6000mAh ಬ್ಯಾಟರಿ ಹೊಂದಿರುವ Realme Narzo 80 Lite 5G ಸ್ಮಾರ್ಟ್‌ಫೋನ್‌ ಬಿಡುಗಡೆ: ಬೆಲೆ ಎಷ್ಟು ತಿಳಿಯಿರಿ

Realme Narzo 80 Lite 5G: ಚೀನಾದ ಪ್ರಮುಖ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ರಿಯಲ್‌ಮಿ ತನ್ನ ಲಕ್ಷಾಂತರ ಅಭಿಮಾನಿಗಳಿಗಾಗಿ ಹೊಸ ಸ್ಮಾರ್ಟ್‌ಫೋನ್  ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ರಿಯಲ್‌ಮಿಯ ಮುಂಬರುವ ಸ್ಮಾರ್ಟ್‌ಫೋನ್ ರಿಯಲ್‌ಮಿ ನಾರ್ಜೊ 80 ಲೈಟ್ 5G ಆಗಿರುತ್ತದೆ. ಈ ಸ್ಮಾರ್ಟ್‌ಫೋನ್‌ಗಾಗಿ ಮೈಕ್ರೋಸೈಟ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿಯೂ ಸಹ ಲೈವ್ ಆಗಿದೆ.

Written by - Puttaraj K Alur | Last Updated : Jun 8, 2025, 10:40 PM IST
  • ಕಂಪನಿಯು Realme Narzo 80 Lite 5Gಯಲ್ಲಿ 6.7-ಇಂಚಿನ ದೊಡ್ಡ ಡಿಸ್ಪ್ಲೇ ನೀಡಬಹುದು
  • ಡಿಸ್ಪ್ಲೇ ಫುಲ್ HD ಪ್ಲಸ್ AMOLED ಪ್ಯಾನೆಲ್‌ನೊಂದಿಗೆ 120Hz ರಿಫ್ರೆಶ್ ರೇಟ್‌ಅನ್ನು ಬೆಂಬಲಿಸುತ್ತದೆ
  • ಈ ಸ್ಮಾರ್ಟ್‌ಫೋನ್ 8GBವರೆಗೆ RAM ಮತ್ತು 256GBವರೆಗೆ ಸ್ಟೋರೇಜ್ ಆಯ್ಕೆಯನ್ನು ಹೊಂದಿರಬಹುದು
6000mAh ಬ್ಯಾಟರಿ ಹೊಂದಿರುವ Realme Narzo 80 Lite 5G ಸ್ಮಾರ್ಟ್‌ಫೋನ್‌ ಬಿಡುಗಡೆ: ಬೆಲೆ ಎಷ್ಟು ತಿಳಿಯಿರಿ

Realme Narzo 80 Lite 5G: ರಿಯಲ್‌ಮಿ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಜನಪ್ರಿಯ ಕಂಪನಿಯಾಗಿದೆ. ಕಡಿಮೆ ಬಜೆಟ್ ವಿಭಾಗ ಮತ್ತು ಮಧ್ಯಮ ಶ್ರೇಣಿಯ ವಿಭಾಗದಲ್ಲಿ ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳು ಬಹಳ ಜನಪ್ರಿಯವಾಗಿವೆ. ನೀವು ರಿಯಲ್‌ಮಿ ಅಭಿಮಾನಿಯಾಗಿದ್ದರೆ ಮತ್ತು ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಯೋಜಿಸುತ್ತಿದ್ದರೆ, ನಿಮಗೆ ಒಳ್ಳೆಯ ಸುದ್ದಿ ಇದೆ. ರಿಯಲ್‌ಮಿ ಭಾರತದಲ್ಲಿ ಹೊಸ ಸ್ಮಾರ್ಟ್‌ಫೋನ್ ರಿಯಲ್‌ಮಿ ನಾರ್ಜೊ 80 ಲೈಟ್ 5G ಬಿಡುಗಡೆ ಮಾಡಲಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ನೀವು ಕಡಿಮೆ ಬೆಲೆಯಲ್ಲಿ ಅದ್ಭುತ ವೈಶಿಷ್ಟ್ಯಗಳನ್ನು ಪಡೆಯುತ್ತೀರಿ. 

Add Zee News as a Preferred Source

ರಿಯಲ್‌ಮಿಯ ಮುಂಬರುವ ಸ್ಮಾರ್ಟ್‌ಫೋನ್ ನಾರ್ಜೊ 80 ಸರಣಿಯ ಮೂರನೇ ಸ್ಮಾರ್ಟ್‌ಫೋನ್ ಆಗಿರುತ್ತದೆ. ಕಂಪನಿಯು ಈಗಾಗಲೇ ಈ ಸರಣಿಯಲ್ಲಿ ರಿಯಲ್‌ಮಿ ನಾರ್ಜೊ 80 ಪ್ರೊ 5G ಮತ್ತು ರಿಯಲ್‌ಮಿ ನಾರ್ಜೊ 80x 5G ಅನ್ನು ಪರಿಚಯಿಸಿದೆ. ನೀವು ಹೊಸ ಫೋನ್ ಖರೀದಿಸಲಿದ್ದರೆ ಈ ಸ್ಮಾರ್ಟ್‌ಫೋನ್‌ಗಾಗಿ ನೀವು ಇನ್ನೂ ಕೆಲವು ದಿನ ಕಾಯಬಹುದು.

ಇದನ್ನೂ ಓದಿ:  ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್‌... 16,300 ರೂಪಾಯಿ ಕುಸಿತ ಕಂಡ ಚಿನ್ನದ ಬೆಲೆ; ಇಂದಿನ ಬಂಗಾರದ ದರ ಇಲ್ಲಿದೆ ನೋಡಿ

ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್, ರಿಯಲ್‌ಮಿ ನಾರ್ಜೊ 80 ಲೈಟ್ 5Gಗಾಗಿ ಮೀಸಲಾದ ಮೈಕ್ರೋಸೈಟ್ ಅನ್ನು ಲೈವ್ ಮಾಡಿದೆ. ಇದರ ಭಾರತದಲ್ಲಿ ಬಿಡುಗಡೆಯನ್ನ ಅಮೆಜಾನ್‌ನ ಮೈಕ್ರೋಸೈಟ್ ದೃಢಪಡಿಸಿದೆ. ಕಂಪನಿಯು ಶೀಘ್ರದಲ್ಲೇ ಈ ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಪ್ರಸ್ತುತ ಇದರ ಬಿಡುಗಡೆ ದಿನಾಂಕವನ್ನು ಕಂಪನಿಯು ಬಹಿರಂಗಪಡಿಸಿಲ್ಲ. 

Realme Narzo 80 Lite 5G ವಿಶೇಷಣಗಳು

ಕಂಪನಿಯು Realme Narzo 80 Lite 5Gಯಲ್ಲಿ 6.7-ಇಂಚಿನ ದೊಡ್ಡ ಡಿಸ್ಪ್ಲೇಯನ್ನು ನೀಡಬಹುದು.
* ಡಿಸ್ಪ್ಲೇ ಫುಲ್ HD ಪ್ಲಸ್ AMOLED ಪ್ಯಾನೆಲ್‌ನೊಂದಿಗೆ 120Hz ರಿಫ್ರೆಶ್ ರೇಟ್‌ಅನ್ನು ಬೆಂಬಲಿಸುತ್ತದೆ. 
* ಈ ಸ್ಮಾರ್ಟ್‌ಫೋನ್ 8GBವರೆಗೆ RAM ಮತ್ತು 256GBವರೆಗೆ ಸ್ಟೋರೇಜ್ ಆಯ್ಕೆಯನ್ನು ಹೊಂದಿರಬಹುದು. 
* ಸ್ಮಾರ್ಟ್‌ಫೋನ್‌ಗೆ ಶಕ್ತಿ ತುಂಬಲು ಇದು ದೊಡ್ಡ 6000mAh ಬ್ಯಾಟರಿಯನ್ನು ಹೊಂದಿರಬಹುದು. 
* ಸೋರಿಕೆಯ ಮಾಹಿತಿ ನಂಬುವುದಾದರೆ, ಈ Realme ಸ್ಮಾರ್ಟ್‌ಫೋನ್‌ನಲ್ಲಿ ರಿವರ್ಸ್ ಚಾರ್ಜಿಂಗ್ ಬೆಂಬಲ ಲಭ್ಯವಿರಲಿದೆ.
* ಕಾರ್ಯಕ್ಷಮತೆಗಾಗಿ ಈ ಸ್ಮಾರ್ಟ್‌ಫೋನ್‌ನಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್ ನೀಡಬಹುದು.
* ಈ ಸ್ಮಾರ್ಟ್‌ಫೋನ್‌ನಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಕಾಣಬಹುದು.

* ಈ ಸ್ಮಾರ್ಟ್‌ಫೋನ್‌ ಬೆಲೆ ಅಂದಾಜು 25-30 ಸಾವಿರ ರೂಪಾಯಿ ಇರಬಹುದು ಎಂದು ಹೇಳಲಾಗಿದೆ

ಇದನ್ನೂ ಓದಿ: ಈ ತಿಂಗಳಿನಿಂದ 500 ರೂ. ನೋಟು ಬ್ಯಾನ್!‌ ಕೊನೆಗೂ ಸ್ಪಷ್ಟನೆ ನೀಡಿದ RBI..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News