ಐಫೋನ್‌ನಂತೆ ಕಾಣುವ ಅಗ್ಗದ ಫೋನ್ ತರುತ್ತಿರುವ ಒಪ್ಪೋ; ಬಿಡುಗಡೆಗೂ ಮುನ್ನವೇ ಚಿತ್ರ ಸೋರಿಕೆ!!

ಒಪ್ಪೋ ಶೀಘ್ರದಲ್ಲೇ ರೆನೋ ಸರಣಿಯಲ್ಲಿ ಮತ್ತೊಂದು ಮಧ್ಯಮ ಬಜೆಟ್ ಫೋನ್ ಅನ್ನು ಬಿಡುಗಡೆ ಮಾಡಲಿದ. ಇದು ನೋಡಲು ಐಫೋನ್‌ನಂತೆ ಕಾಣುತ್ತದೆ. ಈ ಫೋನಿನ ಚಿತ್ರ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ.  

Written by - Puttaraj K Alur | Last Updated : Apr 28, 2025, 09:11 PM IST
  • ಒಪ್ಪೋ ರೆನೋ 13 ನಂತರ ಮತ್ತೊಂದು ಅಗ್ಗದ ಸ್ಮಾರ್ಟ್‌ಫೋನ್ ಬಿಡುಗಡೆ
  • ಈ ಫೋನಿನ ಕ್ಯಾಮೆರಾ & ವಿನ್ಯಾಸ ಸೇರಿ ಹಲವು ವೈಶಿಷ್ಟ್ಯಗಳು ಬಹಿರಂಗಗೊಂಡಿವೆ
  • ಈ ಒಪ್ಪೋ ಫೋನ್ ಐಫೋನ್‌ನಂತೆ ಅದ್ಭುತ ಲುಕ್‌ ಹೊಂದಿದೆ
ಐಫೋನ್‌ನಂತೆ ಕಾಣುವ ಅಗ್ಗದ ಫೋನ್ ತರುತ್ತಿರುವ ಒಪ್ಪೋ; ಬಿಡುಗಡೆಗೂ ಮುನ್ನವೇ ಚಿತ್ರ ಸೋರಿಕೆ!!

Oppo Reno 14 Pro: ಒಪ್ಪೋ ರೆನೋ 13 ನಂತರ ಚೀನಾದ ಕಂಪನಿಯು ಮತ್ತೊಂದು ಅಗ್ಗದ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಿದೆ. ಈ ಫೋನಿನ ಕ್ಯಾಮೆರಾ ಮತ್ತು ವಿನ್ಯಾಸ ಸೇರಿದಂತೆ ಹಲವು ವೈಶಿಷ್ಟ್ಯಗಳು ಬಹಿರಂಗಗೊಂಡಿವೆ. ಈ ಒಪ್ಪೋ ಫೋನ್ ಐಫೋನ್‌ನಂತೆ ಕಾಣುತ್ತದೆ. ಒಪ್ಪೋ ಈ ಸ್ಮಾರ್ಟ್‌ಫೋನ್ ಅನ್ನು ರೆನೋ 14 ಪ್ರೊ ಹೆಸರಿನೊಂದಿಗೆ ಬಿಡುಗಡೆ ಮಾಡಬಹುದು. ಈ ಫೋನ್‌ನ ಲುಕ್‌ ಹಿಂದಿನ ಮಾದರಿ ರೆನೋ 13 ಪ್ರೊಗೆ ಹೋಲುತ್ತದೆ. ಚೀನಾದ ಟಿಪ್‌ಸ್ಟರ್ ಈ ಒಪ್ಪೋ ಫೋನ್‌ನ ಚಿತ್ರವನ್ನು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.

Add Zee News as a Preferred Source

ಐಫೋನ್ 12ನಂತೆ ವಿನ್ಯಾಸ

Oppo Reno 14 Pro ಸ್ಮಾರ್ಟ್‌ಫೋನ್‌ನ ಸೋರಿಕೆಯಾದ ಚಿತ್ರವನ್ನು ಡಿಜಿಟಲ್ ಚಾಟ್ ಸ್ಟೇಷನ್ (DCS) ಚೀನೀ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ವೀಬೊದಲ್ಲಿ ಹಂಚಿಕೊಂಡಿದೆ. ಈ ಫೋನಿನ ಎರಡು ಚಿತ್ರಗಳನ್ನು ಹಂಚಿಕೊಳ್ಳಲಾಗಿದ್ದು, ಅದರಲ್ಲಿ ಫೋನಿನ ಕ್ಯಾಮೆರಾ ಮತ್ತು ಸೈಡ್ ವಿನ್ಯಾಸವನ್ನು ಕಾಣಬಹುದು. ಈ ಫೋನ್‌ನ ಕ್ಯಾಮೆರಾ ವಿನ್ಯಾಸವು ರೆನೋ 13 ಪ್ರೊಗೆ ಹೋಲುತ್ತದೆ, ಇದರಲ್ಲಿ ಎರಡು ದೊಡ್ಡ ಕ್ಯಾಮೆರಾ ಸೆನ್ಸಾರ್‌ಗಳು ಕಂಡುಬರುತ್ತವೆ. ಈ ಕ್ಯಾಮೆರಾ ಸೆನ್ಸರ್‌ಗಳನ್ನು ಐಫೋನ್‌ನಂತೆಯೇ ಲಂಬವಾಗಿ ಇರಿಸಲಾಗಿದೆ. ಅದೇ ರೀತಿ ಸೈಡ್ ಪ್ಯಾನೆಲ್‌ನಲ್ಲಿರುವ ಬಟನ್‌ಗಳು ಸಹ ಐಫೋನ್‌ನಂತೆಯೇ ಇರುತ್ತವೆ.

ಇದನ್ನೂ ಓದಿ: ಯಾವುದೇ ರೈಡ್‌ ಬುಕ್ ಮಾಡದ ವ್ಯಕ್ತಿಗೆ‌ ₹4,66,000 ಶುಲ್ಕ ವಿಧಿಸಿದ ಉಬರ್;‌ ಇದು ಹೊಸ ರೀತಿಯ ಹಗರಣ!!

ರೆನೋ 14 ಸರಣಿಯ ಈ ಫೋನಿನ ಹಿಂಭಾಗದ ಪ್ಯಾನೆಲ್‌ನಲ್ಲಿ ಎರಡು ಕ್ಯಾಮೆರಾಗಳೊಂದಿಗೆ LED ಫ್ಲ್ಯಾಷ್ ಕಾಣಬಹುದು. ಇದಲ್ಲದೆ ಈ ಮಾಡ್ಯೂಲ್‌ನಲ್ಲಿ ಸಣ್ಣ ಕ್ಯಾಮೆರಾವನ್ನು ಸಹ ಒದಗಿಸಲಾಗಿದೆ. ಈ ರೀತಿ ಈ ಒಪ್ಪೋ ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರಬಹುದು. ಫೋನ್‌ನ ವಿನ್ಯಾಸವು ಐಫೋನ್ 12ರಂತೆಯೇ ಇದೆ. ಆದಾಗ್ಯೂ ಫೋನ್ ಬಿಡುಗಡೆಯಾದ ನಂತರವೇ ಅದನ್ನು ಅಧಿಕೃತವಾಗಿ ದೃಢೀಕರಿಸಬಹುದು.

ಒಪ್ಪೋ ರೆನೋ 13ರ ವೈಶಿಷ್ಟ್ಯಗಳು

ಇತ್ತೀಚೆಗೆ ಬಿಡುಗಡೆಯಾದ ಒಪ್ಪೋ ರೆನೋ 13ರ ವೈಶಿಷ್ಟ್ಯಗಳ ಕುರಿತು ಹೇಳುವುದಾದರೆ, ಈ ಫೋನ್ 6.59-ಇಂಚಿನ FHD+ ಡಿಸ್ಪ್ಲೇಯೊಂದಿಗೆ ಬರುತ್ತದೆ, ಇದು 120Hz ಹೆಚ್ಚಿನ ರಿಫ್ರೆಶ್ ರೇಟ್‌ ವೈಶಿಷ್ಟ್ಯವನ್ನು ಬೆಂಬಲಿಸುತ್ತದೆ. ಈ ಫೋನಿನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಲಭ್ಯವಿದೆ. ಇದು 50MP ಮುಖ್ಯ ಮತ್ತು 8MP ಅಲ್ಟ್ರಾ ವೈಡ್ ಕ್ಯಾಮೆರಾ ಹೊಂದಿರುತ್ತದೆ. ಇದು ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 50MP ಕ್ಯಾಮೆರಾವನ್ನು ಹೊಂದಿದೆ. ಈ ಫೋನ್ 8GB/12GB RAM ಮತ್ತು 512GB ವರೆಗಿನ ಸ್ಟೋರೇಜ್‌ನೊಂದಿಗೆ ಬರುತ್ತದೆ. ಇದು 5,500mAh ಬ್ಯಾಟರಿ ಮತ್ತು 80W ವೇಗದ ಚಾರ್ಜಿಂಗ್ ವೈಶಿಷ್ಟ್ಯವನ್ನು ಹೊಂದಿದೆ.

ಇದನ್ನೂ ಓದಿ: ಲಾಭಕ್ಕಾಗಿ ಅಲ್ಲ, ಬದಲಾಗಿ ಸೇವೆಗಾಗಿ ಗುಲಾಬ್ ಶರ್ಬತ್ ಬಿಡುಗಡೆ ಮಾಡಿದ ಪತಂಜಲಿ : ಆರೋಗ್ಯ ಸಂಜೀವಿನಿ ಈ ಪಾನೀಯ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News