)
ಹಬ್ಬದ ಸೀಸನ್ ಬಂದಿದೆ. ಇದರೊಂದಿಗೆ ಇ-ಕಾಮರ್ಸ್ನಲ್ಲೂ ಆಫರ್ಗಳ ಮಳೆ ಆರಂಭವಾಗಿದೆ. ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ನಲ್ಲಿ ಫ್ರೀಡಂ ಸೇಲ್ ನಡೆಯುತ್ತಿದೆ. ಇದರ ಹೊರತಾಗಿ, ಮುಖೇಶ್ ಅಂಬಾನಿಯವರ ಜಿಯೋಮಾರ್ಟ್ನಲ್ಲಿಯೂ ಗ್ರ್ಯಾಂಡ್ ಇಂಡಿಪೆಂಡೆನ್ಸ್ ಸೇಲ್ ನಡೆಯುತ್ತಿದೆ. ಈ ಸೇಲ್ ಲೈವ್ ಆಗಿದ್ದು, ಇಲ್ಲಿ 80% ವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಸೇಲ್ನಲ್ಲಿ ಐಫೋನ್ ಬೆಲೆಗಳು ತೀವ್ರವಾಗಿ ಕುಸಿದಿವೆ. ಆಪಲ್ನ ಇತ್ತೀಚಿನ ಐಫೋನ್ 16 ಅನ್ನು ಈ ಸೇಲ್ ನಲ್ಲಿ ತುಂಬಾ ಅಗ್ಗವಾದ ಬೆಲೆಗೆ ಖರೀದಿಸಬಹುದು.
ಜಿಯೋಮಾರ್ಟ್ ನಲ್ಲಿ ಐಫೋನ್ 16 ಮೇಲೆ ಆಫರ್ :
ಆಪಲ್ ಐಫೋನ್ 16 128 ಜಿಬಿ ಸ್ಟೋರೇಜ್ ಇರುವ ಫೋನ್ ಅನ್ನು 79,900 ಕ್ಕೆ ಬಿಡುಗಡೆ ಮಾಡಿತ್ತು. ಆದರೆ, ಶೇಕಡಾ 10 ರಷ್ಟು ರಿಯಾಯಿತಿಯೊಂದಿಗೆ, ಈ ಫೋನ್ ಈಗ 71,290 ಕ್ಕೆ ಲಭ್ಯವಿದೆ. ಮೊದಲ ಬಾರಿಗೆ, ಐಫೋನ್ 16 ಅನ್ನು ಇಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇದರ ಜೊತೆಗೆ, ಇಎಂಐ ಆಯ್ಕೆಯನ್ನೂ ನೀಡಲಾಗಿದೆ. ಪ್ರತಿ ತಿಂಗಳು 3355 ಪಾವತಿಸುವ ಮೂಲಕ ಫೋನ್ ಅನ್ನು ಖರೀದಿಸಬಹುದು.
JioMart iPhone 16 ಬ್ಯಾಂಕ್ ಆಫರ್ :
ಈ ಫೋನ್ ಅನ್ನು ಇನ್ನಷ್ಟು ಅಗ್ಗದ ಬೆಲೆಗೆ ಖರೀದಿಸಲು ICICI, SBI ಮತ್ತು Kotak ಬ್ಯಾಂಕ್ ಕ್ರೆಡಿಟ್ ಕಾರ್ಡ್ಗಳನ್ನು ಬಳಸಬಹುದು. ಈ ಕಾರ್ಡ್ ಗಳ ಮೂಲಕ ಖರೀದಿಸಿದರೆ ಫೋನ್ ಮೇಲೆ 4 ಸಾವಿರ ರೂ.ಗಳವರೆಗೆ ರಿಯಾಯಿತಿ ಸಿಗುತ್ತದೆ. ಅಂದರೆ, ಫೋನ್ನ ಬೆಲೆ 70 ಸಾವಿರಕ್ಕಿಂತ ಕಡಿಮೆಯಾಗುವುದು.
iPhone 16 ವಿಶೇಷಣಗಳು :
iPhone 16 6.1 ಇಂಚಿನ (15.54 cm) ಸೂಪರ್ ರೆಟಿನಾ XDR ಡಿಸ್ಪ್ಲೇಯನ್ನು ಹೊಂದಿದೆ. ಇದು 2556 x 1179 ಪಿಕ್ಸೆಲ್ಗಳ ರೆಸಲ್ಯೂಶನ್ ಮತ್ತು 460 ppi ಪಿಕ್ಸೆಲ್ ಡೆನ್ಸಿಟಿ ಹೊಂದಿದೆ. ಈ ಡಿಸ್ಪ್ಲೇ ಕ್ರಿಸ್ಟಲ್ ಕ್ಲಿಯರ್ ವ್ಯೂ ನೀಡುವುದಲ್ಲದೆ HDR ಕಂಟೆಂಟ್ ಅನ್ನು ಕೂಡಾ ಬಹಳ ಸುಂದರವಾಗಿ ತೋರಿಸುತ್ತದೆ. ಐಫೋನ್ 16 ಇನ್ಬಿಲ್ಟ್ ರಿಚರ್ಜೆಬಲ್ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದೆ. ಇದು Qi ವೈರ್ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಅಂದರೆ, ಈಗ ಫೋನ್ ಅನ್ನು ವೈರ್ಲೆಸ್ ಆಗಿ ಚಾರ್ಜ್ ಮಾಡುವುದು ಸುಲಭ.
ಐಫೋನ್ 16 ಕೇವಲ ಸ್ಮಾರ್ಟ್ಫೋನ್ ಅಲ್ಲ, ಪಾಕೆಟ್ ಸ್ಟುಡಿಯೋ. ಈ ಬಾರಿ ಆಪಲ್ ಕ್ಯಾಮೆರಾ ಗುಣಮಟ್ಟ ಮತ್ತು AI ಆಧಾರಿತ ಛಾಯಾಗ್ರಹಣಕ್ಕೆ ವಿಶೇಷ ಗಮನ ನೀಡಿದೆ.
ಹಿಂಭಾಗದ ಕ್ಯಾಮೆರಾ ಸೆಟಪ್:
• 48 MP ಫ್ಯೂಷನ್ ಕ್ಯಾಮೆರಾ
• 12 MP ಅಲ್ಟ್ರಾ ವೈಡ್ ಕ್ಯಾಮೆರಾ
ಇದರ ಹೊರತಾಗಿ, ಇದು ಈ ರೀತಿಯ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ:
• ಸಪೈರ್ ಕ್ರಿಸ್ಟಲ್ ಲೆನ್ಸ್ ಕವರ್ (Sapphire Crystal Lens Cover)
• ನೆಕ್ಸ್ಟ್ ಜೆನ್ ಪೋರ್ಟ್ರೇಟ್ ವಿಥ್ ಫೋಕಸ್ ಅಂಡ್ ಡೆಪ್ತ್ ಕಂಟ್ರೋಲ್ (Next-gen Portraits with Focus & Depth Control)
• ಪೋರ್ಟ್ರೇಟ್ ಲೈಟಿಂಗ್ (Portrait Lighting (6 effects)
• ಆಟೋ ಇಮೇಜ್ ಸ್ಟೆಬಿಲೈಸೇಶನ್ (Auto Image Stabilisation)