ರಿಯಲ್‌ಮಿ 6000mAh ಬ್ಯಾಟರಿಯ 5G ಸ್ಮಾರ್ಟ್‌ಫೋನ್‌ ಬಿಡುಗಡೆ; ಅತ್ಯಂತ ಕಡಿಮೆ ಬೆಲೆಗೆ ಖರೀದಿಸಿ

ಈ ಬಜೆಟ್ ಸ್ನೇಹಿ ರಿಯಲ್‌ಮಿ ಸ್ಮಾರ್ಟ್‌ಫೋನ್ 6.67-ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದೆ. ಫೋನ್‌ನ ಡಿಸ್ಪ್ಲೇ 120Hz ಹೈ ರಿಫ್ರೆಶ್ ರೇಟ್‌ ವೈಶಿಷ್ಟ್ಯವನ್ನು ಬೆಂಬಲಿಸುತ್ತದೆ. ಈ ಫೋನ್ 625 nits ವರೆಗಿನ ಗರಿಷ್ಠ ಹೊಳಪನ್ನು ಹೊಂದಿರುತ್ತದೆ.

Written by - Puttaraj K Alur | Last Updated : Jun 3, 2025, 01:11 PM IST
  • ರಿಯಲ್‌ಮಿಯಿಂದ ಭಾರತದಲ್ಲಿ ಮತ್ತೊಂದು ಬಜೆಟ್ 5G ಸ್ಮಾರ್ಟ್‌ಫೋನ್ ಬಿಡುಗಡೆ
  • ಈ ಫೋನ್ 6000mAh ಶಕ್ತಿಶಾಲಿ ಬ್ಯಾಟರಿ ಮತ್ತು 50MP ಕ್ಯಾಮೆರಾ ಹೊಂದಿದೆ
  • ಈ ಬಜೆಟ್ ಸ್ನೇಹಿ ಸ್ಮಾರ್ಟ್‌ಫೋನ್ 6.67-ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದೆ
ರಿಯಲ್‌ಮಿ 6000mAh ಬ್ಯಾಟರಿಯ 5G ಸ್ಮಾರ್ಟ್‌ಫೋನ್‌ ಬಿಡುಗಡೆ; ಅತ್ಯಂತ ಕಡಿಮೆ ಬೆಲೆಗೆ ಖರೀದಿಸಿ

Realme C73 5G Smartpone: ರಿಯಲ್‌ಮಿ ಭಾರತದಲ್ಲಿ ಮತ್ತೊಂದು ಬಜೆಟ್ 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ರಿಯಲ್‌ಮಿ ಫೋನ್ ಅನ್ನು ರಿಯಲ್‌ಮಿ C73 5G ಎಂದು ಪರಿಚಯಿಸಲಾಗಿದೆ. ಈ ಫೋನ್ 6000mAh ಶಕ್ತಿಶಾಲಿ ಬ್ಯಾಟರಿ, 50MP ಕ್ಯಾಮೆರಾದಂತಹ ಹಲವು ಶಕ್ತಿಶಾಲಿ ವೈಶಿಷ್ಟ್ಯಗಳನ್ನು ಹೊಂದಿದೆ. ಈ ರಿಯಲ್‌ಮಿ ಫೋನ್ MIL STD 810 ಮಿಲಿಟರಿ ದರ್ಜೆಯ ಆಘಾತ ನಿರೋಧಕ ಪ್ರಮಾಣಪತ್ರ ಮತ್ತು ಜಲನಿರೋಧಕ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

Add Zee News as a Preferred Source

Realme C73 5Gಯನ್ನು ಭಾರತದಲ್ಲಿ 4GB RAM + 64GB ಮತ್ತು 4GB RAM + 128GB ಎಂಬ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇದರ ಆರಂಭಿಕ ಬೆಲೆ 10,499 ರೂ. ಆಗಿದೆ. ಅದೇ ರೀತಿ ಇದರ ಟಾಪ್ ರೂಪಾಂತರ 11,499 ರೂ. ಆಗಿದೆ. ಈ ಫೋನ್ ಅನ್ನು ಕ್ರಿಸ್ಟಲ್ ಪರ್ಪಲ್, ಜೇಡ್ ಗ್ರೀನ್, ಓನಿಕ್ಸ್ ಬ್ಲಾಕ್ ಬಣ್ಣಗಳಲ್ಲಿ ಖರೀದಿಸಬಹುದು. ನೀವು ಇದನ್ನು ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್ ಮತ್ತು ರಿಯಲ್‌ಮಿಯ ಅಧಿಕೃತ ವೆಬ್‌ಸೈಟ್‌ನಿಂದ ಖರೀದಿಸಬಹುದು.

ಇದನ್ನೂ ಓದಿ: ದೆಹಲಿ ಬಳಿ ದೇಶದ ಅತಿದೊಡ್ಡ ಹಸಿರು ಹೈಡ್ರೋಜನ್ ಸ್ಥಾವರ ನಿರ್ಮಾಣ; 10 ಸಾವಿರ ಟನ್ ಉತ್ಪಾದನೆ ಗುರಿ!!

ಈ ಬಜೆಟ್ ಸ್ನೇಹಿ ರಿಯಲ್‌ಮಿ ಸ್ಮಾರ್ಟ್‌ಫೋನ್ 6.67-ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದೆ. ಫೋನ್‌ನ ಡಿಸ್ಪ್ಲೇ 120Hz ಹೈ ರಿಫ್ರೆಶ್ ರೇಟ್‌ ವೈಶಿಷ್ಟ್ಯವನ್ನು ಬೆಂಬಲಿಸುತ್ತದೆ. ಈ ಫೋನ್ 625 nits ವರೆಗಿನ ಗರಿಷ್ಠ ಹೊಳಪನ್ನು ಹೊಂದಿರುತ್ತದೆ. ರಿಯಲ್‌ಮಿ C73 5G ಆಂಡ್ರಾಯ್ಡ್ 15 ಆಧಾರಿತ ರಿಯಲ್‌ಮಿ UI 6 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಬರುತ್ತದೆ.

ಈ ಫೋನ್ MediaTek Dimensity 6300 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 4GB RAM ಮತ್ತು 128GB ಆಂತರಿಕ ಸ್ಟೋರೇಜ್‌ ಬೆಂಬಲಿಸುತ್ತದೆ. ಫೋನ್‌ನ ಆಂತರಿಕ ಸ್ಟೋರೇಜ್‌ಅನ್ನ ಮೈಕ್ರೊ SD ಕಾರ್ಡ್ ಮೂಲಕ ವಿಸ್ತರಿಸಬಹುದು. ಫೋನ್ ಪ್ರಬಲವಾದ 6000mAh ಬ್ಯಾಟರಿ ಮತ್ತು 15W ವೈರ್ಡ್ ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯವನ್ನು ಹೊಂದಿದೆ. ಈ ಫೋನ್ IP64 ರೇಟಿಂಗ್ ಹೊಂದಿದೆ.

ಇದನ್ನೂ ಓದಿ: ಕನ್ಫರ್ಮ್ ರೈಲು ಟಿಕೆಟ್ ಬೇಕು ಎಂದಾದರೆ ಈ APP ಮೂಲಕ ಬುಕಿಂಗ್ ಮಾಡಿ !ಯಾವ ಸಂದರ್ಭದಲ್ಲಿ ಬುಕ್ ಮಾಡಬೇಕು ಎನ್ನುವ ಮಾಹಿತಿ ಇಲ್ಲಿ ಲಭ್ಯ 

ರಿಯಲ್‌ಮಿ ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಮತ್ತು ಹಿಂಭಾಗದಲ್ಲಿ LED ಫ್ಲ್ಯಾಷ್ ಹೊಂದಿದೆ. ಇದು ಹಿಂಭಾಗದಲ್ಲಿ 32MP ಮುಖ್ಯ AI ಕ್ಯಾಮೆರಾವನ್ನು ಹೊಂದಿದೆ. ಇದರ ಜೊತೆಗೆ ಸೆಕೆಂಡರಿ ಕ್ಯಾಮೆರಾ ಕೂಡ ಲಭ್ಯವಿದೆ. ಸೆಲ್ಫಿಗಳು ಮತ್ತು ವಿಡಿಯೋ ಕರೆಗಾಗಿ ಫೋನ್ 8MP ಕ್ಯಾಮೆರಾವನ್ನು ಹೊಂದಿರುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News