Samsung Galaxy F06 5G Smartphone: ಈ ವರ್ಷ ಸ್ಯಾಮ್‌ಸಂಗ್ ಬಿಡುಗಡೆ ಮಾಡಿದ ಬಜೆಟ್ ಸ್ಮಾರ್ಟ್‌ಫೋನ್‌ಗಳಲ್ಲಿ ಭಾರೀ ಬೆಲೆ ಕುಸಿತವಾಗಿದೆ. ಸ್ಯಾಮ್‌ಸಂಗ್‌ನ ಈ 5G ಸ್ಮಾರ್ಟ್‌ಫೋನ್ ಕೇವಲ 10,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಇದಲ್ಲದೆ ಈ ಫೋನ್ ಖರೀದಿಯ ಮೇಲೆ ಬ್ಯಾಂಕ್ ರಿಯಾಯಿತಿ ಸಹ ನೀಡಲಾಗುತ್ತಿದೆ. ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ನಡೆಯುತ್ತಿರುವ ಮಾರಾಟದಲ್ಲಿ ಸ್ಯಾಮ್‌ಸಂಗ್‌ನ ಈ ಇತ್ತೀಚಿನ ಸ್ಮಾರ್ಟ್‌ಫೋನ್ ಖರೀದಿಸುವಾಗ ನೀವು ಹಲವು ಕೊಡುಗೆಗಳನ್ನು ಪಡೆಯಬಹುದು. ಈ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ 6GB RAM ಮತ್ತು 128GB ವರೆಗಿನ ಆಂತರಿಕ ಸ್ಟೋರೇಜ್‌ನೊಂದಿಗೆ ಬರುತ್ತದೆ.
Galaxy F06 5G ಮೇಲಿನ ಆಫರ್‌ಗಳು
Samsung Galaxy F06 5G ಇತ್ತೀಚೆಗಷ್ಟೇ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಸ್ಯಾಮ್‌ಸಂಗ್‌ನ ಈ ಬಜೆಟ್ ಫೋನ್ 4GB RAM + 128GB ಮತ್ತು 6GB RAM + 128GB ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಬರುತ್ತದೆ. ಇದರ ಮೂಲ ರೂಪಾಂತರದ ಬೆಲೆ 9,999 ರೂ. ಇದ್ದು, ಅದೇ ರೀತಿ ಇದರ ಟಾಪ್ ರೂಪಾಂತರವು 11,499 ರೂ.ಗಳಿಗೆ ಬರುತ್ತದೆ. ಈ ಎರಡೂ ರೂಪಾಂತರಗಳ ಖರೀದಿಗೆ 500 ರೂ.ಗಳ ಫ್ಲಾಟ್ ಬ್ಯಾಂಕ್ ರಿಯಾಯಿತಿ ನೀಡಲಾಗುತ್ತಿದೆ. ಇದಲ್ಲದೆ ಫೋನ್ ಖರೀದಿಯ ಮೇಲೆ 9,400 ರೂ.ಗಳವರೆಗೆ ವಿನಿಮಯ ಕೊಡುಗೆ ಸಹ ನೀಡಲಾಗುತ್ತಿದೆ. ಹೀಗಾಗಿ ನೀವು ಸ್ಯಾಮ್‌ಸಂಗ್‌ನ ಈ 5G ಫೋನ್ ಅನ್ನು ಅಗ್ಗವಾಗಿ ಖರೀದಿಸಲು ಇದೊಂದು ಉತ್ತಮ ಅವಕಾಶ.
ಸ್ಯಾಮ್‌ಸಂಗ್ ಗ್ಯಾಲಕ್ಸಿ F06 5G
ಈ Samsung ಫೋನ್ 6.7-ಇಂಚಿನ HD+ ಡಿಸ್ಪ್ಲೇ ಹೊಂದಿದೆ. ಕಂಪನಿಯು ವಾಟರ್‌ಡ್ರಾಪ್ ನಾಚ್‌ನೊಂದಿಗೆ HD+ ಡಿಸ್ಪ್ಲೇಯನ್ನು ಒದಗಿಸಿದೆ. ಈ ಫೋನ್ MediaTek Dimensity 6300 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್ 6GB RAM ಮತ್ತು 128GB ವರೆಗಿನ ಆಂತರಿಕ ಸ್ಟೋರೇಜ್‌ಅನ್ನ ಬೆಂಬಲಿಸುತ್ತದೆ. ಫೋನ್‌ನ RAM ಮತ್ತು ಸ್ಟೋರೇಜ್‌ಅನ್ನ ವಿಸ್ತರಿಸಬಹುದು. ಈ ಫೋನ್‌ನೊಂದಿಗೆ ಕಂಪನಿಯು 4 ವರ್ಷಗಳ ಸಾಫ್ಟ್‌ವೇರ್ ಮತ್ತು 4 ವರ್ಷಗಳ ಭದ್ರತಾ ಅಪ್‌ಡೇಟ್‌ಗಳನ್ನು ನೀಡುತ್ತಿದೆ.
Samsung Galaxy F06 5G ಆಂಡ್ರಾಯ್ಡ್ 14 ಆಧಾರಿತ OneUI ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಬರುತ್ತದೆ. ಈ ಫೋನ್ 25W USB ಟೈಪ್ C ಚಾರ್ಜಿಂಗ್ ವೈಶಿಷ್ಟ್ಯದೊಂದಿಗೆ ಪ್ರಬಲವಾದ 5,000mAh ಬ್ಯಾಟರಿಯನ್ನು ಹೊಂದಿದೆ. ಫೋನ್‌ನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಲಭ್ಯವಿದೆ. ಇದು 50MP ಮುಖ್ಯ ಮತ್ತು 2MP ದ್ವಿತೀಯ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ ಈ Samsung ಫೋನ್ 8MP ಕ್ಯಾಮೆರಾವನ್ನು ಹೊಂದಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.









