Amazon Great Summer Sale 2025ನಲ್ಲಿ ಅತ್ಯಂತ ಅಗ್ಗದ ಬೆಲೆಗೆ ಮಾರಾಟವಾಗುತ್ತಿದೆ ಈ 5 ಸ್ಮಾರ್ಟ್‌ಫೋನ್‌ಗಳು

Amazon Great Summer Sale 2025 : Amazon Great Summer Saleನಲ್ಲಿ ಅನೇಕ ಫೋನ್ ಗಳ ಮೇಲೆ ಭಾರೀ ರಿಯಾಯಿತಿ ನೀಡಲಾಗಿದೆ. ಈ ಸೇಲ್ ಮೇ ಒಂದರಿಂದ ಆರಂಭವಾಗಲಿದೆ. ಬ್ಯಾಂಕ್ ಆಫರ್, ಕ್ಯಾಶ್ ಬ್ಯಾಕ್, ಎಕ್ಸ್ಚೇಂಜ್ ಆಫರ್ ಸೇರಿದಂತೆ ಅನೇಕ ಕೊಡುಗೆಗೆಳನ್ನು ಈ ಸೇಲ್ ನಲ್ಲಿ ನೀಡಲಾಗಿದೆ.

Written by - Ranjitha R K | Last Updated : Apr 29, 2025, 01:19 PM IST
  • ಅಮೆಜಾನ್ ಇಂಡಿಯಾದ ಗ್ರೇಟ್ ಸಮ್ಮರ್ ಸೇಲ್ ಆರಂಭ
  • ಮೇ 1 ರಂದು ಮಧ್ಯಾಹ್ನ 12 ಗಂಟೆಯಿಂದ ಪ್ರಾರಂಭ
  • ಸ್ಮಾರ್ಟ್‌ಫೋನ್‌ಗಳು, ಎಲೆಕ್ಟ್ರಾನಿಕ್ಸ್ ಮತ್ತು ಆಕ್ಸೆಸರೀಸ್‌ಗಳ ಮೇಲೆ ಭಾರೀ ರಿಯಾಯಿತಿ
Amazon Great Summer Sale 2025ನಲ್ಲಿ ಅತ್ಯಂತ ಅಗ್ಗದ ಬೆಲೆಗೆ ಮಾರಾಟವಾಗುತ್ತಿದೆ ಈ 5 ಸ್ಮಾರ್ಟ್‌ಫೋನ್‌ಗಳು

Amazon Great Summer Sale 2025 : ಅಮೆಜಾನ್ ಇಂಡಿಯಾದ ಗ್ರೇಟ್ ಸಮ್ಮರ್ ಸೇಲ್ 2025 ಮೇ 1 ರಂದು ಮಧ್ಯಾಹ್ನ 12 ಗಂಟೆಯಿಂದ ಪ್ರಾರಂಭವಾಗಲಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ಎಲೆಕ್ಟ್ರಾನಿಕ್ಸ್ ಮತ್ತು ಆಕ್ಸೆಸರೀಸ್‌ಗಳ ಮೇಲೆ ಭಾರೀ ರಿಯಾಯಿತಿ ಲಭ್ಯವಿರುತ್ತವೆ. ವಿಶೇಷವೆಂದರೆ ಅಮೆಜಾನ್ ಪ್ರೈಮ್ ಸದಸ್ಯರು 12 ಗಂಟೆಗಳ ಮುಂಚಿತವಾಗಿ ಅಂದರೆ ಮಧ್ಯರಾತ್ರಿ 12 ಗಂಟೆಯಿಂದಲೇ ಖರೀದಿ ಆರಂಭಿಸಬಹುದು.   ಸ್ಮಾರ್ಟ್‌ಫೋನ್‌ಗಳು ಮತ್ತು ಪರಿಕರಗಳ ಮೇಲೆ 40% ವರೆಗೆ ರಿಯಾಯಿತಿ, ಬ್ಯಾಂಕ್ ಕೊಡುಗೆಗಳು, ಕ್ಯಾಶ್‌ಬ್ಯಾಕ್, ನೋ-ಕಾಸ್ಟ್ ಇಎಂಐ ಮತ್ತು ವಿನಿಮಯ ಬೋನಸ್‌ನಂತಹ ಹಲವಾರು ಪ್ರಯೋಜನಗಳನ್ನು ಈ ಸೇಲ್ ನಲ್ಲಿ ನೀಡಲಾಗುವುದು ಎಂದು ಅಮೆಜಾನ್ ಹೇಳಿದೆ. 

Add Zee News as a Preferred Source

Samsung Galaxy S24 Ultra 5G  : 
ಪ್ರೀಮಿಯಂ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಖರೀದಿಸಲು ಬಯಸಿದರೆ Samsung Galaxy S24 Ultra 5G ಉತ್ತಮ ಆಯ್ಕೆ ಆಗಬಹುದು. ಇದರ ಮೂಲ ಬೆಲೆ 1,34,999 ರೂಪಾಯಿ. ಆದರೆ, ಈ ಸೇಲ್ ನಲ್ಲಿ ಫೋನ್ ಅನ್ನು 84,999 ರೂಪಾಯಿಗೆ ಖರೀದಿಸಬಹುದು. ಇದು ಶಕ್ತಿಶಾಲಿ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್, 200MP ಕ್ಯಾಮೆರಾ ಮತ್ತು ಉತ್ತಮ ನಿರ್ಮಾಣ ಗುಣಮಟ್ಟವನ್ನು ಹೊಂದಿದೆ. 

ಇದನ್ನೂ ಓದಿ : Pahalgam Attack: ಉಗ್ರ ನಿಗ್ರಹದಲ್ಲಿ ಭಾರತಕ್ಕೆ ನೆರವಾಗಬಲ್ಲವೇ ಆಧುನಿಕ ಎಐ ವ್ಯವಸ್ಥೆಗಳು?

OnePlus Nord 4: 
OnePlus Nord 4 ಒಂದು ಶಕ್ತಿಶಾಲಿ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಆಗಿದ್ದು, ಬ್ಯಾಂಕ್ ಕೊಡುಗೆಗಳನ್ನು ಒಳಗೊಂಡಂತೆ ಆಫರ್ ಬಳಸಿಕೊಂಡು  ಕೇವಲ 24,999 ರೂಪಾಯಿಗೆ ಖರೀದಿಸಬಹುದು. ಇದು ಸ್ನಾಪ್‌ಡ್ರಾಗನ್ 7+ ಜೆನ್ 3 ಪ್ರೊಸೆಸರ್, 5500mAh ಬ್ಯಾಟರಿ ಮತ್ತು 6.74-ಇಂಚಿನ ದೊಡ್ಡ ಡಿಸ್ಪ್ಲೇಯನ್ನು ಹೊಂದಿದೆ. ವಿಶ್ವಾಸಾರ್ಹ ಮತ್ತು ಕಾರ್ಯಕ್ಷಮತೆಯ ಫೋನ್ ಅನ್ನು ಖರೀದಿಸಬೇಕು ಎನ್ನುವವರಿಗೆ ಈ ಫೋನ್ ಉತ್ತಮ ಆಯ್ಕೆಯಾಗಿದೆ. 

OnePlus 13R: 
OnePlus 13R ಅನ್ನು 39,999 ರೂಪಾಯಿಗೆ  ಖರೀದಿಸಬಹುದು. ಇದರೊಂದಿಗೆ, OnePlus Buds 3 (₹3,999)ಯನ್ನು ಉಚಿತವಾಗಿ ನೀಡಲಾಗುವುದು. ಫೋನ್ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್, 6.78-ಇಂಚಿನ AMOLED ಡಿಸ್ಪ್ಲೇ ಮತ್ತು ದೊಡ್ಡ 6000mAh ಬ್ಯಾಟರಿಯನ್ನು ಹೊಂದಿದೆ. ಕಡಿಮೆ ಬೆಲೆಗೆ ಫ್ಲ್ಯಾಗ್‌ಶಿಪ್ ತರಹದ ವೈಶಿಷ್ಟ್ಯಗಳನ್ನು ಬಯಸುವ ಬಳಕೆದಾರರಿಗೆ ಈ ಫೋನ್ ಉತ್ತಮ ಆಯ್ಕೆ .

ಇದನ್ನೂ ಓದಿ : ಐಫೋನ್‌ನಂತೆ ಕಾಣುವ ಅಗ್ಗದ ಫೋನ್ ತರುತ್ತಿರುವ ಒಪ್ಪೋ; ಬಿಡುಗಡೆಗೂ ಮುನ್ನವೇ ಚಿತ್ರ ಸೋರಿಕೆ!!

iQOO ನಿಯೋ 10R: 
ಗೇಮಿಂಗ್ ಮತ್ತು ಮಲ್ಟಿ ಟಾಸ್ಕಿಂಗ್ ಇಷ್ಟಪಡುವವರಿಗೆ iQOO ನಿಯೋ 10R ಉತ್ತಮ ಆಯ್ಕೆಯಾಗಿದೆ. ಇದನ್ನು ಸೇಲ್ ನಲ್ಲಿ 24,999 ರೂಪಾಯಿಗೆ  ಖರೀದಿಸಬಹುದು. ಇದರಲ್ಲಿ ಬ್ಯಾಂಕ್ ಆಫರ್ ಗಳೂ ಸೇರಿವೆ. ಇದು ಸ್ನಾಪ್‌ಡ್ರಾಗನ್ 8s Gen 3, 6400mAh ಬ್ಯಾಟರಿ ಮತ್ತು ವೇಗದ ಚಾರ್ಜಿಂಗ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. 

Xiaomi 14 CIVI: 
ಸೊಗಸಾದ ಮತ್ತು ಹಗುರವಾದ ಸ್ಮಾರ್ಟ್‌ಫೋನ್ ಖರೀದಿಸಬೇಕು ಎನ್ನುವವರಿಗೆ  Xiaomi 14 CIVI ಬೆಸ್ಟ್ ಫೋನ್. ಈ ಫೋನ್ ಅನ್ನು ಸೇಲ್ ನಲ್ಲಿ ಕೇವಲ 39,999 ರೂಪಾಯಿಗೆ  ಖರೀದಿಸಬಹುದು. ಇದು ಲೈಕಾ ಕ್ಯಾಮೆರಾ ವ್ಯವಸ್ಥೆ, ಸ್ನಾಪ್‌ಡ್ರಾಗನ್ 8s ಜೆನ್ 3 ಚಿಪ್‌ಸೆಟ್ ಮತ್ತು 6.55-ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ. ಶೈಲಿ ಮತ್ತು ಕಾರ್ಯಕ್ಷಮತೆಯ ಪರಿಪೂರ್ಣ ಸಂಯೋಜನೆ ಬೇಕು ಎನ್ನುವವರು ಈ ಫೋನ್ ಖರೀದಿಸಬಹುದು. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News