ಕಡಿಮೆ ಬೆಲೆಯಲ್ಲಿ Micromax ಬಿಡುಗಡೆ ಮಾಡುತ್ತಿದೆ ಅದ್ಭುತ ಸ್ಮಾರ್ಟ್ಫೋನ್, ಬೆಲೆ ಮತ್ತು ವೈಶಿಷ್ಟ್ಯ ತಿಳಿಯಿರಿ
ಮೈಕ್ರೋಮ್ಯಾಕ್ಸ್ ಕಳೆದ ವರ್ಷ ನವೆಂಬರ್ ನಲ್ಲಿ Micromax In Note 1ಬಿಡುಗಡೆ ಮಾಡಿತ್ತು. ಮೈಕ್ರೋಮ್ಯಾಕ್ಸ್ ಈ ತಿಂಗಳು ಮತ್ತೊಂದು ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಬಹುದು ಎನ್ನಲಾಗಿದೆ.
ನವದೆಹಲಿ : ಮೈಕ್ರೋಮ್ಯಾಕ್ಸ್ ಭಾರತೀಯ ಮೂಲದ ಫೋನ್ ತಯಾರಕ ಕಂಪನಿಯಾಗಿದ್ದು, ಕಳೆದ 21 ವರ್ಷಗಳಿಂದ ವ್ಯಾಪಾರ ನಡೆಸುತ್ತಿದೆ. ಮೂಲಗಳ ಪ್ರಕಾರ, ಮೈಕ್ರೋಮ್ಯಾಕ್ಸ್ ಈ ತಿಂಗಳು ‘In’ ಸರಣಿಯಲ್ಲಿ icromax In Note 1 Pro ಹೆಸರಿನ ಸಾಧನವನ್ನು ಬಿಡುಗಡೆ ಮಾಡಬಹುದು.
ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಬಹುದು Micromax In Note 1 Pro :
ಮೈಕ್ರೋಮ್ಯಾಕ್ಸ್ ಕಳೆದ ವರ್ಷ ನವೆಂಬರ್ ನಲ್ಲಿ Micromax In Note 1ಬಿಡುಗಡೆ ಮಾಡಿತ್ತು. ಮೈಕ್ರೋಮ್ಯಾಕ್ಸ್ (Micromax) ಈ ತಿಂಗಳು ಮತ್ತೊಂದು ಸ್ಮಾರ್ಟ್‌ಫೋನ್ (smart phone)ಅನ್ನು ಬಿಡುಗಡೆ ಮಾಡಬಹುದು ಎನ್ನಲಾಗಿದೆ. ಹೌದು, ಮೈಕ್ರೋಮ್ಯಾಕ್ಸ್ ಇನ್ ನೋಟ್ 1 ಪ್ರೊ ಅನ್ನು ಇದೆ ತಿಂಗಳು ಬಿಡುಗಡೆ ಮಾಡುವ ಎಲ್ಲಾ ಸಾಧ್ಯತೆಗಳಿವೆ. ಈ ಫೋನನ್ನು ಗೀಕ್‌ಬೆಂಚ್ ಬೆಂಚ್‌ಮಾರ್ಕಿಂಗ್ ಸೈಟ್‌ನಲ್ಲಿ ನೋಡಿದ ನಂತರ, ಈ ಬಿಡುಗಡೆಯ ಸುದ್ದಿಯನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಲಾಗುತ್ತಿದೆ.
ಇದನ್ನೂ ಓದಿ : WhatsApp ಬಳಕೆದಾರರಿಗೊಂದು ಗುಡ್ ನ್ಯೂಸ್, ಶೀಘ್ರದಲ್ಲೇ ಬರಲಿದೆ ಹೊಸ ಫೀಚರ್
ಕಡಿಮೆ ಬೆಲೆಯಲ್ಲಿ ಅದ್ಭುತ ಸ್ಮಾರ್ಟ್ಫೋನ್ :
ಮೈಕ್ರೋಮ್ಯಾಕ್ಸ್‌ನ ಈ ಹೊಸ ಸ್ಮಾರ್ಟ್‌ಫೋನ್ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಆಗಿರಬಹುದು ಎನ್ನಲಾಗಿದೆ. ಗ್ರಾಹಕರು ಸುಲಭವಾಗಿ ಈ ಫೋನ್ ಅನ್ನು ಖರೀದಿಸಬಹುದು. ಈ ಫೋನ್ ಅನ್ನು ಗೀಕ್‌ಬೆಂಚ್‌ನಲ್ಲಿ ಮಾದರಿ ಸಂಖ್ಯೆ E7748 ನೊಂದಿಗೆ ಲಿಸ್ಟ್ ಮಾಡಲಾಗಿದೆ. ಇಲ್ಲಿ ನೀಡಲಾದ ವೈಶಿಷ್ಟ್ಯಗಳ ಪ್ರಕಾರ, ಇದನ್ನು MediaTek MT6785 SoC ನಿಂದ ನಡೆಸಬಹುದು. ಇದು MediaTek Helio G90 ಚಿಪ್‌ಸೆಟ್ ಹೊಂದಿರಬಹುದು. ಗೀಕ್‌ಬೆಂಚ್ ಪ್ರಕಾರ, ನೋಟ್ 1 ಪ್ರೊ 4 ಜಿಬಿ RAM ಅನ್ನು ಒಳಗೊಂಡಿರಬಹುದು ಮತ್ತು ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 11 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಈ ಸ್ಮಾರ್ಟ್‌ಫೋನ್‌ನ ಅಪ್‌ಗ್ರೇಡ್ ಆವೃತ್ತಿಯ ನೋಟ್ 1 ಪ್ರೊನಲ್ಲಿದೆ :
ಮಾಹಿತಿಗಳ ಪ್ರಕಾರ, ಈ ಸ್ಮಾರ್ಟ್‌ಫೋನ್‌ನ ಹೆಸರು ನೋಟ್ 1 ಪ್ರೊ. ಕಳೆದ ವರ್ಷ ಬಿಡುಗಡೆಯಾದ ಮೈಕ್ರೋಮ್ಯಾಕ್ಸ್ ಇನ್ ನೋಟ್ 1 ರ ಅಪ್‌ಗ್ರೇಡ್ ಆವೃತ್ತಿಯಾಗಿದೆ. ನೋಟ್ 1 ರಲ್ಲಿ 4GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್, 48MP ಮುಖ್ಯ ಕ್ಯಾಮೆರಾ, 16MP ಸೆಲ್ಫಿ ಕ್ಯಾಮೆರಾ ಮತ್ತು 5,000mAh ಬ್ಯಾಟರಿಯೊಂದಿಗೆ ಕ್ವಾಡ್ ಕ್ಯಾಮೆರಾ ಸೆಟಪ್ ಇದೆ.
ಇದನ್ನೂ ಓದಿ : Google Play Store: 19 ಸಾವಿರಕ್ಕೂ ಅಧಿಕ ಆಪ್ ಗಳು ಅನ್ಸೇಫ್, ಬಳಕೆದಾರರ ವೈಯಕ್ತಿಕ ಡೇಟಾ ಅಪಾಯದಲ್ಲಿ
ಮೈಕ್ರೋಮ್ಯಾಕ್ಸ್ ಈ ಫೋನ್ (Micromax pone) ಬಿಡುಗಡೆ ಬಗ್ಗೆ ಇನ್ನೂ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಈ ತಿಂಗಳು ಮೈಕ್ರೋಮ್ಯಾಕ್ಸ್ ಇನ್ ನೋಟ್ 1 ಪ್ರೊ ಬಿಡುಗಡೆಯಾದರೆ, ಈ ಸ್ಮಾರ್ಟ್‌ಫೋನ್‌ನ ಬೆಲೆ ಎಷ್ಟು ಮತ್ತು ಯಾವ ವೈಶಿಷ್ಟ್ಯಗಳನ್ನು ಹೊಂದಿದೆ ಎನ್ನುವುದು ಸ್ಪಷ್ಟವಾಗಿ ತಿಳಿಯಲಿದೆ .
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.