Samsung Galaxy S24 Ultra 256GB ಖರೀದಿಯ ಮೇಲೆ ಆಫರ್‌ಗಳ ಸುರಿಮಳೆ; ಇಂದೇ ಖರೀದಿಸಿ

Samsung Galaxy S24 Ultra 5G ಪ್ರೀಮಿಯಂ ಸ್ಮಾರ್ಟ್‌ಫೋನ್ ಆಗಿದೆ. ಕ್ಯಾಮೆರಾ ಗುಣಮಟ್ಟಕ್ಕಾಗಿ ಇದು ಪ್ರಪಂಚದಾದ್ಯಂತ ಜನಪ್ರಿಯವಾಗಿದೆ. ನೀವು ಇದನ್ನು ಖರೀದಿಸಲು ಬಯಸಿದರೆ ಒಳ್ಳೆಯ ಸುದ್ದಿ ಇದೆ. ಇ-ಕಾಮರ್ಸ್ ವೆಬ್‌ಸೈಟ್ ಅಮೆಜಾನ್ ಈ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ದೊಡ್ಡ ಕಡಿತ ಮಾಡಿದೆ.

Written by - Puttaraj K Alur | Last Updated : Apr 11, 2025, 07:28 PM IST
  • Samsung Galaxy S24 Ultra 5G ಟೈಟಾನಿಯಂ ಫ್ರೇಮ್ ಹೊಂದಿದ್ದು, ಹಿಂಭಾಗದಲ್ಲಿ ಗಾಜಿನ ಫಲಕವಿದೆ
  • ಈ ಸ್ಮಾರ್ಟ್‌ಫೋನ್ 6.8-ಇಂಚಿನ ಡೈನಾಮಿಕ್ LTPO AMOLED ಪ್ಯಾನೆಲ್ ಹೊಂದಿದೆ
  • ಸ್ಯಾಮ್‌ಸಂಗ್ ಈ ಸ್ಮಾರ್ಟ್‌ಫೋನ್‌ನಲ್ಲಿ 12GB ವರೆಗೆ RAM ಮತ್ತು 1TBವರೆಗೆ ಸ್ಟೋರೇಜ್ ಒದಗಿಸಿದೆ
Samsung Galaxy S24 Ultra 256GB ಖರೀದಿಯ ಮೇಲೆ ಆಫರ್‌ಗಳ ಸುರಿಮಳೆ; ಇಂದೇ ಖರೀದಿಸಿ

Samsung Galaxy S24 Ultra: ಪ್ರೀಮಿಯಂ ವಿಭಾಗದಲ್ಲಿ ಸ್ಯಾಮ್‌ಸಂಗ್ ಹಲವು ಅದ್ಭುತ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಆದರೆ ಕಂಪನಿಯ ಅತ್ಯಂತ ಪ್ರೀಮಿಯಂ ಮತ್ತು ಕ್ಯಾಮೆರಾ ಕೇಂದ್ರಿತ ಫೋನ್‌ನ ವಿಷಯಕ್ಕೆ ಬಂದಾಗ, ಅಲ್ಟ್ರಾ ಸ್ಮಾರ್ಟ್‌ಫೋನ್ ಹೆಸರು ಕೇಳಿಬರುತ್ತದೆ. ಇವು ತುಂಬಾ ದುಬಾರಿಯಾಗಿರುವುದರಿಂದ ಎಲ್ಲರೂ ಅವುಗಳನ್ನು ಖರೀದಿಸಲು ಸಾಧ್ಯವಿಲ್ಲ. ನೀವು ಸ್ಯಾಮ್‌ಸಂಗ್‌ನ ಅಲ್ಟ್ರಾ ಸರಣಿಯ ಫೋನ್ ಖರೀದಿಸಲು ಬಯಸಿದರೆ ನಿಮಗೆ ಇಲ್ಲಿದೆ ಗುಡ್‌ ನ್ಯೂಸ್. ಈ ಸಮಯದಲ್ಲಿ ನೀವು ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ 5Gಯನ್ನು ಭಾರೀ ರಿಯಾಯಿತಿಯೊಂದಿಗೆ ಖರೀದಿಸಬಹುದು. 

Add Zee News as a Preferred Source

ನಿಮಗೆ ಉತ್ತಮ OTT ಸ್ಟ್ರೀಮಿಂಗ್ ಅನುಭವ ನೀಡುವ, ಭಾರೀ ಗೇಮಿಂಗ್ ಮಾಡಬಹುದಾದ ಅಥವಾ ಕೃತಕ ಬುದ್ಧಿಮತ್ತೆ ವೈಶಿಷ್ಟ್ಯಗಳನ್ನು ಉತ್ತಮವಾಗಿ ಬಳಸಿಕೊಳ್ಳಬಹುದಾದ ಸ್ಮಾರ್ಟ್‌ಫೋನ್ ಬೇಕಾದರೆ, Samsung Galaxy S24 Ultra 5G ಅತ್ಯುತ್ತಮ ಸ್ಮಾರ್ಟ್‌ಫೋನ್ ಆಗಿದೆ. ಇದರಲ್ಲಿ ನೀವು ವಿಭಾಗದ ಉನ್ನತ ದರ್ಜೆಯ ಕ್ಯಾಮೆರಾ ಸೆಟಪ್ ಪಡೆಯುತ್ತೀರಿ. ಇದರೊಂದಿಗೆ ಇದು ಉತ್ತಮ ಚಿಪ್‌ಸೆಟ್ ಮತ್ತು ದೊಡ್ಡ ಬ್ಯಾಟರಿಯನ್ನು ಹೊಂದಿದ್ದು, ಪೂರ್ಣ ಚಾರ್ಜ್ ಮಾಡಿದ ನಂತರ ಇಡೀ ದಿನ ಬಾಳಿಕೆ ಬರುತ್ತದೆ.

ಇದನ್ನೂ ಓದಿ: ಭತ್ಯೆ ಹೆಚ್ಚಳದ ಬಗ್ಗೆ ಕೇಂದ್ರ ಸರ್ಕಾರದ ಮಹತ್ವದ ಘೋಷಣೆ; ಇದಕ್ಕಿಂತ ಸಿಹಿ ಸುದ್ದಿ ಮತ್ತೊಂದಿಲ್ಲ!!

Samsung Galaxy S24 Ultra 5G ಮೇಲೆ ಆಫರ್‌ಗಳ ಸುರಿಮಳೆ

ಇ-ಕಾಮರ್ಸ್ ವೆಬ್‌ಸೈಟ್ ಅಮೆಜಾನ್ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ 5G ಮೇಲೆ ಆಫರ್‌ಗಳ ಸುರಿಮಳೆಗೈದಿದೆ. ಕಂಪನಿಯು ಪ್ರಸ್ತುತ ಈ ಸ್ಮಾರ್ಟ್‌ಫೋನ್‌ನಲ್ಲಿ ಹಲವು ಕೊಡುಗೆಗಳನ್ನು ನೀಡುತ್ತಿದ್ದು, ಇದರ ಲಾಭವನ್ನು ಪಡೆದುಕೊಂಡು ನೀವು ಅಗ್ಗದ ಬೆಲೆಗೆ ಸ್ಮಾರ್ಟ್‌ಫೋನ್ ಖರೀದಿಸಬಹುದು. ಈಗ ನೀವು Samsung Galaxy S24 Ultra 5G ಖರೀದಿಸಲು ಒಂದೂವರೆ ಲಕ್ಷ ರೂಪಾಯಿಗಳನ್ನು ಖರ್ಚು ಮಾಡಬೇಕಾಗಿಲ್ಲ. ಈ ಫೋನ್‌ನಲ್ಲಿ ಲಭ್ಯವಿರುವ ಕೊಡುಗೆಗಳ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ....

Samsung Galaxy S24 Ultra 5G ಬೆಲೆ ಇಳಿಕೆ!

ಅಮೆಜಾನ್ ಲಕ್ಷಾಂತರ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಈಗ Samsung Galaxy S24 Ultra 5Gಯನ್ನು ಅದರ ನೈಜ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಈ ಸ್ಮಾರ್ಟ್‌ಫೋನ್‌ನ ನಿಜವಾದ ಬೆಲೆ 1,34,999 ರೂ.ಗಳು. ಈ ಬೆಲೆ ಅದರ 256GB ರೂಪಾಂತರಕ್ಕೆ. ಅಮೆಜಾನ್ ನೇರವಾಗಿ ತನ್ನ ಬೆಲೆಯನ್ನು 32%ರಷ್ಟು ಕಡಿಮೆ ಮಾಡಿದೆ. ಈ ರಿಯಾಯಿತಿಯೊಂದಿಗೆ ನೀವು ಈಗಲೇ ಖರೀದಿಸಿ ಕೇವಲ 92,215 ರೂ.ಗಳಿಗೆ ಮನೆಗೆ ತೆಗೆದುಕೊಂಡು ಹೋಗಬಹುದು.

ನೀವು ಇನ್ನೂ ಕಡಿಮೆ ಬೆಲೆಗೆ ಖರೀದಿಸಲು ಬಯಸಿದರೆ, Amazonನ ಇತರ ಕೊಡುಗೆಗಳ ಲಾಭವನ್ನು ಪಡೆಯಬಹುದು. ಕಂಪನಿಯು ಗ್ರಾಹಕರಿಗೆ 2,766 ರೂ.ಗಳ ಕ್ಯಾಶ್‌ಬ್ಯಾಕ್ ನೀಡುತ್ತಿದೆ. ನಿಮ್ಮ ಬಜೆಟ್ ಕಡಿಮೆಯಿದ್ದರೆ ನೀವು ಅದನ್ನು 4,152 ರೂ.ಗಳ ಮಾಸಿಕ EMIನಲ್ಲಿಯೂ ಖರೀದಿಸಬಹುದು. ಈಗ ಅಮೆಜಾನ್‌ನ ಅತಿದೊಡ್ಡ ಕೊಡುಗೆಯ ಬಗ್ಗೆಯೂ ನೀವು ತಿಳಿದುಕೊಳ್ಳಬೇಕು. ಅಮೆಜಾನ್ ತನ್ನ ಗ್ರಾಹಕರಿಗೆ ಉತ್ತಮ ವಿನಿಮಯ ಕೊಡುಗೆಯನ್ನು ಸಹ ತಂದಿದೆ. ಪ್ರಸ್ತುತ ಇದರ ಮೇಲೆ 22,800 ರೂ.ಗಳ ವಿನಿಮಯ ಕೊಡುಗೆಯನ್ನು ನೀಡಲಾಗುತ್ತಿದೆ. ಈ ಕೊಡುಗೆಯ ಸಂಪೂರ್ಣ ಮೌಲ್ಯವನ್ನು ನೀವು ಪಡೆಯಲು ಸಾಧ್ಯವಾದರೆ, ಈ ಫೋನ್ ಅನ್ನು ಕೇವಲ 69,000 ರೂ.ಗಳಿಗೆ ಖರೀದಿಸಬಹುದು. ವಿನಿಮಯ ಮೌಲ್ಯವು ನಿಮ್ಮ ಹಳೆಯ ಫೋನಿನ ಕಾರ್ಯ ಮತ್ತು ಭೌತಿಕ ಸ್ಥಿತಿಯನ್ನು ಅವಲಂಬಿಸಿರುತ್ತದೆ.

Samsung Galaxy S24 Ultra 5G ವಿಶೇಷಣಗಳು

* Samsung Galaxy S24 Ultra 5G ಟೈಟಾನಿಯಂ ಫ್ರೇಮ್ ಹೊಂದಿದ್ದು, ಇದರ ಹಿಂಭಾಗದಲ್ಲಿ ಗಾಜಿನ ಫಲಕವಿದೆ.
* ಈ ಸ್ಮಾರ್ಟ್‌ಫೋನ್ 6.8-ಇಂಚಿನ ಡೈನಾಮಿಕ್ LTPO AMOLED ಪ್ಯಾನೆಲ್ ಹೊಂದಿದ್ದು, ಇದು 120Hz ರಿಫ್ರೆಶ್ ದರವನ್ನು ಹೊಂದಿದೆ.
* ಡಿಸ್ಪ್ಲೇಯನ್ನು ರಕ್ಷಿಸಲು ಕಾರ್ನಿಂಗ್ ಗೊರಿಲ್ಲಾ ಆರ್ಮರ್ ಒದಗಿಸಲಾಗಿದೆ.
* ಹೆಚ್ಚಿನ ಕಾರ್ಯಕ್ಷಮತೆಗಾಗಿ ಇದು ಸ್ನಾಪ್‌ಡ್ರಾಗನ್ 8 Gen 3 ಪ್ರೊಸೆಸರ್ ಹೊಂದಿದೆ.
* ಸ್ಯಾಮ್‌ಸಂಗ್ ಈ ಸ್ಮಾರ್ಟ್‌ಫೋನ್‌ನಲ್ಲಿ 12GB ವರೆಗೆ RAM ಮತ್ತು 1TBವರೆಗೆ ಸ್ಟೋರೇಜ್ ಒದಗಿಸಿದೆ.
* ಛಾಯಾಗ್ರಹಣಕ್ಕಾಗಿ ಇದು 200+10+50+12 ಮೆಗಾಪಿಕ್ಸೆಲ್‌ಗಳ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ.
* ಇದು ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 12MP ಕ್ಯಾಮೆರಾವನ್ನು ಹೊಂದಿದೆ.
* Samsung Galaxy S24 Ultraಗೆ ಶಕ್ತಿ ತುಂಬಲು 5000mAh ಬ್ಯಾಟರಿಯನ್ನು ಒದಗಿಸಲಾಗಿದ್ದು, ಇದು 45W ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ.

ಇದನ್ನೂ ಓದಿ: ಏಪ್ರಿಲ್ 10 ರಂದು ಈ ರಾಜ್ಯಗಳಲ್ಲಿ ಬ್ಯಾಂಕ್ ಗಳಿಗೆ ರಜೆ ಘೋಷಣೆ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News