Jio Cycle: ಇಂಧನ ಬೆಲೆ ಹೆಚ್ಚಳ ಮತ್ತು ವಾಯುಮಾಲಿನ್ಯ ತಡೆಯ ಉದ್ದೇಶದಿಂದ ಎಲೆಕ್ಟ್ರಿಕಲ್ ವಾಹನಗಳು ಇತ್ತೀಚಿಗೆ ಹೆಚ್ಚಿನ ಜನರ ಗಮನ ಸೆಳೆಯುತ್ತಿವೆ. ಇದಲ್ಲದೆ ಒಂದೆಡೆ ಬಸ್ ದರ ಏರಿಕೆ ಹಾಗೂ ಮೆಟ್ರೊ ಟಿಕೆಟ್ ದರ ಏರಿಕೆಗಳಿಂದಾಗಿ ಜನ ಹೆಚ್ಚಾಗಿ ಸ್ವಂತ ವಾಹನಗಳಲ್ಲೇ ಓಡಾಡುವುದು ಉತ್ತಮ ಎಂದು ಅಭಿಪ್ರಾಯಪಡುತ್ತಿದ್ದಾರೆ. ಈಗಾಗಲೇ ಹಣದುಬ್ಬರದಿಂದಾಗಿ ಕಂಗಾಲಾಗಿರುವ ಜನ ಬಸ್, ಮೆಟ್ರೋಗಳ ಬೆಲೆ ಏರುತ್ತಿರುವುದರಿಂದ ಇದಕ್ಕಾಗುವ ಖರ್ಚಿನಲ್ಲಿ ಸ್ವಂತ ವಾಹನವನ್ನೇ ಖರೀದಿಸಬಹುದು ಎನ್ನುತ್ತಿದ್ದಾರೆ.
ಮತ್ತೊಂದೆ ಜನರ ಬವಣೆಯನ್ನೆ ಬಂಡವಾಳವನ್ನಾಗಿ ಮಾಡಿಕೊಳ್ಳಲು ಹೊರಟಿರುವ ಕಂಪನಿಗಳು ಎಲೆಕ್ಟ್ರಿಕಲ್ ವಾಹನಗಳ ತಯಾರಿಕೆಯಲ್ಲಿ ನಾಮುಂದು ತಾಮುಂದು ಎನ್ನುತ್ತಾ ಹೊಸ ಹೊಸ ಆವಿಷ್ಕಾರಕ್ಕೆ ಮುಂದಾಗಿವೆ.
ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದ್ದ ಮುಖೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜಿಯೋ ಅಗ್ಗದ ದರದ ಸಿಮ್, ಫೋನ್ ಬಳಿಕ ಇದೀಗ ಹೊಸ ರೀತಿಯಲ್ಲಿ ಪರಿಣಾಮಕಾರಿ ಬದಲಾವಣೆಯತ್ತ ಹೆಜ್ಜೆ ಇಟ್ಟಿದೆ. ಎಲೆಕ್ಟ್ರಿಕಲ್ ಕಾರು, ಬೈಕು ಬಂದಂತೆ ಇದೀಗ ಎಲೆಕ್ಟ್ರಿಕಲ್ ಬೈಸಿಕಲ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಜಿಯೋ ಮುಂದಾಗಿದೆ.
ನಮ್ಮ ಸುತ್ತಮುತ್ತಲಿನ ಪರಿಸರ ಮತ್ತು ಆರೋಗ್ಯವನ್ನು ಕಾಪಾಡುವ ಉದ್ದೇಶದಿಂದ ಜಿಯೋ ಕಂಪನಿ ಹೊಸ ಯೋಜನೆಗೆ ಕೈ ಹಾಕಿದ್ದು, ಸಿಲಿಕಾನ್ ಸಿಟಿ ಬೆಂಗಳೂರು, ಮುಂಬೈ, ದೆಹಲಿಯಂತಹ ಟ್ರಾಫಿಕ್ ಜಾಮ್‌ನಿಂದ ಪರದಾಡುತ್ತಿರುವ ಜನರ ಸಮಸ್ಯೆಗೆ ಪರಿಹಾರವನ್ನು ನೀಡಲು ಹೊಸ ಯೋಜನೆಯನ್ನು ರೂಪಿಸಿದೆ.
ಇದನ್ನೂ ಓದಿ- Jio ಧಮಾಕಾ ಆಫರ್: ಈ ರಿಚಾರ್ಜ್ ಯೋಜನೆಗಳಲ್ಲಿ ನಿತ್ಯ 3GB ಡೇಟಾ, ಫ್ರೀ ನೆಟ್‌ಫ್ಲಿಕ್ಸ್ ಎಲ್ಲವೂ ಲಭ್ಯ
ಭಾರತದ ಅತಿದೊಡ್ಡ ಟೆಲಿಕಾಂ ಮತ್ತು ಡಿಜಿಟಲ್ ಸೇವಾ ಪೂರೈಕೆದಾರ ಕಂಪನಿಯಾದ ಜಿಯೋ ಈಗ ಎಲೆಕ್ಟ್ರಿಕಲ್ ಬೈಕ್ ಕಲ್ಪನೆಯನ್ನು ಹೊರತಂದಿದ್ದು, ವಿದ್ಯುತ್ ಚಾಲಿತ ಸೈಕಲ್ ಬಿಡುಗಡೆ ಮಾಡಲಿದೆ. ಈ ಎಲೆಕ್ಟ್ರಿಕ್ ಸೈಕಲ್ ವಿಶೇಷತೆ ಎಂದರೆ ಇದನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದರೆ ಸಾಕು ಬರೋಬ್ಬರಿ, 80 ಕಿಲೋ ಮೀಟರ್ವರೆಗೂ ಈ ಎಲೆಕ್ಟ್ರಿಕಲ್ ಸೈಕಲ್ ಚಲಿಸುತ್ತದೆ . ಇದೊಂದು ಹೈಟೆಕ್ ಎಲೆಕ್ಟ್ರಿಕ್ ಸೈಕಲ್ ಎಂದು ಕಂಪನಿ ಹೇಳಿಕೊಂಡಿದೆ.
ಪರಿಸರಮಾಲಿನ್ಯವಾಗದಂತೆ ಕಾಳಜಿ ವಹಿಸುವುದರೊಂದಿಗೆ, ಆರೋಗ್ಯಕರ ಹಾಗೂ ಕಡಿಮೆ ವೆಚ್ಚದಾಯಕವಿರುವಂತೆ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಇದನ್ನ ನವೀಕರಿಸಲಾಗುತ್ತಿದೆ. ನಗರ ಮಾತ್ರವಲ್ಲದೇ ಗ್ರಾಮೀಣ ಭಾಗದ ಜನರಿಗೂ ಸಹ ಇದು ಸಹಾಯಕಾರಿಯಾಗಲಿದೆ ಎಂದು ಜಿಯೋ ಕಂಪನಿ ತಿಳಿಸಿದೆ.
ಈ ವಿಶೇಷ ಎಲೆಕ್ಟ್ರಿಕಲ್ ಸೈಕಲ್ ನ ವಿನ್ಯಾಸವು ಸ್ಪೋರ್ಟಿ ಮತ್ತು ಸ್ಟೈಲಿಶ್ ಆಗಿದ್ದು , ಇದನ್ನು ಪುರುಷರು ಮತ್ತು ಮಹಿಳೆಯರು ಇಬ್ಬರಿಗೂ ಚಲಾಯಿಸಲು ಅನುಕೂಲವಾಗುವಂತೆ ತಯಾರು ಮಾಡಲಾಗಿದೆ. ಸುಂದರ ಎಲ್‌ಇಡಿ ಲೈಟ್‌ಗಳು, ಡಿಜಿಟಲ್ ಡಿಸ್‌ಪ್ಲೇ ಮತ್ತು ಡೈಮಂಡ್ ಫ್ರೇಮ್ ಇದರಲ್ಲಿದ್ದು, ಆಕರ್ಷಕವಾಗಿದೆ. ಉತ್ತಮ ಗುಣಮಟ್ಟದ ಬಿಡಿಭಾಗಗಳಿಂದ ತಯಾರಿಸಲ್ಪಟ್ಟ ಈ ಇ-ಸೈಕಲ್ , ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದೆ. ಇದು ಹಗುರ ಮತ್ತು ಹೆಚ್ಚು ಕಾಲ ಬಾಳಿಕೆ ಬರುತ್ತದೆ ಎಂದು ಕಂಪನಿ ಭರವಸೆ ನೀಡಿದೆ.
ಇದನ್ನೂ ಓದಿ- ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್‌ಗಳನ್ನ ಖರೀದಿಸಬಹುದು? ಒಂದಕ್ಕಿಂತ ಹೆಚ್ಚು ಇದ್ರೆ ಏನಾಗುತ್ತೆ?
ಡಿಜಿಟಲ್ ಡಿಸ್‌ಪ್ಲೇ, ಜಿಪಿಎಸ್ ಟ್ರ್ಯಾಕಿಂಗ್, ಸ್ಮಾರ್ಟ್ ಕನೆಕ್ಟಿವಿಟಿ ಮತ್ತು ರಿವರ್ಸ್ ಮೋಡ್‌ನಂತಹ ಆಧುನಿಕ ತಂತ್ರಜ್ಞಾನವನ್ನು ಇ-ಸೈಕಲ್ ಒಳಗೊಂಡಿದೆ. ವಾಟರ್ ಪ್ರೂಫ್ ಮತ್ತು ಶಾಕ್ ಅಬ್ಸಾರ್ಬರ್ ಅಳವಡಿಕೆಯು ಇದರಲ್ಲಿದೆ, ಇದರಿಂದ ಯಾವುದೇ ರಸ್ತೆಯಲ್ಲೂ ಸುಗಮವಾದ ಆರಾಮದಾಯಕ ಪ್ರಯಾಣ ಮಾಡಬಹುದಾಗಿದೆ. ಈ ಸೈಕಲ್ ಜಿಪಿಎಸ್ ನ್ಯಾವಿಗೇಷನ್, ಮೊಬೈಲ್ ಅಪ್ಲಿಕೇಶನ್‌ಗೆ ಸಂಪರ್ಕ ಮತ್ತು ಹೆಚ್ಚುಕಾಲ ಬಾಳಿಕೆಯ ಬ್ಯಾಟರಿ ಸ್ಥಿತಿ ಸೇರಿದಂತೆ ಹಲವಾರು ಸ್ಮಾರ್ಟ್ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಹೇಗೆ ಬೇಕಾದರು ಹೊಂದಾಣಿಕೆ ಮಾಡಿಕೊಳ್ಳಬಹುದಾದ ಹ್ಯಾಂಡಲ್‌ಬಾರ್‌ಗಳನ್ನು ಇದರಲ್ಲಿ ಅಳವಡಿಸಲಾಗಿದೆ.
ಸುರಕ್ಷತೆಯ ವಿಷಯದಲ್ಲೂ ಈ ಬೈಸಿಕಲ್ ಅತ್ಯುತ್ತಮವಾಗಿದೆ. ಇದು ರಾತ್ರಿಯಲ್ಲಿ ಮತ್ತು ಜನದಟ್ಟಣೆಯ ರಸ್ತೆಗಳಲ್ಲಿ ಸಂಪೂರ್ಣ ಸುರಕ್ಷತೆಯನ್ನು ನೀಡುವ LED ಹೆಡ್‌ಲೈಟ್‌ಗಳು, ಬ್ರೇಕ್ ಲೈಟ್‌ಗಳು ಮತ್ತು ಹಿಂಬದಿ ಕನ್ನಡಿಗಳಂತಹ ಅಂಶಗಳನ್ನು ಒಳಗೊಂಡಿದೆ. ಇನ್ನು ಇದರ ಬೆಲೆಯು ಕೇವಲ 25 ರಿಂದ 35 ಸಾವಿರ ರೂಪಾಯಿ ಇದ್ದು, ಮಧ್ಯಮ ವರ್ಗದ ಜನರೂ ಸಹ ಸುಲಭವಾಗಿ ಕೊಂಡುಕೊಳ್ಳಲು ಸಾಧ್ಯವಾಗುತ್ತದೆ. ಶೀಘ್ರವೇ ಮಾರುಕಟ್ಟೆಗೆ ಬರಲಿರುವ ಈ ಸೈಕಲ್ ಅನ್ನು ಜಿಯೋನ ಅಧಿಕೃತ ವೆಬ್‌ಸೈಟ್ ಮತ್ತು ಶೋ ರೂಮ್ ಗಳಲ್ಲಿ ಖರೀದಿಸಬಹುದಾಗಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.









