Realme 15T Smartphone: ಸ್ಮಾರ್ಟ್‌ಫೋನ್ ಬ್ರ್ಯಾಂಡ್ ರಿಯಲ್‌ಮಿ ಮಂಗಳವಾರ ಭಾರತದಲ್ಲಿ ಹೊಸ ಸ್ಮಾರ್ಟ್‌ಫೋನ್ ರಿಯಲ್‌ಮಿ 15Tಯನ್ನ ಬಿಡುಗಡೆ ಮಾಡಿದ್ದು, ಇದು ತನ್ನ 15 ಸರಣಿಯನ್ನ ಮುಂದುವರಿಸುತ್ತಿದೆ. ಈ ಸಾಧನವು ಈಗಾಗಲೇ ಅಸ್ತಿತ್ವದಲ್ಲಿರುವ ರಿಯಲ್‌ಮಿ 15 ಮತ್ತು ರಿಯಲ್‌ಮಿ 15 ಪ್ರೊ ನ ಅಪ್‌ಡೇಟ್ ಆಗಿರುತ್ತದೆ. ಇವುಗಳನ್ನ ಸ್ವಲ್ಪ ಸಮಯದ ಹಿಂದೆ ಬಿಡುಗಡೆ ಮಾಡಲಾಗಿದೆ. ನೀವು ಈ ಸ್ಮಾರ್ಟ್‌ಫೋನ್ ಅನ್ನ ಮೊದಲೇ ಬುಕ್ ಮಾಡಿದರೆ, ನಿಮಗೆ ರಿಯಲ್‌ಮಿ ಬಡ್ಸ್ T01 ಸಂಪೂರ್ಣವಾಗಿ ಉಚಿತವಾಗಿ ಸಿಗುತ್ತದೆ. ಕಂಪನಿಯು ರಿಯಲ್‌ಮಿ 15T ಅನ್ನ ಪವರ್-ಪ್ಯಾಕ್ಡ್ ಮಿಡ್-ರೇಂಜ್ ಆಯ್ಕೆಯಾಗಿ ಪರಿಚಯಿಸಿದೆ, ಇದರಲ್ಲಿ ಬಳಕೆದಾರರು ದೀರ್ಘಕಾಲೀನ ಬ್ಯಾಟರಿ, ಉತ್ತಮ ಪ್ರದರ್ಶನ ಮತ್ತು ವೇಗದ 5G ಪ್ರೊಸೆಸರ್ ಸಂಯೋಜನೆಯನ್ನ ಪಡೆಯುತ್ತಿದ್ದಾರೆ. ಈ ಸ್ಮಾರ್ಟ್‌ಫೋನ್‌ನ ಅತ್ಯಂತ ಶಕ್ತಿಶಾಲಿ ವಿಷಯವೆಂದರೆ ಇದು 7000mAh ಟೈಟಾನ್ ಬ್ಯಾಟರಿ ಮತ್ತು ಡ್ಯುಯಲ್ 50MP AI ಕ್ಯಾಮೆರಾವನ್ನ ಹೊಂದಿದ್ದು, ಇದು ಶೈಲಿ ಮತ್ತು ಶಕ್ತಿ ಎರಡನ್ನೂ ಒಟ್ಟಿಗೆ ತರುತ್ತದೆ.
ವಿವಿಧ ರೂಪಾಂತರಗಳ ಬೆಲೆ ತಿಳಿಯಿರಿ
* 8GB+128GB - ₹20,999
* 8GB+256GB - ₹22,999
* 12GB + 256GB - ₹24,999
ಇದನ್ನೂ ಓದಿ: ಎಸ್‌ಬಿಐ ಬ್ಯಾಂಕ್ ಜೊತೆ ಕೈ ಜೋಡಿಸಿದ ಕೇಂದ್ರ ಸರ್ಕಾರ! ಸರ್ಕಾರಿ ಉದ್ಯೋಗಿಗಳಿಗೆ ₹1 ಕೋಟಿ.. ಕುಟುಂಬ ಸದಸ್ಯರಿಗೆ ₹10 ಲಕ್ಷ
ಬುಕಿಂಗ್‌ಗಳು ಮತ್ತು ಕೊಡುಗೆಗಳು
ರಿಯಲ್‌ಮಿ ಅಧಿಕೃತ ವೆಬ್‌ಸೈಟ್ ಪ್ರಕಾರ, ನೀವು ಸೆಪ್ಟೆಂಬರ್ 5ರಂದು ರಾತ್ರಿ 11.59ರವರೆಗೆ ಮುಂಗಡ ಬುಕ್ ಮಾಡಬಹುದು. ವಿಶೇಷ ಮುಂಗಡ ಬುಕ್ಕಿಂಗ್ ಪ್ರಯೋಜನವಾಗಿ ಗ್ರಾಹಕರಿಗೆ ₹2,999 ಮೌಲ್ಯದ ರಿಯಲ್‌ಮಿ ಬಡ್ಸ್ T01 ಅನ್ನ ಉಚಿತವಾಗಿ ನೀಡಲಾಗುವುದು. ಕಂಪನಿಯು ಸೆಪ್ಟೆಂಬರ್ 5ರಿಂದ ಈ ಫೋನ್ ಅನ್ನು ಶಿಪ್ಪಿಂಗ್ ಮಾಡಲು ಪ್ರಾರಂಭಿಸಲಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ 2000 ರೂ.ವರೆಗಿನ ಬ್ಯಾಂಕ್ ಆಫರ್ ಸಹ ಲಭ್ಯವಿದೆ. ರಿಯಲ್‌ಮಿ 15T ಸ್ಮಾರ್ಟ್‌ಫೋನ್ ಅನ್ನ ಫ್ಲೋಯಿಂಗ್ ಸಿಲ್ವರ್, ಸಿಲ್ಕ್ ಬ್ಲೂ ಮತ್ತು ಸೂಟ್ ಟೈಟಾನಿಯಂ ಎಂಬ ಮೂರು ಬಣ್ಣಗಳಲ್ಲಿ ಖರೀದಿಸಬಹುದು.
You know it #LooksGreat when even Vicky can’t take his eyes off it.
The #realme15T packs a 7000mAh Titan Battery and Dual 50MP AI Camera bringing style and power in one.
Starting from ₹18,999
Pre book now to get free* realme Buds T01.Know More:https://t.co/Xt7V4nRRjT… pic.twitter.com/pHONEqVa2j
— realme (@realmeIndia) September 2, 2025
Realme 15T ವಿಶೇಷಣಗಳು
* ಈ ಸ್ಮಾರ್ಟ್‌ಫೋನ್ 6.57 ಇಂಚಿನ ಡಿಸ್ಪ್ಲೇ ಹೊಂದಿದೆ.
* 50MP ಮುಂಭಾಗ ಮತ್ತು ಹಿಂಭಾಗದ AI ಕ್ಯಾಮೆರಾಗಳು
* 7000mAh ಟೈಟಾನ್ ಬ್ಯಾಟರಿ
* 60W ಫಾಸ್ಟ್ ಚಾರ್ಜ್
* 4000nit 4R ಕಂಫರ್ಟ್+ AMOLED ಡಿಸ್ಪ್ಲೇ
* ಟೆಕ್ಸ್ಚರ್ಡ್ ಮ್ಯಾಟ್ 4R ವಿನ್ಯಾಸ
* ಡೈಮೆನ್ಸಿಟಿ 6400 ಮ್ಯಾಕ್ಸ್ 5G ಚಿಪ್‌ಸೆಟ್
* IP66/68/69 ಜಲನಿರೋಧಕ
* ಇದು ಡೈಮೆನ್ಸಿಟಿ 6400 ಮ್ಯಾಕ್ಸ್ 5G ಚಿಪ್‌ಸೆಟ್ ಹೊಂದಿದೆ.
* 120Hz ರಿಫ್ರೆಶ್ ರೇಟ್ ಹೊಂದಿದೆ
* ಪರದೆ ಮತ್ತು ದೇಹದ ಅನುಪಾತ 93%.
* ಸ್ಮಾರ್ಟ್‌ಫೋನ್‌ನ ತೂಕ 181 ಗ್ರಾಂ.
ಇದನ್ನೂ ಓದಿ: ಔಷಧಿಗಳ ಮೇಲೆ 200% ಸುಂಕ ಏರುವ ನಿರ್ಧಾರ ಮಾಡಿದ ಟ್ರಂಪ್! ಅಮೇರಿಕ ಅಧ್ಯಕ್ಷನ ಮೂರ್ಖತನದ ಪರಮಾವಧಿ
ಮೂರು ವರ್ಷಗಳ ಕಾಲ ಅಪ್‌ಡೇಟ್ ಮತ್ತು ಭದ್ರತಾ ಬೆಂಬಲದ ಭರವಸೆ
Realme 15T ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಅನ್ನ ಆಧರಿಸಿದ Realme UI 6.0ನೊಂದಿಗೆ ಪೂರ್ವ ಲೋಡ್ ಆಗಿದೆ. ಕಂಪನಿಯು ಈ ಸಾಧನಕ್ಕೆ ಮೂರು ವರ್ಷಗಳ ಪ್ರಮುಖ ಆಂಡ್ರಾಯ್ಡ್ ಅಪ್‌ಡೇಟ್‌ಗಳು ಮತ್ತು ನಾಲ್ಕು ವರ್ಷಗಳ ಭದ್ರತಾ ಬೆಂಬಲದ ಭರವಸೆ ನೀಡಿದೆ. ವರದಿಯ ಪ್ರಕಾರ, ಈ ಫೋನ್ ಇತ್ತೀಚಿನ ಆಂಡ್ರಾಯ್ಡ್ 16 ಆವೃತ್ತಿಯೊಂದಿಗೆ ಬರುವುದಿಲ್ಲ. ಇದರ ಹೊರತಾಗಿಯೂ ಬಳಕೆದಾರರು ದೀರ್ಘಕಾಲದವರೆಗೆ ಅಪ್‌ಡೇಟ್‌ಗಳು ಮತ್ತು ಭದ್ರತಾ ವೈಶಿಷ್ಟ್ಯಗಳನ್ನ ಪಡೆಯುತ್ತಾರೆ. ಇದು ಸಾಧನದ ಕಾರ್ಯಕ್ಷಮತೆ ಮತ್ತು ಸುರಕ್ಷತೆಯನ್ನ ಸುಧಾರಿಸುತ್ತದೆ.









