WhatsApp:ವಾಟ್ಸಾಪ್‌ನಲ್ಲಿ ನಿಮ್ಮ ರಹಸ್ಯ ಚಾಟ್ ಅನ್ನು ಮರೆಮಾಡಬೇಕೆ? ಈ ಟ್ರಿಕ್ ಒಮ್ಮೆ ಟ್ರೈ ಮಾಡಿ

ತ್ವರಿತ ಸಂದೇಶ ಕಳುಹಿಸುವಿಕೆಗಾಗಿ ವಾಟ್ಸಾಪ್ ಅತ್ಯಂತ ಜನಪ್ರಿಯ ಅಪ್ಲಿಕೇಶನ್ ಆಗಿದೆ. ಆದರೆ ಹಲವು ಬಾರಿ ಕೆಲವು ಚಾಟ್‌ಗಳನ್ನು ರಹಸ್ಯವಾಗಿ ಇಡಬೇಕಾಗುತ್ತದೆ.  ನೀವೂ ಕೂಡ ವಾಟ್ಸಾಪ್‌ನಲ್ಲಿ ಕೆಲವು ವೈಯಕ್ತಿಕ ಚಾಟ್‌ಗಳನ್ನು ನಿಮ್ಮ ಕುಟುಂಬ ಸದಸ್ಯರು ಅಥವಾ ಇತರರಿಂದ ರಹಸ್ಯವಾಗಿಡಲು ನೀವು ಬಯಸುವಿರಾ?   

Written by - Yashaswini V | Last Updated : Jun 12, 2021, 12:00 PM IST
  • ವಾಟ್ಸಾಪ್‌ ಈ ದಿನಗಳಲ್ಲಿ ಪ್ರತಿಯೊಬ್ಬ ಸ್ಮಾರ್ಟ್ ಫೋನ್ ಬಳಕೆದಾರರ ಜೀವನಾಡಿ ಎಂದರೆ ತಪ್ಪಾಗಲಾರದು
  • ವಾಟ್ಸಾಪ್‌ನಲ್ಲಿ ಸ್ನೇಹಿತರು, ಸಂಬಂಧಿಕರೊಂದಿಗೆ ನಾವು ಗಂಟೆಗಟ್ಟಲೆ ಚಾಟ್ ಮಾಡುತ್ತೇವೆ
  • ನೀವೂ ಕೂಡ ವಾಟ್ಸಾಪ್‌ನಲ್ಲಿ ಕೆಲವು ವೈಯಕ್ತಿಕ ಚಾಟ್‌ಗಳನ್ನು ನಿಮ್ಮ ಕುಟುಂಬ ಸದಸ್ಯರು ಅಥವಾ ಇತರರಿಂದ ರಹಸ್ಯವಾಗಿಡಲು ಬಯಸುವಿರಾ?
WhatsApp:ವಾಟ್ಸಾಪ್‌ನಲ್ಲಿ ನಿಮ್ಮ ರಹಸ್ಯ ಚಾಟ್ ಅನ್ನು ಮರೆಮಾಡಬೇಕೆ? ಈ ಟ್ರಿಕ್ ಒಮ್ಮೆ ಟ್ರೈ ಮಾಡಿ title=
ವಾಟ್ಸಾಪ್‌ನಲ್ಲಿ ನಿಮ್ಮ ವೈಯಕ್ತಿಯ ಚಾಟ್ ಅನ್ನು ಮರೆಮಾಡಲು ಬಯಸುವಿರಾ, ಇಲ್ಲಿದೆ ಸುಲಭ ವಿಧಾನ

ನವದೆಹಲಿ: ತ್ವರಿತ ಸಂದೇಶ ಕಳುಹಿಸುವಿಕೆಯ ಅತ್ಯಂತ ಜನಪ್ರಿಯ ಅಪ್ಲಿಕೇಶನ್  ವಾಟ್ಸಾಪ್ (WhatsApp) ಈ ದಿನಗಳಲ್ಲಿ ಪ್ರತಿಯೊಬ್ಬ ಸ್ಮಾರ್ಟ್ ಫೋನ್ ಬಳಕೆದಾರರ ಜೀವನಾಡಿ ಎಂದರೆ ತಪ್ಪಾಗಲಾರದು. ವಾಟ್ಸಾಪ್‌ನಲ್ಲಿ ಸ್ನೇಹಿತರು, ಸಂಬಂಧಿಕರೊಂದಿಗೆ ನಾವು ಗಂಟೆಗಟ್ಟಲೆ ಚಾಟ್ ಮಾಡುತ್ತೇವೆ. ಇದರೊಂದಿಗೆ ಕೆಲವು ವೈಯಕ್ತಿಕ ಚಾಟ್‌ಗಳನ್ನು ಕೂಡ ಹೊಂದಿರುತ್ತೇವೆ. ಆದರೆ ಹಲವು ಸಂದರ್ಭಗಳಲ್ಲಿ ಕೆಲವು ಚಾಟ್‌ಗಳನ್ನು (Whatsapp Chats) ರಹಸ್ಯವಾಗಿ ಇಡಬೇಕಾಗುತ್ತದೆ.  ನೀವೂ ಕೂಡ ವಾಟ್ಸಾಪ್‌ನಲ್ಲಿ ಕೆಲವು ವೈಯಕ್ತಿಕ ಚಾಟ್‌ಗಳನ್ನು ನಿಮ್ಮ ಕುಟುಂಬ ಸದಸ್ಯರು ಅಥವಾ ಇತರರಿಂದ ರಹಸ್ಯವಾಗಿಡಲು ಬಯಸುವಿರಾ? ಇದಕ್ಕಾಗಿ ಸಾಮಾನ್ಯವಾಗಿ ಬಳಸುವ ಒಂದು ಮಾರ್ಗ ಎಂದರೆ ವಾಟ್ಸಾಪ್‌ನ ಪಿನ್ ಅಥವಾ ಲಾಕ್ ಮಾಡುವುದು. ಆದರೆ ಇದು ರಹಸ್ಯ ಚಾಟ್ ಅನ್ನು ಮರೆಮಾಡುವುದಿಲ್ಲ. ಚಾಟ್ ತೆರೆದ ನಂತರ, ಬೇರೆ ಯಾರಾದರೂ ಅದನ್ನು ನೋಡಬಹುದು. ಅಂತಹ ಪರಿಸ್ಥಿತಿಯಲ್ಲಿ, ವೈಯಕ್ತಿಕ ಚಾಟ್ ಬೇರೆ ಯಾರಿಗೂ ಗೋಚರಿಸಬಾರದು ಎಂದು ನೀವು ಬಯಸಿದರೆ, ಈ ಆಯ್ಕೆಯು ವಾಟ್ಸಾಪ್ನಲ್ಲಿಯೂ ಲಭ್ಯವಿದೆ. ಈ ಟ್ರಿಕ್ ಅನ್ನು ನೀವು ಹೇಗೆ ಪ್ರಯತ್ನಿಸಬಹುದು ಎಂದು ತಿಳಿಯಲು ಮುಂದೆ ಓದಿ...

ಆರ್ಕೈವ್ ವೈಶಿಷ್ಟ್ಯವನ್ನು ಬಳಸಿ:
ವೈಯಕ್ತಿಕ ಚಾಟ್‌ಗಳನ್ನು ವಾಟ್ಸಾಪ್‌ನಲ್ಲಿ (Whatsapp Chats) ಮರೆಮಾಡಲು ಸುಲಭವಾದ ಮಾರ್ಗವೆಂದರೆ ಅವುಗಳನ್ನು ಆರ್ಕೈವ್ (Archive) ಮಾಡುವುದು. ಈ ವೈಶಿಷ್ಟ್ಯವು ಈಗಾಗಲೇ ವಾಟ್ಸಾಪ್ನಲ್ಲಿದೆ. ಆದ್ದರಿಂದ ನೀವು ಯಾವುದೇ ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳನ್ನು ಸ್ಥಾಪಿಸುವ ಅಗತ್ಯವಿಲ್ಲ. ಸಾಮಾನ್ಯವಾಗಿ,  ನೀವು ವೈಯಕ್ತಿಕ ಸಂದೇಶವನ್ನು ಆರ್ಕೈವ್ ಮಾಡಿದ್ದೀರಿ ಎಂದು ಅಷ್ಟು ಸುಲಭವಾಗಿ ಯಾರಿಗೂ ತಿಳಿದಿರುವುದಿಲ್ಲ.

ಇದನ್ನೂ ಓದಿ- Whatsapp Fake Message: ವಾಟ್ಸಾಪ್‌ನಲ್ಲಿ ವೈರಲ್ ಆಗುತ್ತಿರುವ ಈ ಲಿಂಕ್ ಅನ್ನು ಮರೆತೂ ಕೂಡ ಕ್ಲಿಕ್ ಮಾಡಬೇಡಿ

ಈ ಕೆಲಸ ಮಾಡಿ:
ಈ ವಿಧಾನವನ್ನು ಪ್ರಯತ್ನಿಸಲು, ಮೊದಲು ನಿಮ್ಮ ವಾಟ್ಸಾಪ್ (WhatsApp)  ತೆರೆಯಿರಿ, ನಂತರ ಸ್ವಲ್ಪ ಸಮಯದವರೆಗೆ ನೀವು ಮರೆಮಾಡಲು ಬಯಸುವ ಚಾಟ್ ಅನ್ನು ಹಿಡಿದುಕೊಳ್ಳಿ. ನೀವು ಬಯಸಿದರೆ, ನೀವು ಒಂದೇ ಸಮಯದಲ್ಲಿ ಅನೇಕ ಚಾಟ್‌ಗಳನ್ನು ಆಯ್ಕೆ ಮಾಡಬಹುದು. ಇದರ ನಂತರ, ಈಗ ನೀವು ಮೇಲಿನ ಬಲಭಾಗದಲ್ಲಿ ಆರ್ಕೈವ್ ಆಯ್ಕೆಯನ್ನು ನೋಡುತ್ತೀರಿ, ಅದರ ಮೇಲೆ ಕ್ಲಿಕ್ ಮಾಡಿ. ಇದರ ನಂತರ ನಿಮ್ಮ ವೈಯಕ್ತಿಕ ಚಾಟ್ ಅನ್ನು ಇಲ್ಲಿ ಮರೆಮಾಡಲಾಗುತ್ತದೆ.

ಇದನ್ನೂ ಓದಿ- ನಿಮ್ಮ WhatsApp account ಸಕ್ರೀಯವಾಗಿಲ್ಲದಿದ್ದರೆ ಡಿಲಿಟ್ ಆಗಲಿದೆಯೇ?

ಆರ್ಕೈವ್ ಚಾಟ್‌ಗಳನ್ನು ಈ ರೀತಿ ವೀಕ್ಷಿಸಬಹುದು:
ನೀವು ಮರೆಮಾಡಿದ ಚಾಟ್ ಅನ್ನು ಮರಳಿ ತರಲು ಅಥವಾ ಆರ್ಕೈವ್ ಅಂದರೆ ಗುಪ್ತ ಚಾಟ್‌ಗಳನ್ನು ನೋಡಲು ಬಯಸಿದರೆ, ನಂತರ ವಾಟ್ಸಾಪ್ ತೆರೆಯಿರಿ, ನಂತರ ಕೆಳಗೆ ಸ್ಕ್ರಾಲ್ ಮಾಡಿ. ಇಲ್ಲಿ ನೀವು ಆರ್ಕೈವ್ ಬಟನ್ ನೋಡುತ್ತೀರಿ. ಚಾಟ್‌ಗಳನ್ನು ನೋಡಲು ನೀವು ಆರ್ಕೈವ್ ಅನ್ನು ಕ್ಲಿಕ್ ಮಾಡಬೇಕು. ಈಗ ನೀವು ಮರಳಿ ತರಲು ಬಯಸುವ ಚಾಟ್‌ಗಳನ್ನು ಟ್ಯಾಪ್ ಮಾಡಿ ಮತ್ತು ಹಿಡಿದುಕೊಳ್ಳಿ. ಇದರ ನಂತರ ನೀವು ಪರದೆಯ ಮೇಲಿನ ಬಲ ಮೂಲೆಯಲ್ಲಿ ಕಾಣುವ ಅನ್ ಆರ್ಕೈವ್ ಚಾಟ್ (Unarchive Chat) ಐಕಾನ್ ಅನ್ನು ಕ್ಲಿಕ್ ಮಾಡಬೇಕು. ಈ ರೀತಿಯಾಗಿ ನಿಮ್ಮ ಗುಪ್ತ ಚಾಟ್‌ಗಳನ್ನು ಹಿಂತಿರುಗಿಸಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News