ಮೊಟೊರೊಲಾ ಭಾರತದಲ್ಲಿ ತನ್ನ ಎಡ್ಜ್ 60 ಸರಣಿಯ ಎರಡನೇ ಸ್ಮಾರ್ಟ್‌ಫೋನ್, ಮೊಟೊರೊಲಾ ಎಡ್ಜ್ 60 ಸ್ಟೈಲಸ್ ಅನ್ನು ಬಿಡುಗಡೆ ಮಾಡಿದೆ. ಈ ಫೋನಿನ ಬಹು ದೊಡ್ಡ ವಿಶೇಷತೆ ಎಂದರೆ ಅದರ ಇನ್ ಬಿಲ್ಟ್ ಸ್ಟೈಲಸ್, ಇದರೊಂದಿಗೆ ಸ್ಕೆಚ್ ಮಾಡಬಹುದು. ನೋಟ್ ವರ್ಕ್ ಮಾಡಬಹುದು, ಜೊತೆಗೆ ಆರ್ಟ್ ವರ್ಕ್ ಕೂಡಾ ಕ್ರಿಯೇಟ್ ಮಾಡಬಹುದು. ಇದಲ್ಲದೆ, ಫೋನ್‌ನಲ್ಲಿ ಹಲವು ಸುಧಾರಿತ AI ವೈಶಿಷ್ಟ್ಯಗಳನ್ನು ಸಹ ಒದಗಿಸಲಾಗಿದೆ. ಅವುಗಳೆಂದರೆ -ketch to Image, AI Styling और Instant Shopping with Glance AI. ಈ ಫೋನ್ IP68 ರೇಟಿಂಗ್‌ನೊಂದಿಗೆ ಬರುತ್ತದೆ. ಅಂದರೆ ಇದು ಡಸ್ಟ್ ಮತ್ತು ವಾಟರ್ ಪ್ರೂಫ್ ಆಗಿದೆ. ಈ ಫೋನ್ ಗೆ ಮಿಲಿಟರಿ ಗ್ರೇಡ್ ಸರ್ತಿಫಿಕೆಶನ್ ಕೂಡಾ ಸಿಕ್ಕಿದೆ.
ಬೆಲೆ ಮತ್ತು ಲಭ್ಯತೆ :
ಮೊಟೊರೊಲಾ ಎಡ್ಜ್ 60 ಸ್ಟೈಲಸ್ ಅನ್ನು ಏಪ್ರಿಲ್ 23 ರಂದು ಮಧ್ಯಾಹ್ನ 12 ಗಂಟೆಯಿಂದ ಫ್ಲಿಪ್‌ಕಾರ್ಟ್, ಮೊಟೊರೊಲಾ ಅಧಿಕೃತ ವೆಬ್‌ಸೈಟ್ ಮತ್ತು ರಿಲಯನ್ಸ್ ಡಿಜಿಟಲ್ ಮತ್ತು ದೇಶಾದ್ಯಂತ ಆಫ್‌ಲೈನ್ ರಿಟೇಲ್ ಅಂಗಡಿಗಳಲ್ಲಿ ಖರೀದಿಸಬಹುದು. ಈ ಫೋನ್ 8GB RAM ಮತ್ತು 256GB ಸ್ಟೋರೇಜ್ ರೂಪಾಂತರಗಳಲ್ಲಿ ಲಭ್ಯವಿದ್ದು, ಇದರ ಬೆಲೆ 22,999 ರೂಪಾಯಿ. ಇದರ ಮೇಲೆ ಬ್ಯಾಂಕ್ ಕೊಡುಗೆ ಮತ್ತು ವಿನಿಮಯ ಕೊಡುಗೆಯ ಲಾಭವನ್ನು ಪಡೆದುಕೊಂಡರೆ, 21,999 ರೂಪಾಯಿಗೆ ಖರೀದಿಸಬಹುದು.
ವಿಶೇಷಣಗಳು ಮತ್ತು ವೈಶಿಷ್ಟ್ಯಗಳು :
ಮೊಟೊರೊಲಾ ಎಡ್ಜ್ 60 ಸ್ಟೈಲಸ್ 6.7-ಇಂಚಿನ 1.5K pOLED ಪಂಚ್-ಹೋಲ್ ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್ ಮತ್ತು 3000 nits ಬ್ರೈಟ್ ನೆಸ್ ಅನ್ನು ಸಪೋರ್ಟ್ ಮಾಡುತ್ತದೆ. ಈ ಡಿಸ್ಪ್ಲೇಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆ ನೀಡಲಾಗಿದೆ. ಇದು ಸ್ನಾಪ್‌ಡ್ರಾಗನ್ 7s Gen 2 ಪ್ರೊಸೆಸರ್ ಜೊತೆಗೆ 8GB RAM ಮತ್ತು 256GB UFS 2.2 ಸ್ಟೋರೇಜ್‌ನೊಂದಿಗೆ ಬರುತ್ತದೆ.
ಕ್ಯಾಮೆರಾದ ಬಗ್ಗೆ ಹೇಳುವುದಾದರೆ, ಇದು 50MP ಮುಖ್ಯ ಸೋನಿ LYT 700C ಸೆನ್ಸರ್ ಅನ್ನು ಹೊಂದಿದೆ. ಜೊತೆಗೆ 13MP ಅಲ್ಟ್ರಾವೈಡ್ ಲೆನ್ಸ್ ಮತ್ತು 3-ಇನ್-1 ಲೈಟ್ ಸೆನ್ಸರ್ ಅನ್ನು ಕೂಡಾ ಒಳಗೊಂಡಿದೆ. ಇದರಲ್ಲಿ ಸೆಲ್ಫಿಗಾಗಿ 32MP ಮುಂಭಾಗದ ಕ್ಯಾಮೆರಾವನ್ನು ನೀಡಲಾಗಿದೆ. ಶಕ್ತಿಗಾಗಿ, ಇದು ದೊಡ್ಡ 5000mAh ಬ್ಯಾಟರಿಯನ್ನು ಹೊಂದಿದೆ. ಇದು 68W ವೈರ್ಡ್ ಚಾರ್ಜಿಂಗ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಇದನ್ನೂ ಓದಿ : Jio ಸೂಪರ್ ಪ್ಲಾನ್: ವರ್ಷಪೂರ್ತಿ ಸಿಗುತ್ತೆ ಬಲ್ಕ್ ಡೇಟಾ + ಓಟಿಟಿ ಪ್ರಯೋಜನ
ಈ ಫೋನ್ vegan leather ಬ್ಯಾಕ್ ಪ್ಯಾನಲ್ ಹೊಂದಿದ್ದು, ಪ್ರೀಮಿಯಂ ಲುಕ್ ನೀಡುತ್ತದೆ. ಇದು ಡಾಲ್ಬಿ ಅಟ್ಮಾಸ್ ಸ್ಟೀರಿಯೊ ಸ್ಪೀಕರ್‌ಗಳು, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಸ್ಟೈಲಸ್ ಸಪೋರ್ಟ್ ಅನ್ನು ಹೊಂದಿದೆ. ಈ ಕಾರಣದಿಂದಲೇ ಸ್ಕೆಚಿಂಗ್, ನೋಟ್ ವರ್ಕ್, ಆರ್ಟ್ ವರ್ಕ್ ಕ್ರಿಯೇಶನ್ ನಂಥಹ ಕೆಲಸಗಳನ್ನು ಮಾಡಬಹುದು. 5G, 4G, Wi-Fi 6E, ಬ್ಲೂಟೂತ್ 5.4, GPS, GLONASS, NFC ಮತ್ತು USB ಟೈಪ್-C ಪೋರ್ಟ್ ಅನ್ನು ಇ ಫೋನ್ ಒಳಗೊಂಡಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









