Ozone Day 2022: ಓಝೋನ್ ದಿನಾಚರಣೆ ಹಿಂದಿನ ಕಾರಣ ಮತ್ತು ಅದರ ಮಹತ್ವವೇನು?

Ozone Day 2022: ನಮ್ಮ ಜೀವನಕ್ಕೆ ಆಮ್ಲಜನಕ ಎಷ್ಟು ಮುಖ್ಯವೂ, ಅಷ್ಟೇ ಅಥವಾ ಅದಕ್ಕಿಂತ ಹೆಚ್ಚು ಓಝೋನ್ ಕೂಡ ಮುಖ್ಯವಾಗಿದೆ. ಈ ಕುರಿತು ಜನರಲ್ಲಿ ಅರಿವು ಮೂಡಿಸಲು ಪ್ರತಿವರ್ಷ ಓಝೋನ್ ದಿನಾಚರಣೆಯನ್ನು ಆಚರಿಸಲಾಗುತ್ತದೆ.

Written by - Nitin Tabib | Last Updated : Sep 16, 2022, 06:29 PM IST
  • ಪ್ರತಿ ವರ್ಷ ಸೆಪ್ಟೆಂಬರ್ 16ರಂದು ವಿಶ್ವಾಧ್ಯಂತ ಓಝೋನ್ ದಿನವನ್ನಾಗಿ ಆಚರಿಸಲಾಗುತ್ತದೆ.
  • ಆಮ್ಲಜನಕ ನಮ್ಮ ಜೀವನಕ್ಕೆ ಅತ್ಯಂತ ಮುಖ್ಯವೆಂದು ಪರಿಗಣಿಸಲಾಗುತ್ತದೆ,
  • ಆದರೆ ಓಝೋನ್ ಅದಕ್ಕಿಂತ ಹೆಚ್ಚು ಮುಖ್ಯವಾಗಿದೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ?
Ozone Day 2022: ಓಝೋನ್ ದಿನಾಚರಣೆ ಹಿಂದಿನ ಕಾರಣ ಮತ್ತು ಅದರ ಮಹತ್ವವೇನು? title=
Ozone Day 2022

Ozone Day 2022: ಪ್ರತಿ ವರ್ಷ ಸೆಪ್ಟೆಂಬರ್ 16ರಂದು ವಿಶ್ವಾಧ್ಯಂತ ಓಝೋನ್ ದಿನವನ್ನಾಗಿ ಆಚರಿಸಲಾಗುತ್ತದೆ. ಆಮ್ಲಜನಕ ನಮ್ಮ ಜೀವನಕ್ಕೆ ಅತ್ಯಂತ ಮುಖ್ಯವೆಂದು ಪರಿಗಣಿಸಲಾಗುತ್ತದೆ, ಆದರೆ ಓಝೋನ್ ಅದಕ್ಕಿಂತ ಹೆಚ್ಚು ಮುಖ್ಯವಾಗಿದೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಹೌದು, ಇಂತಹ ಪರಿಸ್ಥಿತಿಯಲ್ಲಿ, ಈ ದಿನವನ್ನು ಆಚರಿಸುವ ಹಿಂದಿನ ಕಾರಣವನ್ನು ತಿಳಿದುಕೊಳ್ಳುವುದು ಮುಖ್ಯ.  ಓಝೋನ್ ದಿನವನ್ನು ಏಕೆ ಆಚರಿಸಲಾಗುತ್ತದೆ ಮತ್ತು ಅದರ ಮಹತ್ವವೇನು ಎಂಬುದರ ಕುರಿತು ಒಮ್ಮೆ ತಿಳಿದುಕೊಳ್ಳೋಣ ಬನ್ನಿ. 

ಓಝೋನ್ ಡೇ ಆಚರಣೆಯ ಇತಿಹಾಸ
>> ಡಿಸೆಂಬರ್ 19, 1994 ರಂದು, ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ (UNGA) ಸೆಪ್ಟೆಂಬರ್ 16ನ್ನು ಓಝೋನ್ ಪದರದ ರಕ್ಷಣೆಗಾಗಿ ಅಂತರಾಷ್ಟ್ರೀಯ ದಿನವೆಂದು ಘೋಷಿಸಿತು.
>> 16 ಸೆಪ್ಟೆಂಬರ್ 1987 ರಂದು, ಯುನೈಟೆಡ್ ನೇಷನ್ಸ್ ಮತ್ತು 45 ಇತರ ದೇಶಗಳು ಓಝೋನ್ ಪದರವನ್ನು ಹಾಳು ಮಾಡುವ ವಸ್ತುಗಳ ಮಾಂಟ್ರಿಯಲ್ ಪ್ರೋಟೋಕಾಲ್ಗೆ ಸಹಿ ಹಾಕಿದವು.
>> ಮಾಂಟ್ರಿಯಲ್ ಪ್ರೋಟೋಕಾಲ್ ಓಝೋನ್ ಪದರದ ಸವಕಳಿಗೆ ಕಾರಣವಾದ ವಸ್ತುಗಳ ಉತ್ಪಾದನೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ, ಇದರಿಂದಾಗಿ ಓಝೋನ್ ಪದರು ರಕ್ಷಿಸಲ್ಪಡುತ್ತದೆ.
>> ವಿಶ್ವ ಓಝೋನ್ ದಿನವನ್ನು ಮೊಟ್ಟಮೊದಲ ಬಾರಿಗೆ 16 ಸೆಪ್ಟೆಂಬರ್ 1995 ರಂದು ಆಚರಿಸಲಾಯಿತು.

ಇದನ್ನೂ ಓದಿ-Realme GT Neo 3T ಭಾರತದಲ್ಲಿ ಬಿಡುಗಡೆ, ಇಲ್ಲಿದೆ ಬೆಲೆ ವೈಶಿಷ್ಟ್ಯ ವಿವರ

ಏನಿದು ಓಝೋನ್ ಪದರು?
ಭೂಮಿಯ ವಾತಾವರಣವು ಓಝೋನ್ ಲೇಯರ್ ಎಂಬ ಪದರವನ್ನು ಹೊಂದಿದೆ. ಈ ಪದರವು ಸೂರ್ಯನಿಂದ ಬರುವ ನೇರಳಾತೀತ ಕಿರಣಗಳಿಂದ ನಮ್ಮನ್ನು ರಕ್ಷಿಸುವುದಲ್ಲದೆ, ಹಾನಿಕಾರಕ ಕಿರಣಗಳಿಂದ ಉಂಟಾಗುವ ತೊಂದರೆಗಳಿಂದ ದೂರವಿರಿಸುತ್ತದೆ. ಓಝೋನ್ ಪದರನ್ನು 1913 ರಲ್ಲಿ ಫ್ರೆಂಚ್ ಭೌತಶಾಸ್ತ್ರಜ್ಞರಾದ ಫ್ಯಾಬ್ರಿ ಚಾರ್ಲ್ಸ್ ಮತ್ತು ಹೆನ್ರಿ ಬುಸನ್ ಕಂಡುಹಿಡಿದಿದ್ದಾರೆ. ಓಝೋನ್ (O3) ಮೂರು ಆಮ್ಲಜನಕ ಪರಮಾಣುಗಳಿಂದ ರಚಿಸಲ್ಪಟ್ಟ ಅನಿಲವಾಗಿದೆ.

ಇದನ್ನೂ ಓದಿ-ಚಿಟಿಕೆಯಲ್ಲಿ ಖಾತೆಯನ್ನು ಖಾಲಿ ಮಾಡುವ ಹೊಸ ಮೊಬೈಲ್ ಬ್ಯಾಂಕಿಂಗ್ ವೈರಸ್ ಪತ್ತೆ! ಈ ಬಗ್ಗೆ ಇರಲಿ ಎಚ್ಚರ

ಓಝೋನ್ ದಿನ 2022 ಥೀಮ್
ಈ ವರ್ಷ 'ಭೂಮಿಯ ಮೇಲಿನ ಜೀವವನ್ನು ರಕ್ಷಿಸುವ ಜಾಗತಿಕ ಸಹಕಾರ' ಅನ್ನು ಓಝೋನ್ ಡೇ ಥೀಮ್ ಆಗಿರಿಸಲು ನಿರ್ಧರಿಸಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News