ಇನ್ಮುಂದೆ 'ಗುಂಡಿಬಿದ್ದ' ರಸ್ತೆಗಳ ಬಗ್ಗೆ ದೂರು ನೀಡಲು ಚಿಂತಿಸಬೇಕಿಲ್ಲ: ಫೋನ್‌ನಲ್ಲಿ ಈಗಲೇ ಈ ಆ್ಯಪ್‌ ಡೌನ್‌ಲೋಡ್ ಮಾಡಿ

ಅತ್ಯಂತ ಕೆಟ್ಟ ರಸ್ತೆಗಳು ಅಥವಾ ಗುಂಡಿಗಳ ಬಗ್ಗೆ ವರದಿ ಮಾಡಲು ಇನ್ಮುಂದೆ ಕಷ್ಟಪಡುವ ಅಗತ್ಯವೇ ಇಲ್ಲ. ನಿಮ್ಮ ಬೆರಳ ತುದಿಯಲ್ಲಿ ಈ ಕೆಲಸವನ್ನು ಸುಲಭವಾಗಿ ಮಾಡಬಹುದಾಗಿದೆ. ನಿಮ್ಮ ಈ ಕೆಲಸವನ್ನು ಸರ್ಕಾರಿ ಆ್ಯಪ್ ತುಂಬಾ ಸುಲಭಗೊಳಿಸಿದೆ. 

Written by - Yashaswini V | Last Updated : Jul 17, 2025, 12:45 PM IST
  • ಸರ್ಕಾರಿ ಆ್ಯಪ್ ಬಳಸಿ ರಸ್ತೆ ಗುಂಡಿ ಬಗ್ಗೆ ದೂರು ಸಲ್ಲಿಸಿ
  • ಭಾರತ ಸರ್ಕಾರದ ಸಮೀರ್ ಆ್ಯಪ್ ಮೂಲಕ ರಸ್ತೆ ಗುಂಡಿ ಸಮಸ್ಯೆಗೆ ಸಿಗುತ್ತೆ ಪರಿಹಾರ
ಇನ್ಮುಂದೆ 'ಗುಂಡಿಬಿದ್ದ' ರಸ್ತೆಗಳ ಬಗ್ಗೆ ದೂರು ನೀಡಲು ಚಿಂತಿಸಬೇಕಿಲ್ಲ:  ಫೋನ್‌ನಲ್ಲಿ ಈಗಲೇ ಈ ಆ್ಯಪ್‌  ಡೌನ್‌ಲೋಡ್ ಮಾಡಿ

Potholes: ನಿಮ್ಮ ಊರಲ್ಲಿ, ನೀವಿರುವ ಪ್ರದೇಶದಲ್ಲಿ ರಸ್ತೆ ಹಾಳಾಗಿದ್ಯಾ, ಗುಂಡಿಬಿದ್ದಿರುವ ರಸ್ತೆಗಳಲ್ಲಿ ಸಂಚರಿಸಲು ಕಷ್ಟವಾಗುತ್ತಿದೆಯೇ? ಈ ಸಮಸ್ಯೆಗಳನ್ನು ಬಗೆಹರಿಸಲು ನೀವು ಕಷ್ಟಪಡಬೇಕಿಲ್ಲ ಅಥವಾ ಮನಸ್ಸಿನಲ್ಲಿ ಬೈದುಕೊಂಡು ಓಡಾಡ ಬೇಕಿಲ್ಲ. ನಿಮ್ಮ ಫೋನ್‌ನಲ್ಲಿ ಈ ಒಂದು ಸರ್ಕಾರಿ ಆ್ಯಪ್ ಡೌನ್‌ಲೋಡ್ ಮಾಡಿ ದೂರು ಸಲ್ಲಿಸಿದರೆ ಸಾಕು. 

Add Zee News as a Preferred Source

ಹೌದು, ರಾಷ್ಟ್ರೀಯ ವಾಯು ಗುಣಮಟ್ಟ ಸೂಚ್ಯಂಕದ ಗಂಟೆಯ ವರದಿಗಳನ್ನು ಅಂದರೆ AQI ಅನ್ನು ನೀಡಲು ಭಾರತ ಸರ್ಕಾರ  ದಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ರಚಿಸಿರುವ 'ಸಮೀರ್ ಅಪ್ಲಿಕೇಶನ್' ಅನ್ನು ನಿಮ್ಮ ಮೊಬೈಲ್'ನಲ್ಲಿ ಡೌನ್‌ಲೋಡ್ ಮಾಡಿ ವಾಯು ಮಾಲಿನ್ಯದ ಜೊತೆಗೆ ಗುಂಡಿಬಿದ್ದ ರಸ್ತೆಗಳ ಬಗ್ಗೆಯೂ ಇದರಲ್ಲಿ ಸುಲಭವಾಗಿ ದೂರು ಸಲ್ಲಿಸಬಹುದು.  ಆಂಡ್ರಾಯ್ಡ್ ಮತ್ತು iOS ಪ್ಲಾಟ್‌ಫಾರ್ಮ್‌ಗಳಲ್ಲಿ ಸರ್ಕಾರದ ಈ ಸಮೀರ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದಾಗಿದ್ದು, ಇದರಲ್ಲಿ ಬಳಕೆದಾರರು ತಮ್ಮ ಸಮಸ್ಯೆಯನ್ನು ನೇರವಾಗಿ ಫೋಟೋದೊಂದಿಗೆ CPCB ಗೆ ಕಳುಹಿಸಬಹುದಾಗಿದೆ. 

ದೂರು ನೀಡುವುದು ಹೇಗೆ? 
ಕೆಳಗೆ ನೀಡಲಾದ ಹಂತಗಳನ್ನು ಅನುಸರಿಸುವ ಮೂಲಕ ಸಮೀರ್ ಅಪ್ಲಿಕೇಶನ್‌ನಲ್ಲಿ ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಗುಂಡಿಬಿದ್ದಿರುವ ರಸ್ತೆಗಳ ಬಗ್ಗೆ ಸುಲಭವಾಗಿ ದೂರು ಸಲ್ಲಿಸಬಹುದು. 

ಹಂತ-1: ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್‌ನಿಂದ ಸಮೀರ್ ಆಪ್ ಡೌನ್‌ಲೋಡ್ ಮಾಡಿ.

ಹಂತ-2: ಈ ಅಪ್ಲಿಕೇಶನ್‌ನಲ್ಲಿ ದೂರನ್ನು ನೋಂದಾಯಿಸಲು ಅಥವಾ ದೂರನ್ನು ಟ್ರ್ಯಾಕ್ ಮಾಡಲು ನೀವು ಮೊದಲು ಲಾಗಿನ್ ಆಗಬೇಕು.

ಹಂತ-3: ಈ ಅಪ್ಲಿಕೇಶನ್‌ನಲ್ಲಿ ನೀವು ಖಾತೆಯನ್ನು ಹೊಂದಿಲ್ಲದಿದ್ದರೂ ಸಹ, ಲಾಗಿನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ನಮೂದಿಸುವ ಮೂಲಕ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿಕೊಳ್ಳಲು ಸಾಧ್ಯವಾಗುತ್ತದೆ.

ಹಂತ-4: ಇದಾದ ನಂತರ, ಅಪ್ಲಿಕೇಶನ್‌ನಲ್ಲಿ ಕೆಳಗಿನ ಎರಡನೇ ಸ್ಥಾನದಲ್ಲಿ ದೂರು ಆಯ್ಕೆ ಕಾಣಿಸಿಕೊಳ್ಳುತ್ತದೆ. ಇಲ್ಲಿ, ‘ಹೊಸ ದೂರು ಸೇರಿಸಿ’ ಎಂಬ ಆಯ್ಕೆಯನ್ನು ಆರಿಸಿ, ಅಗತ್ಯ ವಿವರಗಳನ್ನು ಭರ್ತಿ ಮಾಡಬೇಕು.

ಹಂತ-5: ನೀವು ‘ಹೊಸ ದೂರು ಸೇರಿಸಿ’ಆಯ್ಕೆಯನ್ನು ಆರಿಸಿದಾಗ, ಫೋನ್‌ನ ಕ್ಯಾಮೆರಾ ಬಳಸಲು ನಿಮ್ಮ ಅನುಮತಿ ಕೇಳಬಹುದು. ಅದನ್ನು ಅನುಮತಿಸಿ.

ಹಂತ-6: ಇದರ ನಂತರ, ಹಾಳಾದ ರಸ್ತೆಗಳು ಅಥವಾ ಗುಂಡಿಗಳ ಬಗ್ಗೆ ದೂರು ಸಲ್ಲಿಸಲು ನೀವು ದೂರು ವಿಭಾಗದಲ್ಲಿ ಡಾಂಬರು ಹಾಕದ ರಸ್ತೆ/ಗುಂಡಿಯನ್ನು ಆಯ್ಕೆ ಮಾಡಬೇಕಾಗುತ್ತದೆ. 

ಹಂತ-7: ಇದರ ನಂತರ, ನೀವು ರಸ್ತೆ ಅಥವಾ ಗುಂಡಿಯ ಫೋಟೋವನ್ನು ಲಗತ್ತಿಸಿ ಸ್ಥಳ, ರಾಜ್ಯ, ನಗರ, ಪ್ರದೇಶದ ವಿಳಾಸ ಮತ್ತು ಪಿನ್‌ಕೋಡ್‌ನಂತಹ ಮಾಹಿತಿಯನ್ನು ಭರ್ತಿ ಮಾಡಬೇಕು.

ಹಂತ-8: ಬಳಿಕ ನೀವು ನಿಮ್ಮ ದೂರನ್ನು ನೋಂದಾಯಿಸಲು ಸಾಧ್ಯವಾಗುತ್ತದೆ ಮತ್ತು ದೂರು ದಾಖಲಿಸಿದ ನಂತರ ಸ್ವೀಕರಿಸಿದ ಸಂಖ್ಯೆಯ ಮೂಲಕ ದೂರಿನ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದಾಗಿದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News