ನಿಮ್ಮ ಆಧಾರ್ ಸಂಖ್ಯೆಯನ್ನು ಅನಗತ್ಯ ಅಪ್ಲಿಕೇಶನ್ಗಳಿಗೆ ಲಿಂಕ್ ಮಾಡಿದ್ದರೆ, ಅದನ್ನು ಸುರಕ್ಷಿತವಾಗಿ ಡಿಲೀಟ್ ಮಾಡುವುದು ನಿಮ್ಮ ಆದ್ಯತೆಯಾಗಿರಲಿ.

ಆಧಾರ್ ಅನೇಕ ಸೇವೆಗಳಿಗೆ ಅತ್ಯಗತ್ಯ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಅದನ್ನು ಸುರಕ್ಷಿತವಾಗಿರಿಸುವುದು ಮತ್ತು ಅನಗತ್ಯವಾಗಿ ಬಳಸದಿರುವುದು ಕೂಡಾ ಅಷ್ಟೇ ಮುಖ್ಯ. ವಿಶೇಷವಾಗಿ ಆನ್ಲೈನ್ ಪ್ಲಾಟ್ಫಾರ್ಮ್ಗಳು ಮತ್ತು ಡಿಜಿಟಲ್ ವ್ಯಾಲೆಟ್ಗಳಲ್ಲಿ ನಿಮ್ಮ ಆಧಾರ್ ನಂಬರ್ ಇದ್ದರೆ ಅದು ದುರ್ಬಳಕೆಯಾಗುವ ಸಾಧ್ಯತೆಗಳು ಕೂಡಾ ಹೆಚ್ಚು. ನೀವು ಈಗಾಗಲೇ ನಿಮ್ಮ ಆಧಾರ್ ಸಂಖ್ಯೆಯನ್ನು ಅನಗತ್ಯ ಅಪ್ಲಿಕೇಶನ್ಗಳಿಗೆ ಲಿಂಕ್ ಮಾಡಿದ್ದರೆ, ಅದನ್ನು ಸುರಕ್ಷಿತವಾಗಿ ಡಿಲೀಟ್ ಮಾಡುವುದು ನಿಮ್ಮ ಆದ್ಯತೆಯಾಗಿರಲಿ.
1. ನಿಮ್ಮ ಆಧಾರ್ ದೃಢೀಕರಣ ಹಿಸ್ಟರಿ :
- UIDAI ವೆಬ್ಸೈಟ್ಗೆ (uidai.gov.in) ಲಾಗಿನ್ ಆಗಿ ಮತ್ತು "Aadhaar Authentication History"ಆಯ್ಕೆಮಾಡಿ.
- ನಿಮ್ಮ ಆಧಾರ್ ಅನ್ನು eKYC ಗಾಗಿ ಎಲ್ಲಿ ಬಳಸಲಾಗಿದೆ ಎಂಬುದನ್ನು ನೋಡಬಹುದು.
- ಯಾವುದೇ ಅಪರಿಚಿತ/ಅನುಮಾನಾಸ್ಪದ ಸೇವೆ ಕಂಡು ಬಂದರೆ ತಕ್ಶನ್ ಡಿಲೀಟ್ ಮಾಡಿ.
2. ನಿಮ್ಮ ಮೊಬೈಲ್ ಆಪರೇಟರ್ಗೆ ಆಧಾರ್ ಅನ್ನು ಡಿಲೀಟ್ ಮಾಡಲು ಹೇಳಿ :
ಟೆಲಿಕಾಂ ಕಂಪನಿಗಳಿಗೆ ಇನ್ನು ಮುಂದೆ ಆಧಾರ್ ಅಗತ್ಯವಿಲ್ಲ. ನಿಮ್ಮ ಹತ್ತಿರದ ಟೆಲಿಕಾಂ ಅಂಗಡಿಗೆ ಹೋಗಿ, ಗುರುತಿನ ಪುರಾವೆಯಾಗಿ ನಿಮ್ಮ ಪ್ಯಾನ್ ಅಥವಾ ಮತದಾರರ ಕಾರ್ಡ್ ಅನ್ನು ಒದಗಿಸಿ ಮತ್ತು ನಿಮ್ಮ ಮೊಬೈಲ್ ಸಂಖ್ಯೆಯಿಂದ ನಿಮ್ಮ ಆಧಾರ್ ಅನ್ನು ಡಿ-ಲಿಂಕ್ ಮಾಡಲು ವಿನಂತಿಸಿ. TRAI ಮಾರ್ಗಸೂಚಿಗಳ ಪ್ರಕಾರ ಇದು ಕಡ್ಡಾಯವಾಗಿದೆ.
3. ಡಿಜಿಟಲ್ ವ್ಯಾಲೆಟ್ ಮತ್ತು ಫಿನ್ಟೆಕ್ ಅಪ್ಲಿಕೇಶನ್ಗಳಿಂದ ಆಧಾರ್ ತೆಗೆದುಹಾಕಿ.
PayTM, PhonePe, Google Pay ಇತ್ಯಾದಿಗಳಲ್ಲಿ: ಪ್ರೊಫೈಲ್ → KYC/Personal Details ಹೋಗಿ ಮತ್ತು ಆಧಾರ್ ಸಂಖ್ಯೆಯನ್ನು ಬದಲಾಯಿಸಿ/ಅಳಿಸಿ ಆಯ್ಕೆಯನ್ನು ಆರಿಸಿ. ಇಲ್ಲದಿದ್ದರೆ, ಕಸ್ಟಮರ್ ಕೇರ್ ಗೆ ಇಮೇಲ್ ಮಾಡಿ ರಿಕ್ವೆಸ್ಟ್ ಕಳುಹಿಸಿ.
4. ಪರ್ಯಾಯ ಗುರುತಿನ ದಾಖಲೆ :
ಆಧಾರ್ ಡಿಲೀಟ್ ಮಾಡಿದ ಚಾಲನಾ ಪರವಾನಗಿ, ಪಾಸ್ಪೋರ್ಟ್, ಮತದಾರರ ಕಾರ್ಡ್ ಇತ್ಯಾದಿಗಳನ್ನು ಬಳಸಿಕೊಂಡು ಮತ್ತೆ KYC ಮಾಡಿ. ಕೆಲವು ಅಪ್ಲಿಕೇಶನ್ಗಳು ವೀಡಿಯೊ/ಸ್ವಯಂ ಪರಿಶೀಲನೆಯನ್ನು ಕೋರಬಹುದು. ಅದನ್ನು ಪೂರ್ಣಗೊಳಿಸಿದ ನಂತರವೂ, ನೀವು ಆಧಾರ್ ಇಲ್ಲದೆಯೂ ಆ ಸೇವೆಗಳನ್ನು ಮುಂದುವರಿಸಬಹುದು.
5. ಮಾಸ್ಕ್ಡ್ ಆಧಾರ್ ಅಥವಾ ವಿಐಡಿ (ವರ್ಚುವಲ್ ಐಡಿ) ಬಳಸಿ :
ನೀವು ಆಧಾರ್ ಅನ್ನು ಎಲ್ಲಿ ಮತ್ತು ಯಾವಾಗ ಬಳಸಿದರೂ, ಪೂರ್ಣ 12-ಅಂಕಿಯ ಆಧಾರ್ ಸಂಖ್ಯೆಯನ್ನು ಹಂಚಿಕೊಳ್ಳಬೇಡಿ. ನೀವು ಮಾಸ್ಕ್ಡ್ ಆಧಾರ್ (ಕೊನೆಯ 4 ಅಂಕೆಗಳು ಮಾತ್ರ ಗೋಚರಿಸುತ್ತವೆ) ಅಥವಾ 16-ಅಂಕಿಯ VID (ತಾತ್ಕಾಲಿಕ ಕೋಡ್) ಅನ್ನು ಬಳಸಬಹುದು. ಇವುಗಳನ್ನು UIDAI ಅನುಮೋದಿಸಿದೆ ಮತ್ತು ಪೂರ್ಣ ಸಂಖ್ಯೆಗಿಂತ ಹೆಚ್ಚು ಸುರಕ್ಷಿತವಾಗಿದೆ.
ನೀವು ಇದನ್ನು ಏಕೆ ಮಾಡಬೇಕು? :
ಪ್ರತಿಯೊಂದು ಅಪ್ಲಿಕೇಶನ್ ನಿಮ್ಮ ಆಧಾರ್ ಅನ್ನು ಸಂಗ್ರಹಿಸಿದರೆ, ಅದು ಹ್ಯಾಕರ್ಗಳಿಗೆ ಗುರಿಯಾಗಬಹುದು. ಆದ್ದರಿಂದ, ಒಂದು ಅಪ್ಲಿಕೇಶನ್ ಹ್ಯಾಕ್ ಆಗಿದ್ದರೂ ಸಹ, ನಿಮ್ಮ ಸೂಕ್ಷ್ಮ ಡೇಟಾವನ್ನು ರಕ್ಷಿಸಲಾಗುತ್ತದೆ.
6. ಆಧಾರ್ ಅನ್ನು ಎಲ್ಲಾ ಕಡೆಗಳಿಂದ ಡಿಲೀಟ್ ಮಾಡಬಹುದೇ ? :
ಇಲ್ಲ, ಆದಾಯ ತೆರಿಗೆ, ಪ್ಯಾನ್, ಸರ್ಕಾರಿ ಕಲ್ಯಾಣ ಯೋಜನೆಗಳಿಗೆ ಆಧಾರ್ ಕಡ್ಡಾಯ. ಖಾಸಗಿ ಅಪ್ಲಿಕೇಶನ್ಗಳು, ಟೆಲಿಕಾಂಗಳು, ವ್ಯಾಲೆಟ್ಗಳಿಂದ ಆಧಾರ್ ನಂಬರ್ ಅನ್ನು ತೆಗೆದುಹಾಕಬಹುದು.
7. ಮಾಸ್ಕ್ ಮಾಡಿದ ಆಧಾರ್/ವಿಐಡಿ ಸರಿಯಾಗಿ ಕೆಲಸ ಮಾಡುತ್ತದೆಯೇ?
ಹೌದು! ಇವು UIDAI ನಿಂದ ಪ್ರಮಾಣೀಕರಿಸಲ್ಪಟ್ಟಿವೆ ಮತ್ತು ಸುರಕ್ಷಿತವಾಗಿವೆ.
8. ಯಾವುದೇ ಸೇವೆ ಆಧಾರ್ ಅನ್ನು ಡಿಲೀಟ್ ಮಾಡಲು ನಿರಾಕರಿಸಿದರೆ ಏನು ಮಾಡಬೇಕು?
ಮೊದಲು ಗ್ರಾಹಕ ಸೇವಾ ಕೇಂದ್ರಕ್ಕೆ ದೂರು ನೀಡಿ. ಯಾವುದೇ ಪ್ರತಿಕ್ರಿಯೆ ಇಲ್ಲದಿದ್ದರೆ, ನೀವು UIDAI/TRAI ಗೆ ಮೇಲ್ಮನವಿ ಸಲ್ಲಿಸಬಹುದು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.