)
ಭಾರತ ಸರ್ಕಾರ ಮತ್ತು ಅದರ ಸಂಸ್ಥೆಗಳು ಸಾಮಾನ್ಯ ಬಳಕೆದಾರರಿಗೆ ಅನುಕೂಲವಾಗುವಂತೆ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿವೆ. ಸುರಕ್ಷಿತ ಪಾವತಿಗಳು ಮತ್ತು ವಹಿವಾಟುಗಳನ್ನು ಈ ವೈಶಿಷ್ಟ್ಯಗಳು ಖಚಿತಪಡಿಸುತ್ತವೆ. ಈಗ, UPI ಲೈಟ್ ಪಾವತಿಗಳನ್ನು ಭಾರತದಲ್ಲಿ ವೇರೆಬಲ್ ಸ್ಮಾರ್ಟ್ಗ್ಲಾಸ್ಗಳ ಮೂಲಕ ಮಾಡಬಹುದು. ಬಳಕೆದಾರರು ಕೇವಲ QR ಕೋಡ್ ಅನ್ನು ಸ್ಕ್ಯಾನ್ ಮಾಡಿ ವಾಯ್ಸ್ ಕಮಾಂಡ್ ನೀಡಬೇಕಾಗುತ್ತದೆ. ವಿಶೇಷವೆಂದರೆ ಇದಕ್ಕೆ ಮೊಬೈಲ್ ಫೋನ್ ಅಥವಾ ಯಾವುದೇ ಪಿನ್ ಅಗತ್ಯವಿಲ್ಲ.
ಪಿನ್ ಅಥವಾ ಫೋನ್ ಇಲ್ಲದೆ UPI ಪೇಮೆಂಟ್ ಮಾಡುವುದು ಹೇಗೆ ? :
UPI ಲೈಟ್ ಪಾವತಿಗಳನ್ನು ವೇರೆಬಲ್ ಸ್ಮಾರ್ಟ್ ಗ್ಲಾಸ್ಗಳ ಮೂಲಕ ಮಾಡಬಹುದು ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಘೋಷಿಸಿದೆ. ಸಂಸ್ಥೆಯ ಪ್ರಕಾರ, ಈ ವೈಶಿಷ್ಟ್ಯಕ್ಕೆ ಮೊಬೈಲ್ ಫೋನ್ ಅಥವಾ ಪಿನ್ ಸಂಖ್ಯೆಯನ್ನು ನಮೂದಿಸುವ ಅಗತ್ಯವಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಉಪ ಗವರ್ನರ್ ಟಿ. ರಬಿ ಶಂಕರ್ ಅವರು ಗ್ಲೋಬಲ್ ಫಿನ್ಟೆಕ್ ಫೆಸ್ಟ್ 2025 ರಲ್ಲಿ ಈ ಹೊಸ ಡಿಜಿಟಲ್ ಪಾವತಿ ಸೌಲಭ್ಯವನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ. . UPI ಲೈಟ್ ಅನ್ನು ನಿರ್ದಿಷ್ಟವಾಗಿ ಸಣ್ಣ-ಮೌಲ್ಯದ, ಪುನರಾವರ್ತಿತ ಪಾವತಿಗಳಿಗಾಗಿ ಡೆವೆಲಪ್ ಮಾಡಲಾಗಿದೆ.
ಬಿಡುಗಡೆಯಾಗಿದೆ ವಿಡಿಯೋ :
ಬಿಡುಗಡೆಯಾಗಿರುವ ವಿಡಿಯೋವನ್ನು ಗಮನಿಸಿದರೆ UPI ಲೈಟ್ ಪೇಮೆಂಟ್ ಕೇವಲ speak, and pay ಎನ್ನುವಂತಿದೆ. ಈ ವೀಡಿಯೊವನ್ನು NPCI ಬಿಡುಗಡೆ ಮಾಡಿದೆ. ಈ ವೈಶಿಷ್ಟ್ಯವು ಚಿಲ್ಲರೆ ವ್ಯಾಪಾರ, ಊಟ ಮತ್ತು ಸಾರಿಗೆಯಂತಹ ದೈನಂದಿನ ಪಾವತಿಗಳನ್ನು ಗುರಿಯಾಗಿರಿಸಿಕೊಂಡಿದ್ದು, ಇದು ಡಿಜಿಟಲ್ ಪಾವತಿಗಳನ್ನು ಸುಲಭ ಮತ್ತು ಸುಗಮಗೊಳಿಸುತ್ತದೆ. ಈ ಉಪಕ್ರಮವು ವೇರೆಬಲ್ ಪರಿಸರಕ್ಕೆ UPIಯ ಮೊದಲ ವಿಸ್ತರಣೆಯಾಗಿದೆ.
ಇದರಿಂದ ಯಾರಿಗೆ ಹೆಚ್ಚಿನ ಲಾಭವಾಗುತ್ತದೆ :
ಇದು ಬ್ಯಾಂಕುಗಳು ಮತ್ತು ಪಾವತಿ ಸೇವಾ ಪೂರೈಕೆದಾರರಿಗೂ ಪ್ರಯೋಜನವನ್ನು ನೀಡುತ್ತದೆ. ಏಕೆಂದರೆ ಸಿಬಿಎಸ್ ಅಲ್ಲದ (ಕೋರ್ ಬ್ಯಾಂಕಿಂಗ್ ವ್ಯವಸ್ಥೆ) ವ್ಯಾಲೆಟ್ ವಹಿವಾಟುಗಳು ಕೋರ್ ಬ್ಯಾಂಕಿಂಗ್ ವ್ಯವಸ್ಥೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ವೇರೆಬಲ್ ಸ್ಮಾರ್ಟ್ಗ್ಲಾಸ್ಗಳ ಮೂಲಕ ಯುಪಿಐ ಲೈಟ್ ಪಾವತಿಗಳನ್ನು ಸಕ್ರಿಯಗೊಳಿಸುವುದು ಜಾಗತಿಕ ಡಿಜಿಟಲ್ ಪಾವತಿ ನಾವೀನ್ಯತೆಯಲ್ಲಿ ಭಾರತವನ್ನು ನಾಯಕನನ್ನಾಗಿ ಮಾಡುವತ್ತ ಮಹತ್ವದ ಉಪಕ್ರಮವಾಗಿದೆ ಎಂದು ಎನ್ಪಿಸಿಐ ಹೇಳಿದೆ.