₹20,000ಗೆ ಐಫೋನ್ 14 ಪ್ಲಸ್ 256GB ಖರೀದಿಸುವ ಅವಕಾಶ; ಈಗಲೇ ಖರೀದಿಸಿ ಈ ಆಫರ್‌ ಮತ್ತೆ ಸಿಗಲ್ಲ!!

ನೀವು ಐಫೋನ್ ಖರೀದಿಸಲು ಬಯಸಿದರೆ ಇದು ನಿಮಗೆ ಉತ್ತಮ ಅವಕಾಶ. ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್ ಐಫೋನ್ 14 ಪ್ಲಸ್‌ನ 256GBಯ ಬೆಲೆ ಕಡಿತ ಮಾಡಿದೆ. ನೀವು ಈಗ ಈ ಪ್ರೀಮಿಯಂ ಸ್ಮಾರ್ಟ್‌ಫೋನ್ ಅನ್ನ ಕೇವಲ 20,000 ರೂ.ಗೆ ಖರೀದಿಸಿ  ಮನೆಗೆ ತೆಗೆದುಕೊಂಡು ಹೋಗಬಹುದು.

Written by - Puttaraj K Alur | Last Updated : Mar 20, 2025, 08:47 PM IST
  • ಐಫೋನ್ 14+ನಲ್ಲಿ ಅಲ್ಯೂಮಿನಿಯಂ ಚೌಕಟ್ಟಿನ ಉತ್ತಮ ವಿನ್ಯಾಸವನ್ನು ನೀಡಿದೆ
  • ಈ ಫೋನ್ IP68 ರೇಟಿಂಗ್ ಹೊಂದಿದ್ದು, ನೀರು ಮತ್ತು ಧೂಳಿನಿಂದ ಸಂಪೂರ್ಣ ಸುರಕ್ಷಿತವಾಗಿದೆ
  • ಕಾರ್ಯಕ್ಷಮತೆಗಾಗಿ ಈ ಸ್ಮಾರ್ಟ್‌ಫೋನ್‌ಗೆ ಆಪಲ್ A15 ಬಯೋನಿಕ್ ಚಿಪ್‌ಸೆಟ್ ನೀಡಲಾಗಿದೆ
₹20,000ಗೆ ಐಫೋನ್ 14 ಪ್ಲಸ್ 256GB ಖರೀದಿಸುವ ಅವಕಾಶ; ಈಗಲೇ ಖರೀದಿಸಿ ಈ ಆಫರ್‌ ಮತ್ತೆ ಸಿಗಲ್ಲ!!
ಆಪಲ್ ಐಫೋನ್

iPhone 14 Plus 256GB: ಕಳೆದ ಕೆಲವು ತಿಂಗಳುಗಳಲ್ಲಿ ಐಫೋನ್‌ಗಳ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಐಫೋನ್ 16 ಸರಣಿಯ ಆಗಮನದ ನಂತರ ಹಳೆಯ ಐಫೋನ್‌ಗಳ ಬೆಲೆ ಸಂಪೂರ್ಣವಾಗಿ ಕುಸಿದಿವೆ. ನೀವೂ ಐಫೋನ್ ಖರೀದಿಸಲು ಬಯಸಿದರೆ ಒಂದು ಉತ್ತಮ ಅವಕಾಶವಿದೆ. ಈ ಸಮಯದಲ್ಲಿ ನೀವು ಐಫೋನ್ ಖರೀದಿಸುವ ಮೂಲಕ ಸಾವಿರಾರು ರೂಪಾಯಿಗಳನ್ನು ಉಳಿಸಬಹುದು. ಹೊಸ ಸರಣಿಯ ಬಿಡುಗಡೆಯ ನಂತರ ಐಫೋನ್ 14 ಪ್ಲಸ್ 256GB ಬೆಲೆ ತೀವ್ರವಾಗಿ ಕುಸಿದಿದೆ.

ಐಫೋನ್ 14 ಪ್ಲಸ್ 256GB ದುಬಾರಿ ಸ್ಮಾರ್ಟ್‌ಫೋನ್ ಆಗಿದೆ. ಆದರೆ ಇದೀಗ ಗ್ರಾಹಕರಿಗೆ ಅದರ ಮೇಲೆ ಭಾರೀ ರಿಯಾಯಿತಿ ನೀಡಲಾಗುತ್ತಿದೆ. ಪ್ರಸ್ತುತ ನೀವು ಈ ಪ್ರೀಮಿಯಂ ಐಫೋನ್ ಅನ್ನು 20 ಸಾವಿರ ರೂ.ಗೆ ಖರೀದಿಸಬಹುದು. ಈ ಬಂಪರ್ ಕೊಡುಗೆಯನ್ನು ದೈತ್ಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್ ನೀಡುತ್ತಿದೆ. ಇದರ ಮೇಲೆ ಲಭ್ಯವಿರುವ ಕೊಡುಗೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..

ಇದನ್ನೂ ಓದಿ: ನಿಮ್ಮ ಹೆಂಡತಿಗೆ ಕ್ಯಾಶ್ ನೀಡುವ ಮೊದಲು ಈ ತೆರಿಗೆ ನಿಯಮ ತಿಳಿದುಕೊಳ್ಳಿ..! ಇಲ್ಲದಿದ್ದರೆ ತೆರಿಗೆ ಕಟ್ಟಬೇಕಾದಿತು..!

ಆಪಲ್ ಐಫೋನ್ 14 ಪ್ಲಸ್ ಬೆಲೆ ಇಳಿಕೆ 

ಲಕ್ಷಾಂತರ ಗ್ರಾಹಕರಿಗೆ ಐಫೋನ್ ಖರೀದಿಸುವುದನ್ನು ಅಮೆಜಾನ್ ಸುಲಭಗೊಳಿಸಿದೆ. ಕಂಪನಿಯು ಪ್ರಸ್ತುತ ಆಪಲ್ ಐಫೋನ್ 14 ಪ್ಲಸ್‌ನ 256GB ರೂಪಾಂತರದ ಮೇಲೆ ಭಾರೀ ರಿಯಾಯಿತಿ ನೀಡುತ್ತಿದೆ. ಈ ಸ್ಮಾರ್ಟ್‌ಫೋನ್ ಪ್ರಸ್ತುತ ವೆಬ್‌ಸೈಟ್‌ನಲ್ಲಿ 99,999 ರೂ.ಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಈಗ ನೀವು ಇದನ್ನು ತುಂಬಾ ಕಡಿಮೆ ಬೆಲೆಗೆ ಖರೀದಿಸಬಹುದು. ಅಮೆಜಾನ್ ಇದರ ಮೇಲೆ 32% ರಿಯಾಯಿತಿ ನೀಡುತ್ತಿದೆ. ಹೀಗಾಗಿ ಇದರ ಬೆಲೆ ಕೇವಲ 67,900 ರೂ. ಆಗಲಿದೆ. ಈ ಕೊಡುಗೆಯಲ್ಲಿ ನೀವು ನೇರವಾಗಿ 32 ಸಾವಿರ ರೂ. ಉಳಿಸಲು ಸಾಧ್ಯವಾಗುತ್ತದೆ.

ಅಮೆಜಾನ್ ಆಪಲ್ ಐಫೋನ್ 14 ಪ್ಲಸ್ ಮೇಲೆ ಇನ್ನೂ ಅನೇಕ ಕೊಡುಗೆಗಳನ್ನು ನೀಡುತ್ತಿದೆ, ಆದ್ದರಿಂದ ನೀವು ಅದನ್ನು ಇನ್ನೂ ಕಡಿಮೆ ಬೆಲೆಗೆ ಖರೀದಿಸಬಹುದು. ಪ್ಲಾಟ್‌ಫಾರ್ಮ್‌ನಲ್ಲಿ 3,395 ರೂ.ಗಳವರೆಗಿನ ಕ್ಯಾಶ್‌ಬ್ಯಾಕ್ ಕೊಡುಗೆ ಸಹ ನೀಡಲಾಗುತ್ತಿದೆ. ಇದಲ್ಲದೆ ನಿಮ್ಮ ಬಜೆಟ್ ಕಡಿಮೆಯಿದ್ದರೆ ನೀವು ಅದನ್ನು EMIನಲ್ಲಿಯೂ ಖರೀದಿಸಬಹುದು. ಇದಕ್ಕಾಗಿ ನೀವು ತಿಂಗಳಿಗೆ ಕೇವಲ 3,057 ರೂ.ಗಳನ್ನು ಖರ್ಚು ಮಾಡಬೇಕಾಗುತ್ತದೆ.

ಇದನ್ನೂ ಓದಿ: ತೆರಿಗೆ ಪಾವತಿಸುವವರಿಗೆ ಕೇಂದ್ರದಿಂದ ಮತ್ತೊಂದು ಗುಡ್‌ನ್ಯೂಸ್‌! ಏಪ್ರಿಲ್‌ 1 ರಿಂದ ಹೊಸ ನಿಯಮ ಜಾರಿ... ಉಳಿತಾಯ ಮಾಡುವವರಿಗೆ ಭರ್ಜರಿ ಲಾಭ

ಐಫೋನ್ 14 ಪ್ಲಸ್ 20 ಸಾವಿರ ರೂ.ಗೆ ಲಭ್ಯ

ಅಮೆಜಾನ್ ಕೋಟ್ಯಂತರ ಗ್ರಾಹಕರಿಗೆ ಕೇವಲ 20,000 ರೂ.ಗೆ 256GB ವೇರಿಯಂಟ್ ಆಪಲ್ ಐಫೋನ್ 14 ಪ್ಲಸ್ ಖರೀದಿಸುವ ಅವಕಾಶ ನೀಡುತ್ತಿದೆ. ಇದಕ್ಕಾಗಿ ಕಂಪನಿಯು ಉತ್ತಮ ವಿನಿಮಯ ಕೊಡುಗೆಯನ್ನು ನೀಡಿದೆ. ಈ ಗ್ರಾಹಕರಿಗೆ ಅಮೆಜಾನ್ 47,500 ರೂ.ಗಳವರೆಗೆ ವಿನಿಮಯ ಕೊಡುಗೆ ನೀಡುತ್ತಿದೆ. ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನ ವಿನಿಮಯ ಮಾಡಿಕೊಳ್ಳುವ ಮೂಲಕ ನೀವು ಬಹಳಷ್ಟು ಹಣ ಉಳಿಸಬಹುದು. 
ವಿನಿಮಯ ಮೌಲ್ಯವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ನ ಮಾದರಿ, ಅದರ ವರ್ಕಿಂಗ್‌ ಕಂಡಿಷನ್ ಅವಲಂಬಿಸಿರುತ್ತದೆ. ನೀವು ಪೂರ್ಣ ವಿನಿಮಯ ಮೌಲ್ಯವನ್ನು ಪಡೆಯುವಲ್ಲಿ ಯಶಸ್ವಿಯಾದರೆ, Apple iPhone 14 Plus 256GB ರೂಪಾಂತರವನ್ನು ಕೇವಲ 20,000 ರೂ.ಗೆ ಖರೀದಿಸಿ ಮನೆಗೆ ತೆಗೆದುಕೊಂಡು ಹೋಗಬಹುದು. 

ಆಪಲ್ ಐಫೋನ್ 14 ಪ್ಲಸ್‌ನ ವಿಶೇಷಣಗಳು

* ಐಫೋನ್ 14 ಪ್ಲಸ್‌ನಲ್ಲಿ ಕಂಪನಿಯು ಅಲ್ಯೂಮಿನಿಯಂ ಚೌಕಟ್ಟಿನ ಉತ್ತಮ ವಿನ್ಯಾಸವನ್ನು ನೀಡಿದೆ.
* ಈ ಫೋನ್ IP68 ರೇಟಿಂಗ್ ಹೊಂದಿದ್ದು, ನೀರು ಮತ್ತು ಧೂಳಿನಿಂದ ಸಂಪೂರ್ಣವಾಗಿ ಸುರಕ್ಷಿತವಾಗಿದೆ.
* ಐಫೋನ್ 14 ಪ್ಲಸ್ 6.7-ಇಂಚಿನ ಸೂಪರ್ ರೆಟಿನಾ ಡಿಸ್ಪ್ಲೇಯನ್ನು ಹೊಂದಿದ್ದು, ಇದು ಡಾಲ್ಬಿ ವಿಷನ್ ಅನ್ನು ಬೆಂಬಲಿಸುತ್ತದೆ.
* ಕಾರ್ಯಕ್ಷಮತೆಗಾಗಿ ಈ ಸ್ಮಾರ್ಟ್‌ಫೋನ್‌ಗೆ ಆಪಲ್ A15 ಬಯೋನಿಕ್ ಚಿಪ್‌ಸೆಟ್ ನೀಡಲಾಗಿದೆ.
* ಐಫೋನ್ 14 ಪ್ಲಸ್ 6GB ವರೆಗಿನ RAM ಮತ್ತು 512GB ವರೆಗಿನ ಸ್ಟೋರೇಜ್ ಆಯ್ಕೆಯೊಂದಿಗೆ ಬರುತ್ತದೆ 
* ಛಾಯಾಗ್ರಹಣಕ್ಕಾಗಿ ಹಿಂಭಾಗದ ಫಲಕದಲ್ಲಿ ಶಕ್ತಿಯುತ 12 + 12 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಒದಗಿಸಲಾಗಿದೆ.
* ಇದು ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 12 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. 
* ಐಫೋನ್ 14 ಪ್ಲಸ್ ಅನ್ನು ಪವರ್ ಮಾಡಲು 4323mAh ಬ್ಯಾಟರಿಯನ್ನು ಒದಗಿಸಲಾಗಿದ್ದು, ಇದು 15W ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News