ್‌ಫೋನ್ ಅತ್ಯಾಧುನಿಕವಾದ AI ಸಹಾಯಕವ ಐವಾನಾ, ನ್ಯಾವಿಗೇಶನ್ ಮತ್ತು ಸೆಟ್ಟಿಂಗ್ ಜ್ಞಾಪನೆಗಳಂತಹ ಹಲವು ದೈನಂದಿನ ಕಾರ್ಯಗಳನ್ನು ಸುಗಮಗೊಳಿಸುವ ವೈಶಿಶ್ತ್ಯಾಗಳನ್ನು ಸಹ ಒಳಗೊಂಡಿದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ. 

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News