)
Oppo Reno 14 5G Smartphone: ಒಪ್ಪೋ ರೆನೋ 14 5G ಸ್ಮಾರ್ಟ್ಫೋನ್ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಈ ಒಪ್ಪೋ ಫೋನ್ ಬಿಡುಗಡೆ ಬೆಲೆಗಿಂತ ಸಾವಿರಾರು ರೂಪಾಯಿ ಕಡಿಮೆ ಬೆಲೆಗೆ ಲಭ್ಯವಿದೆ. ಇದು ಶಕ್ತಿಯುತ ಕ್ಯಾಮೆರಾ ಮತ್ತು ಪ್ರಭಾವಶಾಲಿ ವೈಶಿಷ್ಟ್ಯಗಳನ್ನ ಹೊಂದಿದೆ. ಒಪ್ಪೋ ರೆನೋ 15 ಸರಣಿಯ ಬಿಡುಗಡೆಗೂ ಮುನ್ನ ಈ ಮಹತ್ವದ ಬೆಲೆ ಕಡಿತವಾಗಿದೆ. ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳು ಮತ್ತು ಎಲೆಕ್ಟ್ರಾನಿಕ್ಸ್ ಚಿಲ್ಲರೆ ವ್ಯಾಪಾರಿ ಟಾಟಾ ಕ್ರೋಮಾದಲ್ಲಿ ನಡೆಯುತ್ತಿರುವ ಮಾರಾಟದ ಸಮಯದಲ್ಲಿ ಈ ಒಪ್ಪೋ ಸ್ಮಾರ್ಟ್ಫೋನ್ಅನ್ನ ಭಾರೀ ಕಡಿಮೆ ಬೆಲೆಗೆ ಖರೀದಿಸಬಹುದು.
ಒಪ್ಪೋ ರೆನೋ 14 5G ಫೋನ್ 8GB RAM + 128GB, 12GB RAM + 256GB, ಮತ್ತು 12GB RAM + 512GB ಎಂಬ ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಬರುತ್ತದೆ. ಇದು ₹42,999ರಿಂದ ಪ್ರಾರಂಭವಾಗುತ್ತದೆ. ಇದು ಪರ್ಲ್ ವೈಟ್, ಫಾರೆಸ್ಟ್ ಗ್ರೀನ್, ಮಿಂಟ್ ಗ್ರೀನ್ ಮತ್ತು ದಿವಾಳಿ ಗೋಲ್ಡ್ ಎಂಬ ನಾಲ್ಕು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಈ ಫೋನ್ ಇ-ಕಾಮರ್ಸ್ ವೆಬ್ಸೈಟ್ನಲ್ಲಿ ₹3,000 ಬ್ಯಾಂಕ್ ರಿಯಾಯಿತಿಯೊಂದಿಗೆ ಲಭ್ಯವಿದ್ದು, ₹39,999 ಆರಂಭಿಕ ಬೆಲೆಗೆ ಖರೀದಿಸಬಹುದು.
ಒಪ್ಪೋ ರೆನೋ 14 5G ವೈಶಿಷ್ಟ್ಯಗಳು
ಈ ಒಪ್ಪೋ ಸ್ಮಾರ್ಟ್ಫೋನ್ 6.59-ಇಂಚಿನ ಫ್ಲೆಕ್ಸಿಬಲ್ AMOLED ಡಿಸ್ಪ್ಲೇಯೊಂದಿಗೆ ಬರುತ್ತದೆ. ಡಿಸ್ಪ್ಲೇ 120Hz ರಿಫ್ರೆಶ್ ರೇಟ್ಅನ್ನ ಬೆಂಬಲಿಸುತ್ತದೆ. ಹೆಚ್ಚುವರಿಯಾಗಿ ಈ ಫೋನ್ ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್ನೊಂದಿಗೆ ಪಂಚ್-ಹೋಲ್ ಡಿಸ್ಪ್ಲೇಯನ್ನ ಹೊಂದಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8350 ಆಕ್ಟಾ-ಕೋರ್ ಪ್ರೊಸೆಸರ್ನಿಂದ ಚಾಲಿತವಾಗಿದ್ದು, 12GB RAM ಮತ್ತು 512GBವರೆಗೆ ಸ್ಟೋರೇಜ್ನೊಂದಿಗೆ ಬರಲಿದೆ.
ಈ ಫೋನ್ ಶಕ್ತಿಶಾಲಿ 6000mAh ಬ್ಯಾಟರಿಯೊಂದಿಗೆ ಬರುತ್ತದೆ. ಇದು 80W SuperVOOC ವೇಗದ ಚಾರ್ಜಿಂಗ್ ಅನ್ನ ಬೆಂಬಲಿಸುತ್ತದೆ. ಈ ಫೋನ್ ಆಂಡ್ರಾಯ್ಡ್ 16 ಆಧಾರಿತ ColorOS 16ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು AI ವೈಶಿಷ್ಟ್ಯಗಳನ್ನ ಹೊಂದಿದೆ. ಈ ಫೋನ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ. ಈ ಫೋನ್ 50MP ಮುಖ್ಯ, 8MP ಅಲ್ಟ್ರಾ ವೈಡ್ ಮತ್ತು 50MP ಟೆಲಿಫೋಟೋ ಕ್ಯಾಮೆರಾವನ್ನ ಹೊಂದಿರುತ್ತದೆ. ಈ ಫೋನ್ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 50MP ಕ್ಯಾಮೆರಾವನ್ನ ಸಹ ಹೊಂದಿರುತ್ತದೆ. ಈ ಫೋನ್ ನೀರು ಮತ್ತು ಧೂಳು ನಿರೋಧಕ IP68 ಮತ್ತು IP69 ರೇಟಿಂಗ್ನೊಂದಿಗೆ ಬರುತ್ತದೆ. ಸಂಪರ್ಕಕ್ಕಾಗಿ ಈ ಫೋನ್ NFC ಜೊತೆಗೆ ಡ್ಯುಯಲ್ 5G, ವೈಫೈ, ಬ್ಲೂಟೂತ್ಗೆ ಬೆಂಬಲವನ್ನ ಹೊಂದಿರುತ್ತದೆ.