OnePlus Nord CE4 Smartphone: OnePlus Nord CE4 ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಒನ್‌ಪ್ಲಸ್ ತನ್ನ 5G ಸ್ಮಾರ್ಟ್‌ಫೋನ್‌ನ ಬೆಲೆಯನ್ನು ಗಣನೀಯವಾಗಿ ಕಡಿಮೆಯಾಗಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ಬಿಡುಗಡೆಯಾದ ಈ ಮಧ್ಯಮ ಬಜೆಟ್ ಫೋನ್ ಅನ್ನ ನೀವು 13,000 ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಈ ಫೋನ್ ಇ-ಕಾಮರ್ಸ್ ವೆಬ್‌ಸೈಟ್ ಅಮೆಜಾನ್‌ನಲ್ಲಿ ಮೂಲ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಈ ಒನ್‌ಪ್ಲಸ್ ಫೋನ್ 5,000mAh ಬ್ಯಾಟರಿ ಸೇರಿದಂತೆ ಹಲವು ಶಕ್ತಿಶಾಲಿ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಫೋನ್ ಅನ್ನು 8GB RAM + 256GB ಆಂತರಿಕ ಸ್ಟೋರೇಜ್‌ನಲ್ಲಿ ಖರೀದಿಸಬಹುದು.
OnePlus Nord CE4 ಬೆಲೆ ಮತ್ತು ಕೊಡುಗೆಗಳು
ಈ ಒನ್‌ಪ್ಲಸ್ ಫೋನ್ 8GB RAM + 128GB ಮತ್ತು 8GB RAM + 256GB ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಬರುತ್ತದೆ. ಈ ಫೋನಿನ ಆರಂಭಿಕ ಬೆಲೆ 21,999 ರೂ. ಇದೆ. ಅದೇ ರೀತಿ ಇದರ ಟಾಪ್ ರೂಪಾಂತರವು 23,999 ರೂ.ಗಳಿಗೆ ಬರುತ್ತದೆ. ಈ ಸ್ಮಾರ್ಟ್‌ಫೋನ್ ಅನ್ನು ಕ್ರಮವಾಗಿ 24,999 ಮತ್ತು 26,999 ರೂ.ಗಳಿಗೆ ಬಿಡುಗಡೆ ಮಾಡಲಾಗಿತ್ತು. ಈ ಫೋನ್ ಖರೀದಿಯ ಮೇಲೆ 3,000 ರೂ.ಗಳ ಬೆಲೆ ಕಡಿತವಾಗಿದೆ. ಇದಲ್ಲದೆ 2,000 ರೂ.ಗಳವರೆಗೆ ಬ್ಯಾಂಕ್ ರಿಯಾಯಿತಿ ಸಹ ನೀಡಲಾಗುತ್ತಿದೆ. ಅಷ್ಟೇ ಅಲ್ಲ, ಈ ಫೋನ್ ಖರೀದಿಯ ಮೇಲೆ 22,700 ರೂ.ಗಳವರೆಗೆ ವಿನಿಮಯ ಕೊಡುಗೆಯೂ ಲಭ್ಯವಿದೆ.
ಇದನ್ನೂ ಓದಿ: ಕೇವಲ 42 ರೂ. ಹೂಡಿಕೆ ಮಾಡಿದರೆ ಸಾಕು ಪ್ರತಿ ತಿಂಗಳು ಕೈ ಸೇರುವುದು 5000 ರೂ.ಪಿಂಚಣಿ
| ಒನ್‌ಪ್ಲಸ್ ನಾರ್ಡ್ CE4 | ಬಿಡುಗಡೆ ಬೆಲೆ | ಪ್ರಸ್ತುತ ಬೆಲೆ | ಬ್ಯಾಂಕ್ ಕೊಡುಗೆಗಳು | ಅಂತಿಮ ಬೆಲೆ |
| 8 ಜಿಬಿ RAM + 128 ಜಿಬಿ | 24,999 ರೂ. | 21,999 ರೂ. | 2,000 ರೂ. | 19,999 ರೂ. |
| 8 ಜಿಬಿ RAM + 256 ಜಿಬಿ | 26,999 ರೂ. | 23,999 ರೂ. | 2,000 ರೂ. | 21,999 ರೂ. |
ನೀವು ನಿಮ್ಮ ಹಳೆಯ ಫೋನ್ ಅನ್ನ ವಿನಿಮಯ ಮಾಡಿಕೊಂಡು 7,000 ರೂ.ಗಳನ್ನು ಪಡೆದರೆ, ಈ ಫೋನ್ ನಿಮಗೆ 12,999 ರೂಗೆ ಸಿಗುತ್ತದೆ. ಆದರೆ ನಿಮ್ಮ ಹಳೆಯ ಫೋನಿನ ವಿನಿಮಯ ಮೌಲ್ಯವು ಅದರ ಸ್ಥಿತಿ ಇತ್ಯಾದಿಗಳನ್ನು ಅವಲಂಬಿಸಿರುತ್ತದೆ.
OnePlus Nord CE4ನ ವೈಶಿಷ್ಟ್ಯಗಳು
ಒನ್‌ಪ್ಲಸ್‌ನ ಈ ಮಧ್ಯಮ ಬಜೆಟ್ ಫೋನ್ 6.7-ಇಂಚಿನ AMOLED ಡಿಸ್ಪ್ಲೇಯೊಂದಿಗೆ ಬರುತ್ತದೆ. ಈ ಫೋನ್‌ನ ಡಿಸ್ಪ್ಲೇ 120Hz ಹೆಚ್ಚಿನ ರಿಫ್ರೆಶ್ ರೇಟ್ ವೈಶಿಷ್ಟ್ಯವನ್ನು ಬೆಂಬಲಿಸುತ್ತದೆ. ಇದಲ್ಲದೆ ಫೋನ್ HDR10+ ಮತ್ತು 1,100 nitsವರೆಗಿನ ಗರಿಷ್ಠ ಹೊಳಪನ್ನು ಸಹ ಬೆಂಬಲಿಸುತ್ತದೆ.
ಇದನ್ನೂ ಓದಿ: ಜನರೇ ಗಮನಿಸಿ.. ಆಧಾರ್ ಕಾರ್ಡ್‌ನಲ್ಲಿ ಈ ತಪ್ಪು ಮಾಡಿದರೆ, ಅದನ್ನು ಎಂದಿಗೂ ಸರಿಪಡಿಸಲು ಸಾಧ್ಯವಿಲ್ಲ..!
OnePlus Nord CE4 5Gಯಲ್ಲಿ Qualcomm Snapdragon 7 Gen 3 ಪ್ರೊಸೆಸರ್ ನೀಡಲಾಗಿದೆ. ಈ ಫೋನ್ 8GB RAM ಮತ್ತು 256GBವರೆಗೆ ಆಂತರಿಕ ಸ್ಟೋರೇಜ್ ಬೆಂಬಲಿಸುತ್ತದೆ. ಇದು ಆಂಡ್ರಾಯ್ಡ್ 14 ಆಧಾರಿತ ಆಕ್ಸಿಜನ್ಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
ಈ ಫೋನ್ 5,500mAhನ ಶಕ್ತಿಶಾಲಿ ಬ್ಯಾಟರಿಯನ್ನು ಹೊಂದಿದೆ. ಈ ಫೋನ್ 100W ಸೂಪರ್‌ವಿಒಸಿ ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯವನ್ನು ಹೊಂದಿದೆ. ಇದರ ಹಿಂಭಾಗದಲ್ಲಿ ಎರಡು ಕ್ಯಾಮೆರಾಗಳಿವೆ. ಇದು 50MP ಮುಖ್ಯ ಕ್ಯಾಮೆರಾವನ್ನು ಹೊಂದಿರುತ್ತದೆ. ಇದಲ್ಲದೆ 8MP ಸೆಕೆಂಡರಿ ಕ್ಯಾಮೆರಾ ಲಭ್ಯವಿರುತ್ತದೆ. ಈ ಫೋನ್ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 16MP ಕ್ಯಾಮೆರಾವನ್ನು ಹೊಂದಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.









