Geyser Bucket: ಹಿಂದಿನ ಕಾಲದಂತೆ ಪ್ರಸ್ತುತ ಎಲ್ಲಾ ಮನೆಗಳಲ್ಲೂ ನೀರು ಕಾಯಿಸುವ ಹಂಡೆ ಒಲೆ ಇರುವುದಿಲ್ಲ. ಹಾಗಾಗಿ, ಬಿಸಿ ನೀರಿಗಾಗಿ ಗೀಸರ್ ಕೊಳ್ಳುವುದು ಅನಿವಾರ್ಯವಾಗಿದೆ. ಆದರೆ, ಸುಮಾರು 10 ರಿಂದ 15 ಲೀಟರ್ ಗೀಸರ್ ಖರೀದಿಸಬೇಕೆಂದರೂ ಅದರ ಬೆಲೆ ಕನಿಷ್ಠ  ₹ 5000 ರಿಂದ ₹ 10000ವರೆಗೆ ಇರುತ್ತದೆ. ಹಾಗಾಗಿ, ಇದು ಬಜೆಟ್ ಮೇಲೂ ಪರಿಣಾಮ ಬೀರುತ್ತದೆ. ಆದರೆ, ಇನ್ನು ಮುಂದೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಮಾರುಕಟ್ಟೆಯಲ್ಲಿ, ಇದೀಗ ಬಕೆಟ್ ಗೀಸರ್ ಹೆಚ್ಚು ಸಂಚಲನ ಮೂಡಿಸಿದೆ. ಇದನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಕೈಗೆಟುಕುವ ದರದಲ್ಲಿ ಖರೀದಿಸಬಹುದಾಗಿದೆ. 


COMMERCIAL BREAK
SCROLL TO CONTINUE READING

ಹೌದು, ಇತ್ತೀಚಿನ ದಿನಗಳಲ್ಲಿ ಬಕೆಟ್ ಗೀಸರ್ ಹೆಚ್ಚು ಟ್ರೆಂಡ್ ಆಗಿದೆ. ಎಲ್ಲಿ ಬೇಕಾದರೂ ಸುಲಭವಾಗಿ ಕೊಂಡೊಯ್ಯಬಹುದಾದ ಬಕೆಟ್ ಗೀಸರ್ ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ತಿಳಿಯಿರಿ.


ಇದನ್ನೂ ಓದಿ- ಈ ಒಂದು ವಸ್ತುವನ್ನು ಮನೆಯಲ್ಲಿ ಹಾಕಿ.! ವಿದುತ್ ಬಿಲ್ ಝೀರೋ ಆಗುವುದು .!


ಬಕೆಟ್ ಗೀಸರ್ ವೈಶಿಷ್ಟ್ಯಗಳು:
ಬಕೆಟ್‌ನಲ್ಲಿಯೇ ನೀರು ಬಿಸಿ ಮಾಡಬಲ್ಲ ಸೌಕರ್ಯವನ್ನು ಹೊಂದಿರುವುದರಿಂದ ಇದನ್ನು ಬಕೆಟ್ ಗೀಸರ್ ಎಂದು ಕರೆಯಲಾಗುತ್ತಿದೆ. ಇದರ ವೈಶಿಷ್ಟ್ಯಗಳು ಕೆಳಕಂಡಂತಿವೆ:
>> ಇದರಲ್ಲಿ ಸುಮಾರು 20 ಲೀಟರ್‌ನಿಂದ 25 ಲೀಟರ್‌ಗಳಷ್ಟು ನೀರನ್ನು ಒಂದೇ ಬಾರಿಗೆ ಬಿಸಿ ಮಾಡಬಹುದಾಗಿದೆ. 
>> ಸಾಮಾನ್ಯ ಗೀಸರ್‌ಗಳಿಗೆ ಹೋಲಿಸಿದರೆ, ಇದು ಅತ್ಯಂತ ಆರ್ಥಿಕ, ಅತ್ಯಂತ ಶಕ್ತಿಯುತ ಉತ್ಪನ್ನವಾಗಿದೆ.
>> ಇದರಲ್ಲಿರುವ ನೀರನ್ನು ಕಾಯಿಸಲು ಹೆಚ್ಚು ಶ್ರಮಪಡಬೇಕಿಲ್ಲ.
>> ಬಕೆಟ್ ಒಳಗೆ ಬಿಸಿಮಾಡಲು ಇಮ್ಮರ್ಶನ್ ಹೀಟರ್ ಇದೆ.
>>  ಕ್ಷಣಾರ್ಧದಲ್ಲಿ ನೀರನ್ನು ಬಿಸಿ ಮಾಡಿ ಕೆಲಸ ಮುಗಿದ ನಂತರ ತಕ್ಷಣ ಅದನ್ನು ಒಯ್ಯಬಹುದು. 


ಇದನ್ನೂ ಓದಿ- Samsung Offer: 21,400 ರೂಪಾಯಿ ರಿಯಾಯಿತಿ ದರದಲ್ಲಿ ಸಿಗುತ್ತಿದೆ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ .!


ಬಕೆಟ್ ಗೀಸರ್ ಬೆಲೆ:
ಈ ಬಕೆಟ್ ಗೀಸರ್ ಅನ್ನು ಗ್ರಾಹಕರು ₹ 1200 ರಿಂದ ₹ 2000 ಗಳಲ್ಲಿ ಖರೀದಿಸಬಹುದಾಗಿದೆ. ವಿಶೇಷವೆಂದರೆ ಇದು ಆಫ್‌ಲೈನ್ ಮತ್ತು ಆನ್‌ಲೈನ್ ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.