)
ನಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆ ಎದುರಾದರೂ ಆ ಸಮಸ್ಯೆ ನಿವಾರಣೆಗೆ ನಾವು ಮೊದಲು ನೆಚ್ಚಿಕೊಳ್ಳುವುದು ಗೂಗಲ್ ಅನ್ನು. ನಮ್ಮ ಸಮಸ್ಯೆ ಸಣ್ಣದಾಗಲಿ ದೊಡ್ಡದಾಗಲಿ ತಕ್ಷಣ ಪರಿಹಾರ ಅಲ್ಲೇ ಸಿಗುತ್ತದೆ ಎನ್ನುವುದು ಪರಮ ನಂಬಿಕೆ. ಪ್ರತಿಯೊಬ್ಬರೂ ತಮ್ಮ ಅನುಮಾನಗಳನ್ನು ಪರಿಹರಿಸಲು Googleನ ಸಹಾಯವನ್ನು ಪಡೆಯುತ್ತಾರೆ. ನಮ್ಮ ಸರ್ಚ್ ಹಿಸ್ಟರಿಯನ್ನು ಡಿಲೀಟ್ ಮಾಡುವ ಆಯ್ಕೆ ನಮ್ಮ ಬಳಿ ಇದ್ದರೂ, ನಮ್ಮ ಪ್ರತಿಯೊಂದು ಹುಡುಕಾಟವು Google ನಲ್ಲಿ ಉಳಿಸಲ್ಪಡುತ್ತದೆ. ಇತ್ತೀಚಿನ ಅಧ್ಯಯನವು ವಿವಾಹಿತ ಮಹಿಳೆಯರು Google ನಲ್ಲಿ ಹೆಚ್ಚು ಯಾವ ವಿಷಯದ ಬಗ್ಗೆ ಸರ್ಚ್ ಮಾಡುತ್ತಾರೆ ಎನ್ನುವ ವಿಷಯವನ್ನು ಬಹಿರಂಗ ಮಾಡಿದೆ.
ಗಂಡಂದಿರ ಬಗ್ಗೆ Google ನಲ್ಲಿ ಸರ್ಚ್ :
ಗೂಗಲ್ನ ಮಾಹಿತಿಯ ಪ್ರಕಾರ, ವಿವಾಹಿತ ಮಹಿಳೆಯರು ಹೆಚ್ಚಾಗಿ ತಮ್ಮ ಪತಿಗೆ ಏನು ಇಷ್ಟ, ಅವರ ಆಯ್ಕೆಗಳು ಯಾವುವು? ಅವರು ಏನು ಇಷ್ಟಪಡುತ್ತಾರೆ ? ಏನು ಇಷ್ಟಪಡುವುದಿಲ್ಲ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ ಎಂದು ಹುಡುಕಾಟ ನಡೆಸುತ್ತಾರೆ. ವಿವಾಹಿತ ಮಹಿಳೆಯರು ತಮ್ಮ ಗಂಡನ ಹೃದಯವನ್ನು ಹೇಗೆ ಗೆಲ್ಲಬಹುದು, ಅವರನ್ನು ಹೇಗೆ ಸಂತೋಷಪಡಿಸಬಹುದು ಎನ್ನುವ ಪ್ರಶ್ನೆಗಳಿಗೆ ಉತ್ತರವನ್ನು ಗೂಗಲ್ ನಲ್ಲಿ ಕಂಡುಕೊಳ್ಳುತ್ತಾರೆ. ವಿವಾಹಿತ ಮಹಿಳೆಯರು ತಮ್ಮ ಪತಿಯನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವುದು ಹೇಗೆ? ಹೆಂಡತಿಯ ಗುಲಾಮನನ್ನಾಗಿ ಮಾಡುವುದು ಹೇಗೆ ಎನ್ನುವ ಪ್ರಶ್ನೆಗಳನ್ನು ಕೂಡಾ ಕೇಳುತ್ತಾರೆ ಎನ್ನುವ ಆಘಾತಕಾರಿ ಅ ಅಂಶವನ್ನು ಗೂಗಲ್ ಬಹಿರಂಗಪಡಿಸಿದೆ.
ಹೆಂಡತಿಯರು ತಮ್ಮ ಕುಟುಂಬವನ್ನು ಯಾವಾಗ ವಿಸ್ತರಿಸಲು ನಿರ್ಧರಿಸಬೇಕು ? ಮಗುವನ್ನು ಹೊಂದಲು ಸರಿಯಾದ ಸಮಯ ಯಾವುದು ಎನ್ನುವ ಪ್ರಶ್ನೆಗಳನ್ನು ಗೂಗಲ್ ನಲ್ಲಿ ಕೇಳುತ್ತಾರೆ.
ವಿವಾಹಿತ ಮಹಿಳೆಯರು ಕೂಡ ಈ ಪ್ರಶ್ನೆಗಳನ್ನು ಕೇಳುತ್ತಾರೆ :
ನಾನು ನಿಮಗೆ ಹೇಳಿದ ಪ್ರಶ್ನೆಗಳಲ್ಲದೆ, ಮದುವೆಯ ನಂತರ ಮಹಿಳೆಯರು Google ನಲ್ಲಿ ಕೇಳುವ ಕೆಲವು ಪ್ರಶ್ನೆಗಳಿವೆ. ಮದುವೆಯ ನಂತರ ತಮ್ಮ ಹೊಸ ಕುಟುಂಬದ ಜೊತೆ ತಮ್ಮ ವರ್ತನೆ ಹೇಗೆ ಇರಬೇಕು? ಆ ಕುಟುಂಬದ ಭಾಗವಾಗಲು, ಅತ್ತೆ-ಮಾವಂದಿರಿಗೆ ಹೇಗೆ ಸಹಾಯ ಮಾಡಬೇಕು ಎನ್ನುವ ಪ್ರಶ್ನೆಗಳಿಗೂ ಇಲ್ಲಿ ಉತ್ತರ ಕಂಡು ಕೊಳ್ಳುವ ಹಂಬಲ ಮಹಿಳೆಯರದ್ದು. ಇನ್ನು ಮದುವೆಯ ನಂತರ ಕೆಲಸ ಮಾಡುವ ಮಹಿಳೆಯರು ಮದುವೆಯ ನಂತರ ತಮ್ಮ ಸ್ವಂತ ವ್ಯವಹಾರವನ್ನು ಹೇಗೆ ಮುನ್ನಡೆಸಿಕೊಂಡು ಹೋಗುವುದು? ವ್ಯವಹಾರದ ಜೊತೆಗೆ ಕುಟುಂಬವನ್ನು ಹೇಗೆ ನಿರ್ವಹಿಸಬೇಕು ಎಂದು ಕೂಡಾ Google ಬಳಿಯೇ ಕೇಳುತ್ತಾರೆ.