ವಿಮಾನ ಹಾರಾಟಕ್ಕೂ ಮುನ್ನ ಎಂಜಿನ್‌ಗಳ ಮೇಲೆ ಸತ್ತ ಕೋಳಿ ಎಸೆಯುವ ವಿಮಾನಯಾನ ಸಂಸ್ಥೆಗಳು! ಪ್ರಪಂಚದಾದ್ಯಂತೆ ನಡೆಯುವ ಈ ಪದ್ದತಿಯ ಹಿಂದಿನ ಕಾರಣ ಗೊತ್ತಾ?

ವಿಮಾನ ಹಾರಟಕ್ಕೂ ಮುನ್ನ ಎಂಜಿನ್ ಗೆ ಸತ್ತ ಕೋಳಿ ಎಸೆಯುವ ಸಂಪ್ರದಾಯವನ್ನು ಪ್ರಪಂಚಾದ್ಯಂತ ಅನುಸರಿಸಿಕೊಂಡು ಬಂದಿದ್ದಾರೆ. ಕೇಳುವುದಕ್ಕೆ ವಿಚಿತ್ರ ಎನಿಸುವ ಈ ಪದ್ದತಿಯನ್ನು ಪೂರೈಸುವ ಹಿಂದಿನ ಉದ್ದೇಶ ಏನು ಎನ್ನುವುದು ಕೂತುಹಲಕಾರಿಯಾಗಿದೆ. 

Written by - Ranjitha R K | Last Updated : Jun 18, 2025, 03:06 PM IST
  • ವಿಮಾನ ಪ್ರಯಾಣ ಅತ್ಯಂತ ವೇಗದ ಮತ್ತು ಸುರಕ್ಷಿತ ಸಾರಿಗೆ ವಿಧಾನ
  • ತಾಂತ್ರಿಕ ದೋಷ ಚೆಕ್ ಮಾಡಲು ಕೆಲವು ಪರೀಕ್ಷೆ
  • ಏನಿದು ಕೋಳಿ ಎಸೆಯುವ ಪದ್ದತಿ ?
ವಿಮಾನ ಹಾರಾಟಕ್ಕೂ ಮುನ್ನ ಎಂಜಿನ್‌ಗಳ ಮೇಲೆ ಸತ್ತ ಕೋಳಿ ಎಸೆಯುವ ವಿಮಾನಯಾನ ಸಂಸ್ಥೆಗಳು! ಪ್ರಪಂಚದಾದ್ಯಂತೆ ನಡೆಯುವ ಈ ಪದ್ದತಿಯ   ಹಿಂದಿನ ಕಾರಣ ಗೊತ್ತಾ?

ವಿಮಾನ ಪ್ರಯಾಣ ಅತ್ಯಂತ ವೇಗದ ಮತ್ತು ಸುರಕ್ಷಿತ ಸಾರಿಗೆ ವಿಧಾನ ಎಂದು ಕರೆಯಲಾಗುತ್ತದೆ. ಯಾವುದೇ ವಿಮಾನ ಟೆಕ್ ಆಫ್ ಆಗುವ ಮುನ್ನ ವಿಮಾನದಲ್ಲಿ ತಾಂತ್ರಿಕ ದೋಷ ಇವೆಯಾ ಎಂದು ಪರೀಕ್ಷಿಸಲು ಕೆಲವು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಅವುಗಳಲ್ಲಿ ಪ್ರಮುಖವಾದುದು ವಿಮಾನದ ಎಂಜಿನ್‌ಗಳ ಮೇಲೆ ಕೋಳಿ ಎಸೆಯುವುದು. ಹೌದು, ಪ್ರಪಂಚದಾದ್ಯಂತ ವಿಮಾನ ಟೆಕ್ ಆಫ್ ಆಗುವ ಮುನ್ನ ಸತ್ತ ಕೋಳಿಗಳನ್ನು ವಿಮಾನದ ಎಂಜಿನ್ ಗೆ ಎಸೆಯಲಾಗುತ್ತದೆ. 

Add Zee News as a Preferred Source

ಏನಿದು ಕೋಳಿ ಎಸೆಯುವ ಪದ್ದತಿ ? : 
ಕೆಲವೊಮ್ಮೆ ವಿಮಾನ ಟೇಕ್‌ ಆಫ್‌ ಆಗುವಾಗ ಅಥವಾ ಲ್ಯಾಂಡಿಂಗ್‌ ಆಗುವಾಗ ಪಕ್ಷಿಗಳು ವಿಮಾನಕ್ಕೆ ಡಿಕ್ಕಿ ಹೊಡೆಯುವ ಸಾಧ್ಯತೆ ಇರುತ್ತದೆ. ವಿಮಾನಕ್ಕೆ  ಒಂದು ಸಣ್ಣ ಹಕ್ಕಿ  ಡಿಕ್ಕಿಯಾದರೂ ದೊಡ್ಡ ಹಾನಿಯಾಗುವುದು ಗ್ಯಾರಂಟಿ.  ವಿಮಾನ ಟೇಕ್‌ ಆಫ್‌ ಅಥವಾ ಲ್ಯಾಂಡಿಂಗ್‌ ಆಗುವಾಗ ಅದರ ವೇಗ 350 ರಿಂದ 500 ಕಿ.ಮೀ ಇರುತ್ತದೆ. ಈ ಹೊತ್ತಿನಲ್ಲಿ ಒಂದು ಸಣ್ಣ ಹಕ್ಕಿ ಡಿಕ್ಕಿ ಹೊಡೆದರೂ ವಿಮಾನ ವಿಂಡ್‌ ಶೀಲ್ಡ್‌ ಮುರಿಯುವ ಸಾಧ್ಯತೆ ಹೆಚ್ಚು.

ಇದನ್ನೂ ಓದಿ : ರಿಯಲ್‌ಮಿ ಹೊಸ ಬಜೆಟ್ ಫೋನ್: 10,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಜಬರ್ದಸ್ತ್ ಸ್ಮಾರ್ಟ್‌ಫೋನ್ ಬಿಡುಗಡೆ

ಹಕ್ಕಿ ವಿಮಾನಕ್ಕೆ ಡಿಕ್ಕಿ ಹೊಡೆದರೆ, ವಿಮಾನದ ಎಂಜಿನ್‌ ನಿಂತು ಹೋಗುವ ಅಪಾಯ ಎದುರಾಗುತ್ತದೆ. ಬೆಂಕಿ ಹೊತ್ತಿಕೊಳ್ಳುವ ಭಯವೂ ಇರುತ್ತದೆ. ಇದನ್ನು ತಪ್ಪಿಸುವ ಸಲುವಾಗಿ ವಿಮಾನಯಾನ ಕಂಪನಿಗಳು ವಿಮಾನ ಹಾರಾಟಕ್ಕೂ ಮುನ್ನ ಫ್ಲೈಟ್‌ ಎಂಜಿನ್‌ಗೆ ಕೋಳಿಗಳನ್ನು ಎಸೆಯುತ್ತವೆ. ಇದನ್ನು ʼಚಿಕನ್‌ ಗನ್‌ ಟೆಸ್ಟ್‌ʼ ಅಂತ ಕರೆಯುತ್ತಾರೆ. ವಿಮಾನದ ಗಾಜು ಮತ್ತು ಎಂಜಿನ್ ಉತ್ತಮ ಸ್ಥಿತಿಯಲ್ಲಿದೆಯೇ ಅಥವಾ ಇಲ್ಲವೇ ಎನ್ನುವುದನ್ನು ಪತ್ತೆ ಹಚ್ಚುವ ಉದ್ದೇಶದಿಂದ ಈ ಚಿಕನ್ ಗನ್ ಟೆಸ್ಟ್ ಮಾಡಿಸಲಾಗುತ್ತದೆ. 

ಈ ಪರೀಕ್ಷೆ ಹೇಗೆ ನಡೆಯುತ್ತದೆ?
ವಿಮಾನ ಹಾರಾಟಕ್ಕೂ ಮುನ್ನ, ವಿಮಾನದ ಎಂಜಿನ್, ಕಾಕ್‌ಪಿಟ್ ವಿಂಡ್‌ಶೀಲ್ಡ್ ಮತ್ತು ರೆಕ್ಕೆಗಳನ್ನು ಬಲವಾದ ಚೌಕಟ್ಟಿನಲ್ಲಿ ಇಟ್ಟು , ಎಲ್ಲಾ ಭಾಗಗಳ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ. ನಂತರ ಸತ್ತ ಕೋಳಿಯನ್ನು   ಎಸೆದು ಈ ಪರೀಕ್ಷೆಯನ್ನು ಮಾಡಲಾಗುತ್ತದೆ. ಕೋಳಿಯನ್ನು ಎಂಜಿನ್‌ಗೆ ಎಸೆದ ನಂತರದ ಪ್ರತಿ ಕ್ಷಣವನ್ನು ವೀಡಿಯೊದಲ್ಲಿ ಎಚ್ಚರಿಕೆಯಿಂದ ವೀಕ್ಷಿಸಲಾಗುತ್ತದೆ.

ಇದನ್ನೂ ಓದಿ : ಕೇವಲ ₹10,499ಕ್ಕೆ 6,000mAh ಬ್ಯಾಟರಿ ಹೊಂದಿರುವ Narzo 80 Lite ಸ್ಮಾರ್ಟ್‌ಫೋನ್‌ ಖರೀದಿಸಿ

ಕೋಳಿಯನ್ನು ಎಸೆಯುವುದರಿಂದ ವಿಮಾನದಲ್ಲಿ ತಾಂತ್ರಿಕ ದೋಷ ಸ್ಪಷ್ಟವಾಗಿ ಗೋಚರಿಸುತ್ತದೆ. ತಂತ್ರಜ್ಞರು ಎಂಜಿನ್ ಬ್ಲೇಡ್ ಮುರಿದಿದೆಯೇ, ವಿಂಡ್‌ಶೀಲ್ಡ್ ಬಿರುಕು ಬಿಟ್ಟಿದೆಯೇ,  ವಿಮಾನದ ರೆಕ್ಕೆ ಹಾನಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸುತ್ತಾರೆ. ಯಾವುದೇ ಹಾನಿಯಾಗಿಲ್ಲ ಎಂದಾದರೆ ಆ ವಿಮಾನ ಟೆಕ್ ಆಫ್ ಗೆ ಸಿದ್ದವಿದೆ ಎಂದರ್ಥ. ಸಣ್ಣ ದೋಷ ಕಂಡು ಬಂದರೂ ಆ ವಿಮಾನ ಹಾರಾಟಕ್ಕೆ ಅವಕಾಶ ನೀಡಲಾಗುವುದಿಲ್ಲ.  

ಈ ಚಿಕ ಗನ್ ಟೆಸ್ಟ್ ನಡೆಸಲು 2 ರಿಂದ 4 ಕೆಜಿ ತೂಕದ ಕೋಳಿಯನ್ನು ಬಳಸಲಾಗುತ್ತದೆ. ಈ ಪರೀಕ್ಷೆಯನ್ನು ಹಲವು ವರ್ಷಗಳಿಂದ ಮಾಡಲಾಗುತ್ತಿದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ. 

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News