Youtube Ad New Rules: ಯೂಟ್ಯೂಬ್‌ನಲ್ಲಿ ವೀಡಿಯೊ ನೋಡುವಾಗ ಆಗಾಗ ಜಾಹೀರಾತುಗಳು ಕಿರಿಕಿರಿ ಉಂಟು ಮಾಡುತ್ತವೆ. ಹೀಗಿರುವಾಗ ಯೂಟ್ಯೂಬ್ ಹೊಸ ನಿಯಮ ತರಲು ಚಿಂತಿಸಿದೆ
ಹೌದು, ಯೂಟ್ಯೂಬ್‌ನಲ್ಲಿ ವೀಡಿಯೊಗಳ ಮಧ್ಯದಲ್ಲಿ ಜಾಹೀರಾತುಗಳಿಂದ ಕಿರಿಕಿರಿ ಉಂಟಾಗುತ್ತದೆ. ಈ ಕಿರಿಕಿರಿಯನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಯೂಟ್ಯೂಬ್ ಚಿಂತಿಸಿದೆ. ಯೂಟ್ಯೂಬ್ ಶೀಘ್ರದಲ್ಲೇ ದೊಡ್ಡ ಬದಲಾವಣೆಯನ್ನು ತರಲಿದೆ. ಈಗ ಕಂಪನಿಯು ತನ್ನ ಜಾಹೀರಾತು ನೀತಿಯನ್ನು ಬದಲಾಯಿಸಲು ಸಿದ್ಧವಾಗಿದೆ. ಹಾಗಾಗಿ ಈಗ YouTubeನಲ್ಲಿ ವೀಡಿಯೊ ಸ್ಟ್ರೀಮಿಂಗ್ ಅನುಭವ ಮೊದಲಿಗಿಂತ ಉತ್ತಮವಾಗಿರಲಿದೆ.
ಹೆಚ್ಚಿನವರು ಬಿಡುವಿನ ಸಮಯದಲ್ಲಿ YouTube ವೀಕ್ಷಿಸುತ್ತಾರೆ. ಚಲನಚಿತ್ರಗಳು ಮತ್ತು ಹಾಡುಗಳಿಂದ ಹಿಡಿದು ಆಯ್ಕೆಯ ವಿವಿಧ ವಿಷಯಗಳವರೆಗೆ ವೀಡಿಯೊಗಳನ್ನು ವೀಕ್ಷಿಸುವ ಮೂಲಕ ನಾವು ಜ್ಞಾನ ಮತ್ತು ಮನರಂಜನೆಯನ್ನು ಪಡೆಯಬಹುದು. ಆದರೆ ವೀಡಿಯೊಗಳ ಮಧ್ಯದಲ್ಲಿ ಜಾಹೀರಾತುಗಳು ನಮ್ಮನ್ನು ಹೆಚ್ಚಾಗಿ ಕಿರಿಕಿರಿಗೊಳಿಸುತ್ತವೆ. ಈ ಕಿರಿಕಿರಿಯನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಯೂಟ್ಯೂಬ್ ಚಿಂತಿಸಿದೆ. ಯೂಟ್ಯೂಬ್ ಶೀಘ್ರದಲ್ಲೇ ದೊಡ್ಡ ಬದಲಾವಣೆಯನ್ನು ತರಲಿದೆ. ಈಗ ಕಂಪನಿಯು ತನ್ನ ಜಾಹೀರಾತು ನೀತಿಯನ್ನು ಬದಲಾಯಿಸಲು ಸಿದ್ಧವಾಗಿದೆ.
ಹೊಸ ಬದಲಾವಣೆಗಳು ಮೇ ತಿಂಗಳಿನಿಂದ YouTube ನಲ್ಲಿ ಲಭ್ಯವಿರುತ್ತವೆ. ಈ ಮೂಲಕ ವೀಕ್ಷಕರು ಹಾಗೂ ಬಳಕೆದಾರರು ಯೂಟ್ಯೂಬ್ ಬಳಸುವುದನ್ನು ಆನಂದಿಸುತ್ತಾರೆ. ಹಾಗಾಗಿ ಈಗ YouTube ನಲ್ಲಿ ವೀಡಿಯೊ ಸ್ಟ್ರೀಮಿಂಗ್ ಅನುಭವ ಮೊದಲಿಗಿಂತ ಉತ್ತಮವಾಗಿರಲಿದೆ. . ಇಲ್ಲಿಯವರೆಗೆ, ಯೂಟ್ಯೂಬ್‌ನಲ್ಲಿ ಯಾವುದೇ ವೀಡಿಯೊ ವೀಕ್ಷಿಸುವಾಗ ಜಾಹೀರಾತುಗಳನ್ನು ಎಲ್ಲಿ ಬೇಕಾದರೂ ನೋಡಬಹುದಿತ್ತು. ಮೇ ತಿಂಗಳಿನಿಂದ, ಜಾಹೀರಾತುಗಳು ನ್ಯಾಚುರಲ್ ಬ್ರೇಕ್‌ಪಾಯಿಂಟ್‌ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತವೆ
ಆದರೆ ಕಂಪನಿಯು ಈಗ ಈ ನೀತಿಯನ್ನು ಬದಲಾಯಿಸಲು ಮುಂದಾಗಿದೆ. ಹೊಸ ನೀತಿಯ ಪ್ರಕಾರ, ಯೂಟ್ಯೂಬ್ ದೃಶ್ಯ ಅಥವಾ ಸಂಭಾಷಣೆಯ ಮಧ್ಯದಲ್ಲಿ ಜಾಹೀರಾತುಗಳನ್ನು ತೋರಿಸುವುದನ್ನು ತಡೆಯುತ್ತದೆ. ಬಳಕೆದಾರರ ಅನುಕೂಲಕ್ಕಾಗಿ YouTube ಈ ಬದಲಾವಣೆಯನ್ನು ಮಾಡಿದೆ. ವೀಡಿಯೊಗಳ ಸಮಯದಲ್ಲಿ ಜಾಹೀರಾತುಗಳು ಸ್ವಾಭಾವಿಕವಾಗಿಯೇ ಬಳಕೆದಾರರನ್ನು ಕಿರಿಕಿರಿಗೊಳಿಸುತ್ತವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.









