)
OnePlus 13, OnePlus 13R, OnePlus 13s: ಒನ್ಪ್ಲಸ್ ತನ್ನ ದೀಪಾವಳಿ ಮಾರಾಟವನ್ನ ಘೋಷಿಸಿದೆ. ಕಂಪನಿಯು ತನ್ನ ಇತ್ತೀಚಿನ ಪ್ರೀಮಿಯಂ ಫೋನ್ಗಳು, ಟ್ಯಾಬ್ಲೆಟ್ಗಳು ಮತ್ತು IOT ಸಾಧನಗಳ ಮೇಲೆ ಅದ್ಭುತ ಡೀಲ್ಗಳನ್ನ ನೀಡುತ್ತಿದೆ. ಈ ಮಾರಾಟವು ಸೆಪ್ಟೆಂಬರ್ 22ರಂದು ಒನ್ಪ್ಲಸ್ ವೆಬ್ಸೈಟ್ ಮತ್ತು ಅಮೆಜಾನ್ನಲ್ಲಿ ಪ್ರಾರಂಭವಾಗಲಿದೆ. ಬಳಕೆದಾರರು ಒನ್ಪ್ಲಸ್ ಫೋನ್ಗಳು, ಟ್ಯಾಬ್ಲೆಟ್ಗಳು, ಕೈಗಡಿಯಾರಗಳು ಮತ್ತು ಇಯರ್ಬಡ್ಗಳನ್ನ ಅಗ್ಗದ ಬೆಲೆಗೆ ಖರೀದಿಸಬಹುದು. ಬಳಕೆದಾರರು ಒನ್ಪ್ಲಸ್ ದೀಪಾವಳಿ ಮಾರಾಟದ ಸಮಯದಲ್ಲಿ ಲಭ್ಯವಿರುವ ಕೊಡುಗೆಗಳನ್ನ ಆಫ್ಲೈನ್ ಅಂಗಡಿಗಳಲ್ಲಿಯೂ ಪಡೆಯಬಹುದು. ಒನ್ಪ್ಲಸ್ ದೀಪಾವಳಿ ಮಾರಾಟದ ಸಮಯದಲ್ಲಿ ಲಭ್ಯವಿರುವ ಕೊಡುಗೆಗಳ ಕುರಿತ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ...
ಒನ್ಪ್ಲಸ್ 13R: ಈ ವರ್ಷ ಬಿಡುಗಡೆಯಾದ ಒನ್ಪ್ಲಸ್ನ ಪ್ರೀಮಿಯಂ ಸ್ಮಾರ್ಟ್ಫೋನ್ ಸರಣಿಯ ಖರೀದಿಯಲ್ಲಿ ನೀವು ₹12,000ವರೆಗೆ ಉಳಿಸಬಹುದು. ಈ ಸರಣಿಯ ಅತ್ಯಂತ ಕೈಗೆಟುಕುವ ಮಾದರಿಯಾದ ಒನ್ಪ್ಲಸ್ 13R ಮೇಲೆ ₹5,000 ರಿಯಾಯಿತಿ ಲಭ್ಯವಿದೆ. ಹೆಚ್ಚುವರಿಯಾಗಿ ₹2,250ರ ಬ್ಯಾಂಕ್ ಕೊಡುಗೆ ಲಭ್ಯವಿರುತ್ತದೆ. ₹42,999ರ ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾದ ಈ ಫೋನ್ ಅನ್ನ ಈ ಮಾರಾಟದ ಸಮಯದಲ್ಲಿ ₹35,749ರ ಆರಂಭಿಕ ಬೆಲೆಗೆ ಮನೆಗೆ ತರಬಹುದು.
ಒನ್ಪ್ಲಸ್ 13S: ಈ ಮಾರಾಟದ ಸಮಯದಲ್ಲಿ OnePlus 13s ಅನ್ನ ಭರ್ಜರಿ ರಿಯಾಯಿತಿಯಲ್ಲಿ ಖರೀದಿಸಬಹುದು. ಈ ಕೈಗೆಟುಕುವ OnePlus ಫೋನ್ ಅನ್ನ ₹54,999ರ ಆರಂಭಿಕ ಬೆಲೆಗೆ ಬಿಡುಗಡೆ ಮಾಡಲಾಯಿತು. ದೀಪಾವಳಿ ಮಾರಾಟದ ಸಮಯದಲ್ಲಿ ಇದನ್ನ ₹47,749 ಆರಂಭಿಕ ಬೆಲೆಗೆ ಮನೆಗೆ ತರಬಹುದು. ಈ ಫೋನ್ನ ಬೆಲೆಯನ್ನ ₹4,000 ಕಡಿಮೆ ಮಾಡಲಾಗಿದೆ. ಹೆಚ್ಚುವರಿಯಾಗಿ ಫೋನ್ ಖರೀದಿಯ ಮೇಲೆ ₹3,250 ಬ್ಯಾಂಕ್ ರಿಯಾಯಿತಿ ಲಭ್ಯವಿರುತ್ತದೆ.
ಒನ್ಪ್ಲಸ್ 13: ಈ ಸರಣಿಯ ಅತ್ಯಂತ ಪ್ರೀಮಿಯಂ ಫೋನ್ ಆಗಿರುವ OnePlus 13 ಅನ್ನ ಅದರ ಬಿಡುಗಡೆ ಬೆಲೆಗಿಂತಲೂ ₹12,250 ಕಡಿಮೆ ಬೆಲೆಗೆ ಖರೀದಿಸಬಹುದು. ₹64,999 ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾದ ಈ ಫೋನ್, ಬೆಲೆ ಕಡಿತದ ನಂತರ ₹57,749 ಬೆಲೆಗೆ ಲಭ್ಯವಿರುತ್ತದೆ. ಈ ಫೋನ್ ₹8,000 ಬೆಲೆ ಕಡಿತ ಮತ್ತು ₹4,250 ಬ್ಯಾಂಕ್ ರಿಯಾಯಿತಿಯನ್ನ ಹೊಂದಿದೆ.
ಈ ಮಾರಾಟದ ಸಮಯದಲ್ಲಿ OnePlus Nord 5 ಮತ್ತು OnePlus Nord CE 5ಯನ್ನ ಸಹ ರಿಯಾಯಿತಿ ಬೆಲೆಯಲ್ಲಿ ಖರೀದಿಸಬಹುದು. Nord 5ಯನ್ನ ₹31,999 ಆರಂಭಿಕ ಬೆಲೆಗೆ ಬಿಡುಗಡೆ ಮಾಡಲಾಗಿದೆ. ಇದು ₹1,500 ಬೆಲೆ ಕಡಿತ ಮತ್ತು ₹2,000 ಬ್ಯಾಂಕ್ ರಿಯಾಯಿತಿ ಹೊಂದಿದೆ. Nord CE 5 ಸಹ ₹3,000ವರೆಗೆ ರಿಯಾಯಿತಿ ಹೊಂದಿದೆ. ₹24,999 ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾದ ಈ ಫೋನ್ ಅನ್ನ ಈಗ ₹21,499 ಆರಂಭಿಕ ಬೆಲೆಗೆ ಖರೀದಿಸಬಹುದು.