)
Smartphone: ವಿಶ್ವದ ಮೊದಲ 10000mAh ಬ್ಯಾಟರಿ ಸಾಮರ್ಥ್ಯದ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದ್ದು ಬಲಿಷ್ಠ ಬ್ಯಾಟರಿ ಸಾಮರ್ಥ್ಯದ ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿರುವವರಿಗಾಗಿ ಇದು ಅನುಕೂಲವಾಗಲಿದೆ.
ಇತ್ತೀಚಿನ ಸೋರಿಕೆಯಾದ ವರದಿಯ ಪ್ರಕಾರ, 10,000mAh ಬ್ಯಾಟರಿ ಸಾಮರ್ಥ್ಯ ಹೊಂದಿರುವ ವಿಶ್ವದ ಮೊದಲ ಪವರ್ ಪ್ಯಾಕ್ ಫೋನ್ ಈ ವರ್ಷಾಂತ್ಯದಲ್ಲಿ ಇಲ್ಲವೇ, 2026ರ ಆರಂಭದಲ್ಲಿ ಮಾರುಕಟ್ಟೆ ಬರಲಿದೆ ಎಂದು ತಿಳಿದುಬಂದಿದೆ.
ಚೀನಾದ ಟಿಪ್ಸ್ಟರ್ ಡಿಜಿಟಲ್ ಚಾಟ್ ಸ್ಟೇಷನ್ ಮೈಕ್ರೋಬ್ಲಾಗಿಂಗ್ ವೀಬೊ ಪೋಸ್ಟ್ ನಲ್ಲಿ ಈ ಬಗ್ಗೆ ಮಾಹಿತಿ ಬಹಿರಂಗಗೊಂಡಿದ್ದು, ಮೊದಲ ಬಾರಿಗೆ 5-ಅಂಕಿಯ ಬ್ಯಾಟರಿ ಸಾಮರ್ಥ್ಯದೊಂದಿಗೆ ಸ್ಮಾರ್ಟ್ಫೋನ್ ಬರಲಿದೆ ಎಂದು ಅದು ಹೇಳಿದೆ. ಯಾವುದೇ ಬ್ರಾಂಡ್ ಅನ್ನು ಹೆಸರಿಸದ ಟಿಪ್ಸ್ಟರ್ ಮುಂದಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ 10,000mAh ಬ್ಯಾಟರಿ ಸಾಮರ್ಥ್ಯ ವಿಶ್ವದ ಮೊದಲ ಪವರ್ ಪ್ಯಾಕ್ ಫೋನ್ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದು ಮಧ್ಯಮ ಶ್ರೇಣಿಯ ಸ್ಮಾರ್ಟ್ಫೋನ್ ಆಗಿರಲಿದೆ ಎಂದು ತಿಳಿಸಿದೆ.
ಕೆಲವು ವರದಿಗಳ ಪ್ರಕಾರ, 10,000mAh ಬ್ಯಾಟರಿಯೊಂದಿಗೆ ಕಾನ್ಸೆಪ್ಟ್ ಫೋನ್ ಪ್ರದರ್ಶಿಸಿದ್ದ Realme ವಿಶ್ವದ ಮೊದಲ ದೊಡ್ಡ ಬ್ಯಾಟರಿ ಸ್ಮಾರ್ಟ್ಫೋನ್ ಮಾಡಬಹುದು ಎನ್ನಲಾಗುತ್ತಿದೆ. ಆದಾಗ್ಯೂ, ಈ ಬಗ್ಗೆ ಕಂಪನಿಯ ಮೂಲಗಳಿಂದ ಯಾವುದೇ ಖಚಿತ ಮಾಹಿತಿ ಲಭ್ಯವಿಲ್ಲ.
ಪವರ್ ಬ್ಯಾಂಕ್ ಬೇಕೇ ಆಗಿಲ್ಲ...
ಇನ್ನೂ ನಿರೀಕ್ಷೆಯಂತೆ 10,000mAh ಬ್ಯಾಟರಿ ಸಾಮರ್ಥ್ಯದ ಸ್ಮಾರ್ಟ್ಫೋನ್ ಬಿಡುಗಡೆಯಾದರೆ ಪವರ್ ಬ್ಯಾಂಕ್ಗಳ ಅವಶ್ಯಕತೆ ಕ್ಷೀಣಿಸಲಿದೆ. ಇದರಿಂದ ಮೊಬೈಲ್ ಬಳಕೆದಾರರು ಬ್ಯಾಟರಿ ಖಾಲಿಯಾಗುವ ಬಗ್ಗೆ ಯಾವುದೇ ಚಿಂತೆಯಿಲ್ಲದೆ ಸ್ಮಾರ್ಟ್ಫೋನ್ ಬಳಸಲು ಸಾಧ್ಯವಾಗುತ್ತದೆ.
ಗಮನಾರ್ಹವಾಗಿ, ಈ ತಂತ್ರಜ್ಞಾನ ಯುಗದಲ್ಲಿ ಕಳೆದ ಕೆಲ ವರ್ಷಗಳಿಂದ ಕೆಲವು ಬ್ರಾಂಡೆಡ್ ಸ್ಮಾರ್ಟ್ಫೋನ್ ಕಂಪನಿಗಳು 5000mAh ನಿಂದ 6000mAh ವರೆಗಿನ ಬ್ಯಾಟರಿ ಸಾಮರ್ಥ್ಯದ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುತ್ತಿವೆ. ಅವುಗಳಲ್ಲಿ, ಕೆಲವು ಕಂಪನಿಗಳು 7000mAh ನಿಂದ 7300mAh ಬಲಿಷ್ಠ ಬ್ಯಾಟರಿಗಳೊಂದಿಗೆ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿವೆ. ಆದರೆ, ದಿನವಿಡೀ ಫೋನ್ ಬಳಸುವವರ ಸಂಖ್ಯೆ ಅಧಿಕವಾಗಿರುವುದರಿಂದ ಹೆಚ್ಚು ಬ್ಯಾಟರಿ ಪ್ಯಾಕ್ಅಪ್ ಹೊಂದಿರುವ ಮೊಬೈಲ್ ಫೋನ್ಗಳ ಬಗ್ಗೆ ಒಲವು ತೋರುತ್ತಿರುವುದರಿಂದ ಕಂಪನಿಗಳ ನಡುವೆ ಪೈಪೋಟಿ ಅಧಿಕವಾಗಿದ್ದು 10,000mAh ಬ್ಯಾಟರಿ ಸಾಮರ್ಥ್ಯದ ಸ್ಮಾರ್ಟ್ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಕಂಪನಿಗಳು ಚಿಂತಿಸುತ್ತಿವೆ ಎನ್ನಲಾಗುತ್ತಿದೆ.