BSNL Holi Offer: ಹೋಳಿ ಹಬ್ಬದ ಸಂದರ್ಭದಲ್ಲಿ ಬಿಎಸ್ಎನ್ಎಲ್ ಬಳಕೆದಾರರಿಗೆ ಉತ್ತಮ ಆಫರ್ ನೀಡಿದೆ. ಇಲ್ಲಿ ದೀರ್ಘಾವಧಿಯ ಮಾನ್ಯತೆಯ ಯೋಜನೆಯನ್ನು ತೆಗೆದುಕೊಂಡರೆ, ಒಂದು ತಿಂಗಳ ಹೆಚ್ಚುವರಿ ವ್ಯಾಲಿಡಿಟಿ ಪಡೆಯಬಹುದು. ಇದಕ್ಕೂ ಮುನ್ನ ಕೂಡಾ ಬಿಎಸ್ಎನ್ಎಲ್ ಹೋಳಿ ಸಂದರ್ಭದಲ್ಲಿ ತನ್ನ ಬಳಕೆದಾರರಿಗೆ ಉತ್ತಮ ಆಫರ್ ನೀಡಿದೆ.
ಬಿಎಸ್ಎನ್ಎಲ್ ನ ಹೆಚ್ಚುವರಿ ವ್ಯಾಲಿಡಿಟಿ ಪ್ಲಾನ್ ಆಫರ್:
ಬಿಎಸ್ಎನ್ಎಲ್ ತನ್ನ ಬಳಕೆದಾರರಿಗೆ ನಿರಂತರವಾಗಿ ಹೊಸ ಕೊಡುಗೆಗಳನ್ನು ನೀಡುತ್ತಿದೆ. ಕಂಪನಿಯ ಈ ಹೊಸ ಕೊಡುಗೆ ಮಾರ್ಚ್ 31 ರವರೆಗೆ ಲಭ್ಯವಿದೆ. ಈ ಕೊಡುಗೆಯಡಿಯಲ್ಲಿ, ಗ್ರಾಹಕರು BSNLನ 1499 ರೂ. ಯೋಜನೆಯಲ್ಲಿ 29 ದಿನಗಳ ಹೆಚ್ಚುವರಿ ವ್ಯಾಲಿಡಿಟಿಯನ್ನು ಪಡೆಯುತ್ತಾರೆ. ಇದರರ್ಥ ಬಳಕೆದಾರರು ಒಟ್ಟು 365 ದಿನಗಳ ಮಾನ್ಯತೆಯ ಪ್ರಯೋಜನವನ್ನು ಪಡೆಯುತ್ತಾರೆ.
ಇದನ್ನೂ ಓದಿ : Aadhaar Card: ಆಧಾರ್ ಕಾರ್ಡ್‌ನಲ್ಲಿರುವ ನಿಮ್ಮ ಹಳೆಯ ಫೋಟೋವನ್ನು ಬದಲಾಯಿಸುವುದು ಹೇಗೆ ಗೊತ್ತಾ? ತಂಬಾ ಸುಲಭ
BSNLನ 1499 ರೂ. ಪ್ಲಾನ್ ಪ್ರಯೋಜನ :
ಅನಿಯಮಿತ ಕರೆ
ದಿನಕ್ಕೆ 100 SMS
24 ಜಿಬಿ ಡೇಟಾ
ಇದಕ್ಕೂ ಮುನ್ನ ಕೂಡಾ ಬಿಎಸ್ಎನ್ಎಲ್ ನೀಡಿತ್ತು ಹೋಳಿ ಧಮಾಕಾ ಆಫರ್ :
ಇತ್ತೀಚೆಗೆ ಬಿಎಸ್ಎನ್ಎಲ್ ಮತ್ತೊಂದು ಹೋಳಿ ಧಮಾಕಾ ಆಫರ್ ಅನ್ನು ಪ್ರಾರಂಭಿಸಿದೆ. ಇದರಲ್ಲಿ ಕೇವಲ 2399 ರೂ.ಗಳಿಗೆ, BSNL ತನ್ನ ಕೋಟ್ಯಂತರ ಗ್ರಾಹಕರಿಗೆ 425 ದಿನಗಳ ದೀರ್ಘಾವಧಿಯ ಮಾನ್ಯತೆಯ ಯೋಜನೆಯನ್ನು ನೀಡುತ್ತಿದೆ. ಕಂಪನಿಯ ಈ ಕೊಡುಗೆಯ ಅಡಿಯಲ್ಲಿ, ಗ್ರಾಹಕರು 425 ದಿನಗಳವರೆಗೆ ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ಲೋಕಲ್ ಮತ್ತು STD ಕರೆಗಳನ್ನು ಪಡೆಯುತ್ತಾರೆ. ಇದರೊಂದಿಗೆ 100 ಉಚಿತ SMS ಸೌಲಭ್ಯವೂ ಲಭ್ಯವಿರುತ್ತದೆ.
ಇದನ್ನೂ ಓದಿ : ವಾಟ್ಸಾಪ್‌ನಲ್ಲಿ ಸಿಗುತ್ತೆ ಇನ್‌ಸ್ಟಾಗ್ರಾಮ್‌ನಂತ ವೈಶಿಷ್ಟ್ಯ..!
ಇಷ್ಟೇ ಅಲ್ಲ, ಈ 15 ತಿಂಗಳ ರೀಚಾರ್ಜ್ ಯೋಜನೆಯಲ್ಲಿ ಒಟ್ಟು 850GB ಡೇಟಾ ಲಭ್ಯವಿದೆ. ಇದರರ್ಥ ಗ್ರಾಹಕರು 425 ದಿನಗಳವರೆಗೆ ಪ್ರತಿದಿನ 2GB ಡೇಟಾದ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತದೆ. ಹೆಚ್ಚು ಡೇಟಾ ಬಳಸುವವರಿಗೆ ಈ ಯೋಜನೆ ಆರ್ಥಿಕವಾಗಿ ಲಾಭದಾಯಕವಾಗಬಹುದು. ಆದರೆ ಈ ಯೋಜನೆಯನ್ನು ಮಾರ್ಚ್ 31 ರ ಮೊದಲು ತೆಗೆದುಕೊಳ್ಳಬೇಕಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ









