ಶೀಘ್ರವೇ 200MP ಕ್ಯಾಮೆರಾ, 7500mAh ಬ್ಯಾಟರಿಯ Oppo Find X9 ಸ್ಮಾರ್ಟ್‌ಫೋನ್‌ ಬಿಡುಗಡೆ

Oppo Find X9 ಮತ್ತು Find X9 Pro ಸ್ಮಾರ್ಟ್‌ಫೋನ್‌ಗಳು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿವೆ. ಈ ಎರಡೂ Oppo ಫೋನ್‌ಗಳು 200MP ಕ್ಯಾಮೆರಾ ಮತ್ತು 7500mAh ಬ್ಯಾಟರಿ ಸೇರಿದಂತೆ ಪ್ರಭಾವಶಾಲಿ ವೈಶಿಷ್ಟ್ಯಗಳೊಂದಿಗೆ ಬರಲಿವೆ.

Written by - Puttaraj K Alur | Last Updated : Nov 8, 2025, 01:51 PM IST
  • ಶೀಘ್ರವೇ Oppo Find X9 & Find X9 Pro ಸ್ಮಾರ್ಟ್‌ಫೋನ್‌ ಬಿಡುಗಡೆ
  • Oppo ಫೋನ್‌ಗಳು 200MP ಕ್ಯಾಮೆರಾ & 7500mAh ಬ್ಯಾಟರಿ ಹೊಂದಿದೆ
  • ಈ ಸರಣಿಯು ಕಂಪನಿಯ ಇತ್ತೀಚಿನ ColorOS 16 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಬರುತ್ತದೆ
ಶೀಘ್ರವೇ 200MP ಕ್ಯಾಮೆರಾ, 7500mAh ಬ್ಯಾಟರಿಯ Oppo Find X9 ಸ್ಮಾರ್ಟ್‌ಫೋನ್‌ ಬಿಡುಗಡೆ

Oppo Find X9 & Oppo Find X9 Pro Smartphone: ಒಪ್ಪೋ ಫೈಂಡ್ X9 ಮತ್ತು ಒಪ್ಪೋ ಫೈಂಡ್ X9 ಪ್ರೊ ಸ್ಮಾರ್ಟ್‌ಫೋನ್‌ ಶೀಘ್ರದಲ್ಲೇ ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿವೆ. ಒಪ್ಪೋದ ಈ ಎರಡೂ ಫೋನ್‌ಗಳು ಈಗಾಗಲೇ ಚೀನಾದಲ್ಲಿ ಬಿಡುಗಡೆಯಾಗಿವೆ. ಇವುಗಳು 200MP ಕ್ಯಾಮೆರಾ ಸೇರಿದಂತೆ ಹಲವಾರು ಪ್ರಭಾವಶಾಲಿ ವೈಶಿಷ್ಟ್ಯಗಳನ್ನ ಹೊಂದಿವೆ. ಕಂಪನಿಯು ಈ ಫೋನ್‌ಗಳ ಬಿಡುಗಡೆ ದಿನಾಂಕವನ್ನ ದೃಢಪಡಿಸಿದೆ. ಈ ಫೋನ್‌ಗಳು ಕಳೆದ ವರ್ಷ ಬಿಡುಗಡೆಯಾದ ಒಪ್ಪೋ ಫೈಂಡ್ X8 ಮತ್ತು ಫೈಂಡ್ X8 ಪ್ರೊಗೆ ಅಪ್‌ಗ್ರೇಡ್ ಆಗಲಿವೆ. ಈ ವರ್ಷ ಕಂಪನಿಯು ಫೋನ್‌ಗಳ ಕ್ಯಾಮೆರಾಗಳು ಮತ್ತು ಹಾರ್ಡ್‌ವೇರ್‌ಗೆ ಪ್ರಮುಖ ಅಪ್‌ಗ್ರೇಡ್‌ಗಳನ್ನ ಮಾಡಿದೆ.

Add Zee News as a Preferred Source

ಒಪ್ಪೋ ತನ್ನ ಅಧಿಕೃತ ಟ್ವಿಟರ್‌ ಹ್ಯಾಂಡಲ್ ಮೂಲಕ ತನ್ನ ಬಿಡುಗಡೆಯನ್ನ ದೃಢಪಡಿಸಿದೆ. ಒಪ್ಪೋದ ಈ ಪ್ರಮುಖ ಸ್ಮಾರ್ಟ್‌ಫೋನ್ ಸರಣಿಯು ನವೆಂಬರ್ 18ರಂದು ಮಧ್ಯಾಹ್ನ 12 ಗಂಟೆಗೆ ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಸರಣಿಯು ಹ್ಯಾಸೆಲ್‌ಬ್ಲಾಡ್-ಬ್ರಾಂಡೆಡ್ ಕ್ಯಾಮೆರಾ ಸೆಟಪ್ ಒಳಗೊಂಡಿರುತ್ತದೆ ಮತ್ತು ಹಲವಾರು ಪ್ರೀಮಿಯಂ AI ವೈಶಿಷ್ಟ್ಯಗಳನ್ನ ಸಹ ಹೊಂದಿರುತ್ತದೆ. ಕಂಪನಿಯು ತನ್ನ ಪೋಸ್ಟ್‌ನಲ್ಲಿ ಫೋನ್‌ನ ವೈಶಿಷ್ಟ್ಯಗಳನ್ನ ಬಹಿರಂಗಪಡಿಸಿದೆ. ಈ ಸರಣಿಯು ಕಂಪನಿಯ ಇತ್ತೀಚಿನ ColorOS 16 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಬರುತ್ತದೆ.

ಇದನ್ನೂ ಓದಿ: DMart ನಲ್ಲಿ ಶಾಪಿಂಗ್‌ ಮಾಡುವಾಗ ಈ ಟ್ರಿಕ್ಸ್‌ ಫಾಲೋ ಮಾಡಿದ್ರೆ ಭಾರೀ ಲಾಭ! ದಿನಬಳಕೆಯ ವಸ್ತುಗಳ ಮೇಲೆ ಭರ್ಜರಿ ರಿಯಾಯಿತಿ

ಒಪ್ಪೋ ಫೈಂಡ್ X9 ಪ್ರೊ & ಫೈಂಡ್ X9 ವೈಶಿಷ್ಟ್ಯಗಳು

ಚೀನಾದಲ್ಲಿ ಬಿಡುಗಡೆಯಾದ ಫೈಂಡ್ X9 ಪ್ರೊ 120Hz ರಿಫ್ರೆಶ್ ರೇಟ್‌ನೊಂದಿಗೆ 6.78-ಇಂಚಿನ 1.5K AMOLED ಡಿಸ್ಪ್ಲೇಯನ್ನ ಹೊಂದಿದೆ. ಮತ್ತೊಂದೆಡೆ ಫೈಂಡ್ X9 1,800 ನಿಟ್‌ಗಳ ಗರಿಷ್ಠ ಹೊಳಪಿನೊಂದಿಗೆ 6.59-ಇಂಚಿನ 1.5K ಡಿಸ್ಪ್ಲೇಯನ್ನ ಹೊಂದಿದೆ. ಈ ಫೋನ್‌ನ ಡಿಸ್ಪ್ಲೇ ProXDR, HDR, HDR10+ ಮತ್ತು ಡಾಲ್ಬಿ ವಿಷನ್ ಸಹ ಬೆಂಬಲಿಸುತ್ತದೆ. ಎರಡೂ ಫೋನ್‌ಗಳು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನ ಸಹ ಹೊಂದಿವೆ.

ಒಪ್ಪೋದ ಎರಡೂ ಪ್ರೀಮಿಯಂ ಫೋನ್‌ಗಳು ಮೀಡಿಯಾ ಟೆಕ್ ಡೈಮೆನ್ಸಿಟಿ 9500 ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು, 16GB ವರೆಗಿನ RAM ಮತ್ತು 1TB ಸ್ಟೋರೇಜ್‌ನೊಂದಿಗೆ ಬರುತ್ತದೆ. ಈ ಎರಡೂ ಫೋನ್‌ಗಳು ಆಂಡ್ರಾಯ್ಡ್ 16 ಆಧಾರಿತ ColorOS 16 ನಲ್ಲಿ ಕಾರ್ಯನಿರ್ವಹಿಸುತ್ತವೆ. ಫೋನ್‌ಗಳು AI- ಆಧಾರಿತ ಉತ್ಪಾದಕತೆ ಮತ್ತು ಇಮೇಜಿಂಗ್ ಪರಿಕರಗಳನ್ನ ಹೊಂದಿವೆ. ಈ ಎರಡೂ ಫೋನ್‌ಗಳು ಟ್ರಿಪಲ್ ಹಿಂಭಾಗದ ಕ್ಯಾಮೆರಾಗಳನ್ನ ಹೊಂದಿವೆ.

ಇದನ್ನೂ ಓದಿ: ಕೇವಲ ಅರ್ಧ ಬೆಲೆಗೆ 55 ಇಂಚಿನ LED ಸ್ಮಾರ್ಟ್ ಟಿವಿಗಳನ್ನ ಖರೀದಿಸಿ: ಕೂಡಲೇ ಮನೆಗೆ ತನ್ನಿ...

ಒಪ್ಪೋ ಫೈಂಡ್ X9 ಹಿಂಭಾಗದಲ್ಲಿ 50MP ಮುಖ್ಯ OIS ಕ್ಯಾಮೆರಾವನ್ನ ಹೊಂದಿದೆ. ಇದು 50MP ಪೆರಿಸ್ಕೋಪ್ ಮತ್ತು 50MP ಅಲ್ಟ್ರಾ-ವೈಡ್ ಕ್ಯಾಮೆರಾವನ್ನ ಸಹ ಹೊಂದಿದೆ. ಸೆಲ್ಫಿಗಳು ಮತ್ತು ವಿಡಿಯೋ ಕರೆಗಾಗಿ 32MP ಕ್ಯಾಮೆರಾ ಲಭ್ಯವಿದೆ. ಫೈಂಡ್ X9 ಪ್ರೊ ಹಿಂಭಾಗದಲ್ಲಿ 50MP ಮುಖ್ಯ ಮತ್ತು 200MP ಪೆರಿಸ್ಕೋಪ್ ಕ್ಯಾಮೆರಾವನ್ನ ಹೊಂದಿದೆ. ಇದು 50MP ಮೂರನೇ ಟೆಲಿಫೋಟೋ ಸೆನ್ಸರ್ ಸಹ ಹೊಂದಿದೆ. ಇದು ವಿಡಿಯೋ ಕರೆಗಾಗಿ 32MP ಕ್ಯಾಮೆರಾವನ್ನ ಸಹ ಹೊಂದಿದೆ. 

ಒಪ್ಪೋ ಫೈಂಡ್ X9 ಪ್ರೊ 7,500mAh ಬ್ಯಾಟರಿಯನ್ನ ಹೊಂದಿದ್ದರೆ, ಫೈಂಡ್ X9 7,025mAh ಬ್ಯಾಟರಿಯನ್ನ ಹೊಂದಿದೆ. ಎರಡೂ ಫೋನ್‌ಗಳು 80W ವೈರ್ಡ್ ಫಾಸ್ಟ್ ಚಾರ್ಜಿಂಗ್‌ನೊಂದಿಗೆ ಬರುತ್ತವೆ. ಹೆಚ್ಚುವರಿಯಾಗಿ ಫೋನ್‌ಗಳು IP66, IP68 ಮತ್ತು IP69 ರೇಟಿಂಗ್ ಹೊಂದಿವೆ. ಕಂಪನಿಯು ಇನ್ನೂ ಫೋನ್‌ನ ಬೆಲೆಯನ್ನ ಬಹಿರಂಗಪಡಿಸಿಲ್ಲ.

About the Author

Puttaraj K Alur

ಪುಟ್ಟರಾಜ ಕೆ ಆಲೂರ ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser) ನ್ಯೂಸ್‌, ಒಪೊಯಿ‌ (Opoyi) ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. ...Read More

Trending News