)
Samsung Galaxy M16 5G Smartphone: ಸ್ಯಾಮ್ಸಂಗ್ ತನ್ನ ಮುಂಬರುವ ಹಬ್ಬದ ಮಾರಾಟಕ್ಕಾಗಿ ಉತ್ತಮ ಡೀಲ್ಗಳನ್ನ ಬಹಿರಂಗಪಡಿಸಿದೆ. ಈ ವರ್ಷ ಬಿಡುಗಡೆಯಾದ ಗ್ಯಾಲಕ್ಸಿ M ಮತ್ತು ಗ್ಯಾಲಕ್ಸಿ F ಸರಣಿಯ ಸ್ಮಾರ್ಟ್ಫೋನ್ಗಳ ಬೆಲೆಯಲ್ಲಿ ಗಮನಾರ್ಹ ಕಡಿತವಾಗಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ M36 5Gಯನ್ನ ಕೇವಲ ₹13,999ಗೆ ಖರೀದಿಸಬಹುದು. ಇದು ₹19,999ನ ಮೂಲ ಬೆಲೆಯಲ್ಲಿ ಬಿಡುಗಡೆಯಾಗಿದ್ದು, ₹6,000ರಷ್ಟು ಡಿಸ್ಕೌಂಟ್ ನೀಡಲಾಗುತ್ತಿದೆ.
ಇನ್ನು Samsung Galaxy M16 5Gಯನ್ನ ನೀವು ₹10,499ಗೆ ಖರೀದಿಸಬಹುದು. ಈ ಫೋನ್ ₹13,499 ಆರಂಭಿಕ ಬೆಲೆಗೆ ಬಿಡುಗಡೆ ಮಾಡಲಾಯಿತು. ಈ ಫೋನ್ ಖರೀದಿಯ ಮೇಲೆ ₹3,000ರಷ್ಟು ಡಿಸ್ಕೌಂಟ್ ಲಭ್ಯವಿದೆ. ಅದರಂತೆ Samsung Galaxy M06 5Gಯನ್ನ ₹7,499ಗೆ ಖರೀದಿಸಬಹುದು. ಈ ಫೋನ್ ₹9,999 ಆರಂಭಿಕ ಬೆಲೆಗೆ ಬಿಡುಗಡೆ ಮಾಡಲಾಗಿದೆ. ಈ ಫೋನ್ ಖರೀದಿಯ ಮೇಲೆ ₹2,500 ಬೆಲೆ ಕಡಿತ ಮಾಡಲಾಗಿದೆ.
Samsung Galaxy F36 5Gಯನ್ನ ಕೇವಲ ₹13,999ಗೆ ಖರೀದಿಸಬಹುದು. ಈ ಫೋನ್ ₹19,999 ಆರಂಭಿಕ ಬೆಲೆಗೆ ಬಿಡುಗಡೆ ಮಾಡಲಾಗಿದ್ದು, ಇದರ ಖರೀದಿಯ ಮೇಲೆ ₹6,000ರಷ್ಟು ರಿಯಾಯಿತಿ ನೀಡಲಾಗುತ್ತಿದೆ.
Samsung Galaxy F06 5G ಸ್ಮಾರ್ಟ್ಫೋನ್ಅನ್ನ ₹7,499 ರೂ.ಗೆ ಖರೀದಿಸಬಹುದು. ಈ ಫೋನ್ ಅನ್ನ ₹9,999 ಆರಂಭಿಕ ಬೆಲೆಗೆ ಬಿಡುಗಡೆ ಮಾಡಲಾಯಿತು. ಈ ಫೋನ್ನ ಬೆಲೆಯನ್ನ ₹2,500ರಷ್ಟು ಕಡಿಮೆ ಮಾಡಲಾಗಿದೆ. ಈ ಎಲ್ಲಾ ಫೋನ್ಗಳ ಮೇಲಿನ ಡಿಸ್ಕೌಂಟ್ ಸೀಮಿತ ಅವಧಿಗೆ ಲಭ್ಯವಿದೆ. ಹೀಗಾಗಿ ಕಡಿಮೆ ಬೆಲೆಗೆ ಅದ್ಭುತ ವೈಶಿಷ್ಟ್ಯಗಳನ್ನ ಹೊಂದಿರುವ ಸ್ಮಾರ್ಟ್ಫೋನ್ ಖರೀದಿಸಲು ಇದು ಸುವರ್ಣಾವಕಾಶವಾಗಿದೆ.