)
Realme P4 Series: ಬಹುನಿರೀಕ್ಷಿತ ರಿಯಲ್ಮಿ ಕಂಪನಿಯು ಪಿ45ಜಿ ಮೊಬೈಲ್ ಸರಣಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ರಿಯಲ್ಮಿ ಪಿ4 ಮತ್ತು ಪಿ4 ಪ್ರೊ 5 ಿ ಅನ್ನು ಕಂಪನಿ ಆಗಸ್ಟ್ 20, 2025ರಾಡು ಅನಾವರಣಗೊಳಿಸಿದೆ. ರಿಯಲ್ಮಿ ಪಿ45ಜಿ ಮೊಬೈಲ್ ಸರಣಿಯ ಪ್ರಮುಖ ವಿಶೇಷಣಗಳು, ಬೆಲೆ ಮತ್ತು ಲಭ್ಯತೆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ರಿಯಲ್ಮಿ ಪಿ4 5ಜಿ ಪ್ರಮುಖ ವಿಶೇಷಣಗಳು:
ರಿಯಲ್ಮಿ ಪಿ4 5ಜಿ ಸ್ಮಾರ್ಟ್ಫೋನ್ 6.77-ಇಂಚಿನ ಫ್ಲಾಟ್ ಅಮೋಲೆಡ್ ಡಿಸ್ಪ್ಲೇ, ಫುಲ್-ಎಚ್ಡಿ+ ರೆಸಲ್ಯೂಶನ್, 144Hz ರಿಫ್ರೆಶ್ ದರ ಮತ್ತು 4,500 ನಿಟ್ಗಳ ಬ್ರೈಟ್ನೆಸ್ ಜೊತೆಗೆ ಬರುತ್ತದೆ. ಹೈಪರ್ ವಿಷನ್ ಎಐ ಚಿಪ್ನೊಂದಿಗೆ ಸಿಂಕ್ ಆಗಿರುವ ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7400 ಚಿಪ್ಸೆಟ್ನಿಂದ ಕಾರ್ಯನಿರ್ವಹಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ರಿಯಲ್ಮಿ ಪಿ4 5ಜಿ ಕ್ಯಾಮೆರಾ ವೈಶಿಷ್ಟ್ಯ:
ರಿಯಲ್ಮಿ ಪಿ4 5ಜಿ ಸ್ಮಾರ್ಟ್ಫೋನ್ನಲ್ಲಿ ಉತ್ತಮ ಛಾಯಾಗ್ರಹಣಕ್ಕಾಗಿ 8MP ಅಲ್ಟ್ರಾ-ವೈಡ್ ಲೆನ್ಸ್ನೊಂದಿಗೆ 50MP ಪ್ರಾಥಮಿಕ AI ಸಂವೇದಕವನ್ನು ಹೊಂದಿದ್ದು, 7,000mAh ಬಿಗ್ ಬ್ಯಾಟರಿ ಬ್ಯಾಕಪ್ ಜೊತೆಗೆ ಬರುತ್ತದೆ.
ರಿಯಲ್ಮಿ ಪಿ4 ಪ್ರೊ 5ಜಿ ಸ್ಮಾರ್ಟ್ಫೋನ್ ವಿಶೇಷಣಗಳು:
ರಿಯಲ್ಮಿ ಪಿ4 ಪ್ರೊ 5ಜಿ ಸ್ಮಾರ್ಟ್ಫೋನ್ 6.78-ಇಂಚಿನ 144Hz ಹೈಪರ್ಗ್ಲೋ 4D ಕರ್ವ್+ ಡಿಸ್ಪ್ಲೇ ಜೊತೆಗೆ ಬರುತ್ತದೆ. 1.5ಕೆ ರೆಸಲ್ಯೂಶನ್, HDR10+ ಬೆಂಬಲ ಮತ್ತು 6,500 ನಿಟ್ಗಳ ಗರಿಷ್ಠ ಬ್ರೈಟ್ನೆಸ್ ಹೊಂದಿರುತ್ತದೆ. ಉತ್ತಮ ಫೋಟೋಗಳನ್ನು ಕ್ಲಿಕ್ಕಿಸಲು ಇದರಲ್ಲಿ 50MP IMX896 ಸೆನ್ಸರ್ ಜೊತೆಗೆ ಟ್ರಿಪಲ್ ಬ್ಯಾಕ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಓಐಎಸ್ ಜೊತೆಗೆ ನೀಡಲಾಗಿದೆ. ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 50MP ಫ್ರಂಟ್ ಕ್ಯಾಮರಾ ನೀಡಲಾಗಿದೆ. ಎರಡೂ ಬದಿಯ ಕ್ಯಾಮೆರಾಗಳು 4K 60fps ವೀಡಿಯೊ ರೆಕಾರ್ಡಿಂಗ್ ಬೆಂಬಲಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಈ ಸಾಧನವು ಹುಡ್ ಅಡಿಯಲ್ಲಿ ಡ್ಯುಯಲ್-ಚಿಪ್ ಕಾನ್ಫಿಗರೇಶನ್ನಿಂದ ಚಾಲಿತವಾಗಿದ್ದು ಇದರಲ್ಲಿ ಸ್ನಾಪ್ಡ್ರಾಗನ್ 7 ಜೆನ್ 4 ಪ್ರೊಸೆಸರ್ ಮೀಸಲಾದ ಹೈಪರ್ ವಿಷನ್ AI ಜಿಪಿಯು ಚಿಪ್ನೊಂದಿಗೆ ಸಂಯೋಜನೆಗೊಂಡಿದೆ. ಈ ಸೆಟಪ್ 144 FPS ಗೇಮ್ಪ್ಲೇ ಮತ್ತು ಅಲ್ಟ್ರಾ HD ಗ್ರಾಫಿಕ್ಸ್ ಬೆಂಬಲಿಸುತ್ತದೆ. ರಿಯಲ್ಮಿ ಪಿ 4 ಪ್ರೊ 5 ಜಿ 80W ಅಲ್ಟ್ರಾ ಚಾರ್ಜಿಂಗ್ ಬೆಂಬಲದೊಂದಿಗೆ ದೊಡ್ಡ 7,000mAh ಬ್ಯಾಟರಿಯನ್ನು ಒಳಗೊಂಡಿದ್ದು ದೀರ್ಘಕಾಲ ಬಾಳಿಕೆ ಬರುತ್ತದೆ.
ರಿಯಲ್ಮಿ ಪಿ4 & ರಿಯಲ್ಮಿ ಪಿ4 ಪ್ರೊ 5ಜಿ ಸ್ಮಾರ್ಟ್ಫೋನ್ ಬೆಲೆ ಮತ್ತು ಲಭ್ಯತೆ:
ಕಂಪನಿ ನೀಡಿರುವ ಮಾಹಿತಿಯ ಪ್ರಕಾರ, ಭಾರತೀಯ ಮಾರುಕಟ್ಟೆಯಲ್ಲಿ ರಿಯಲ್ಮಿ ಪಿ4 ಬೆಲೆ ರೂ. 17,499. ಈ ಫೋನ್ ಎಂಜಿನ್ ಬ್ಲೂ, ಸ್ಟೀಲ್ ಜಿಆರ್ಈ ಮತ್ತು ಫೋರ್ಜ್ ರೆಡ್ ಬಣ್ಣದಳಲ್ಲಿ ಲಭ್ಯವಾಗಲಿದೆ.
ರಿಯಲ್ಮಿ ಪಿ4 ಪ್ರೊ 5ಜಿ ಸ್ಮಾರ್ಟ್ಫೋನ್ ಮಿಡ್ನೈಟ್ ಐವಿ, ಡಾರ್ಕ್ ಓಕ್ ವುಡ್ ಮತ್ತು ಬಿರ್ಚ್ ವುಡ್ ಮೂರು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಈ ಫೋನ್ ಬೆಲೆ ರೂ. 30,000 ಎಂದು ಕಂಪನಿ ಮಾಹಿತಿ ನೀಡಿದೆ.