)
ದುಬಾರಿ ರೀಚಾರ್ಜ್ನಿಂದ ಬೇಸತ್ತು ಹೋಗಿದ್ದರಿಗೆ ಜಿಯೋ ಅಗ್ಗದ ರೀಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. ಜಿಯೋ ದ 91 ರೂ. ಪ್ಲಾನ್ ಅನ್ನು ಪರಿಚಯಿಸಿದೆ. ಈ ರಿಚಾರ್ಜ್ ಪ್ಲಾನ್ ನಲ್ಲಿ ಬಳಕೆದಾರರು ಬಹಳಷ್ಟು ಪ್ರಯೋಜನಗಳನ್ನು ಪಡೆಯುತ್ತಾರೆ. ಇದರ ಪ್ರಮುಖ ವಿಶೇಷತೆ ಎಂದರೆ ಈ ಜಿಯೋ ಪ್ಲಾನ್ ನ ಮಾನ್ಯತೆ 28 ದಿನಗಳವರೆಗೆ ಇರುತ್ತದೆ. ಇದು ಕರೆ, ಇಂಟರ್ನೆಟ್ ಡೇಟಾ ಸೌಲಭ್ಯಗಳನ್ನು ನೀಡುತ್ತದೆ. ಇದರರ್ಥ ಕಡಿಮೆ ವೆಚ್ಚದಲ್ಲಿ ಮೊಬೈಲ್ ಸೇವೆಯ ಸಂಪೂರ್ಣ ಪ್ರಯೋಜನವನ್ನು ಪಡೆಯಬಹುದು.
ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿ ಜಿಯೋ ತನ್ನ ಬಳಕೆದಾರರಿಗೆ ಕೇವಲ 91 ರೂ.ಗಳಿಗೆ 4G ಪ್ರಿಪೇಯ್ಡ್ ಯೋಜನೆಯನ್ನು ನೀಡುತ್ತಿದೆ. ಈ ಯೋಜನೆಯ ಬೆಲೆಯನ್ನು ಕೇಳಿದಾಗ, ಇದು ಡೇಟಾ ವೋಚರ್ ಯೋಜನೆಯಂತೆ ಕಾಣಿಸುತ್ತದೆ. ಆದರೆ ಇದು ಡೇಟಾ ವೋಚರ್ ಖಂಡಿತವಾಗಿಯೂ ಅಲ್ಲ, ಇದು ಸಾಮಾನ್ಯ ಪ್ರಿಪೇಯ್ಡ್ ಯೋಜನೆ.
91 ರೂ. ಯೋಜನೆಯ ವಿವರ :
ಜಿಯೋದ ಈ ಅಗ್ಗದ ಯೋಜನೆಯಲ್ಲಿ, ಅನಿಯಮಿತ ಧ್ವನಿ ಕರೆ, 50 SMS ಮತ್ತು ಪ್ರತಿದಿನ 100MB ಡೇಟಾ ಸಿಗುತ್ತದೆ. ಅಲ್ಲದೆ, 200 MB ಯೋಜನೆಯೊಂದಿಗೆ ಹೆಚ್ಚುವರಿ ಡೇಟಾ ಲಭ್ಯವಿದೆ. ಅಂದರೆ, ಒಟ್ಟಾರೆಯಾಗಿ, 28 ದಿನಗಳ ಮಾನ್ಯತೆಯಲ್ಲಿ 3 GB ಡೇಟಾ ಸಿಗಲಿದೆ.
ಆದರೆ, ಜಿಯೋದ ಈ ಯೋಜನೆ ಎಲ್ಲರಿಗೂ ಅಲ್ಲ. ಈ ಯೋಜನೆ ಜಿಯೋಫೋನ್ ಬಳಕೆದಾರರಿಗೆ ಮಾತ್ರ. ಅಂದರೆ, ಈ ಯೋಜನೆ ಜಿಯೋಫೋನ್ ಅಥವಾ ಜಿಯೋಫೋನ್ ಪ್ರೈಮ್ ಸಾಧನದಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ.
ಜಿಯೋದ ಈ ಯೋಜನೆ ವಿಶೇಷವಾಗಿ ಸ್ಮಾರ್ಟ್ಫೋನ್ಗಳನ್ನು ಬಳಸದ ಮತ್ತು ಕಡಿಮೆ ಡೇಟಾ ಅಗತ್ಯವಿರುವ ಜನರಿಗಾಗಿ ಪರಿಚಯಿಸಲಾಗಿದೆ. ಅಂಥಹ ಬಳಕೆದಾರರಿಗಾಗಿ, ಕಂಪನಿಯು ಅಗ್ಗದ ಯೋಜನೆಗಳನ್ನು ತರುತ್ತದೆ. ಇದರಿಂದ ಕಡಿಮೆ ಡೇಟಾ ಹೊಂದಿರುವವರು ಹೆಚ್ಚು ದುಬಾರಿಯಾಗಿ ರೀಚಾರ್ಜ್ ಮಾಡಬೇಕಾಗಿಲ್ಲ. ಈ ಯೋಜನೆಯ ಡೇಟಾ ಖಾಲಿಯಾದಾಗ, ಇಂಟರ್ನೆಟ್ ವೇಗವು ಕೇವಲ 64 ಕೆಬಿಪಿಎಸ್ಗೆ ಇಳಿಯುತ್ತದೆ
ಇದನ್ನೂ ಓದಿ : ಆಂಡ್ರಾಯ್ಡ್ ಬಳಕೆದಾರರಿಗೆ ಗೂಗಲ್ನಿಂದ ಬಂತು ಬಿಗ್ ಅಪ್ಡೇಟ್..! ಇನ್ಮುಂದೆ ಫೋನ್ನಲ್ಲಿ ಆಪ್ಗಳನ್ನು ಇನ್ಸ್ಟಾಲ್ ಮಾಡಲು ಈ ಹೊಸ ರೂಲ್ಸ್ ಫಾಲೋ ಮಾಡಲೇಬೇಕು..
75 ರೂ.ಗಳ ಪ್ಲಾನ್ ಕೂಡಾ ಇದೆ :
ಇದಕ್ಕಿಂತ ಅಗ್ಗದ ಯೋಜನೆಯನ್ನು ಹುಡುಕುತ್ತಿದ್ದರೆ, ಜಿಯೋ ಹೆಚ್ಚಿನ ಆಯ್ಕೆಗಳನ್ನು ಹೊಂದಿದೆ. ಇದಕ್ಕಿಂತ ಕಡಿಮೆ ಅಂದರೆ 75 ರೂ.ಗಳ ಯೋಜನೆಯೂ ಇದೆ. ಈ ಯೋಜನೆ 23 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಇದರೊಂದಿಗೆ, ಪ್ರತಿದಿನ 0.1GB ಡೇಟಾ ಮತ್ತು 200MB ಹೆಚ್ಚುವರಿ ಡೇಟಾದ ಪ್ಯಾಕ್ ಸಿಗುತ್ತದೆ. ಈ ಯೋಜನೆ ಅತ್ಯಂತ ಅಗ್ಗವಾಗಿದೆ. ಆದರೆ, ಇದು ಕೇವಲ 23 ದಿನಗಳ ಮಾನ್ಯತೆಯನ್ನು ನೀಡುತ್ತದೆ.
ಹೆಚ್ಚಿನ ಡೇಟಾ ಬೇಕಾದರೆ, ಜಿಯೋದ 152 ರೂ.ಗಳ ಯೋಜನೆಯನ್ನು ತೆಗೆದುಕೊಳ್ಳಬಹುದು. ಈ ಯೋಜನೆಯು 28 ದಿನಗಳ ಮಾನ್ಯತೆ ಮತ್ತು ಪ್ರತಿದಿನ 0.5GB ಡೇಟಾವನ್ನು ನೀಡುತ್ತದೆ, ಇದು ರೂ. 91 ಯೋಜನೆಗಿಂತ ಹೆಚ್ಚಾಗಿದೆ. ಈ ಎಲ್ಲಾ ಯೋಜನೆಗಳು ಭಾರತದಾದ್ಯಂತ ಗ್ರಾಹಕರಿಗೆ ಲಭ್ಯವಿದೆ.