)
ವಿದ್ಯುತ್ ಬಳಕೆ ಮತ್ತು ಇಂಧನ ಸಂರಕ್ಷಣೆಯನ್ನು ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರವು ಹೊಸ ಯೋಜನೆಯೊಂದರಲ್ಲಿ ಕೆಲಸ ಮಾಡುತ್ತಿದೆ. ಈ ಯೋಜನೆಯಡಿಯಲ್ಲಿ, ಗ್ರಾಹಕರು ತಮ್ಮ ಹಳೆಯ ಮತ್ತು ವಿದ್ಯುತ್ ಬಳಸುವ ಹವಾನಿಯಂತ್ರಣ ಯಂತ್ರಗಳನ್ನು (AC) ಹೊಸ ಫೈವ್ ಸ್ಟಾರ್ ರೇಟೆಡ್ ಏರ್ ಕಂಡೀಷನ್ ನೊಂದಿಗೆ ಬದಲಾಯಿಸಲು ಆರ್ಥಿಕ ಪ್ರೋತ್ಸಾಹವನ್ನು ನೀಡಲಾಗುವುದು. ವರದಿಯ ಪ್ರಕಾರ, ಈ ಯೋಜನೆಯನ್ನು ವಿದ್ಯುತ್ ಸಚಿವಾಲಯ ಮತ್ತು ಬ್ಯೂರೋ ಆಫ್ ಎನರ್ಜಿ ಎಫಿಶಿಯೇನ್ಸಿ (BEE) ಸಿದ್ಧಪಡಿಸುತ್ತಿದೆ. ಈ ಮೂಲಕ ನಗರ ಪ್ರದೇಶಗಳಲ್ಲಿ ವಿದ್ಯುತ್ ಬೇಡಿಕೆಯನ್ನು ಕಡಿಮೆ ಮಾಡಲು ಮತ್ತು ಜನರ ವಿದ್ಯುತ್ ಬಿಲ್ಗಳನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ.
ಎಸಿಗೆ ಹೆಚ್ಚಾದ ಬೇಡಿಕೆ : ವಿದ್ಯುತ್ ಬಳಕೆಯೂ ಜಾಸ್ತಿ :
ದೇಶದಲ್ಲಿ ತಾಪಮಾನ ಮತ್ತು ಆದಾಯ ಹೆಚ್ಚುತ್ತಿರುವಂತೆ, ಎಸಿ ಮಾರಾಟವೂ ವೇಗವಾಗಿ ಹೆಚ್ಚುತ್ತಿದೆ. 2021-22ನೇ ಸಾಲಿನಲ್ಲಿ 84 ಲಕ್ಷ ಎಸಿಗಳು ಮಾರಾಟವಾಗಿದ್ದರೆ, 2023-24ನೇ ಸಾಲಿನಲ್ಲಿ ಈ ಸಂಖ್ಯೆ ಸುಮಾರು 1.1 ಕೋಟಿಗೆ ತಲುಪಿದೆ. ಆದರೆ ಈ ಹೆಚ್ಚಳವು ಭಾರೀ ವಿದ್ಯುತ್ ಬಳಕೆಯೊಂದಿಗೆ ಬರುತ್ತಿದೆ. ಸರ್ಕಾರಿ ಅಂಕಿಅಂಶಗಳ ಪ್ರಕಾರ, ಕಳೆದ ವರ್ಷ ಕಟ್ಟಡಗಳು ಸುಮಾರು 500 ಟೆರಾವ್ಯಾಟ್-ಗಂಟೆಗಳ (TWh) ವಿದ್ಯುತ್ ಅನ್ನು ಬಳಸಿಕೊಂಡಿವೆ.
ಆದರೂ, ಹೆಚ್ಚಿನ ಭಾರತೀಯ ಮನೆಗಳು 3 ಸ್ಟಾರ್ ಗಿಂತ ಕಡಿಮೆ ರೇಟಿಂಗ್ ಹೊಂದಿರುವ ಹಳೆಯ ಎಸಿಗಳನ್ನು ಹೊಂದಿದ್ದು, ಅವುಗಳಿಗೆ ಹೆಚ್ಚಿನ ವಿದ್ಯುತ್ ಬೇಕಾಗುತ್ತದೆ. ಬಿಇಇ ಪ್ರಕಾರ, ಗ್ರಾಹಕರು ತಮ್ಮ ಹಳೆಯ ಎಸಿಯನ್ನು ಫೈವ್ ಸ್ಟಾರ್ ರೇಟಿಂಗ್ ನ ಹೊಸ ಎಸಿಯೊಂದಿಗೆ ಬದಲಾಯಿಸಿದರೆ, ಪ್ರತಿ ವರ್ಷ ವಿದ್ಯುತ್ ಬಿಲ್ನಲ್ಲಿ 6,300 ರೂ.ವರೆಗೆ ಉಳಿಸಬಹುದು.
ಈ ಯೋಜನೆ ಹೇಗೆ ಕೆಲಸ ಮಾಡುತ್ತದೆ? :
ಯೋಜನೆಯ ಎಲ್ಲಾ ವಿವರಗಳನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲವಾದರೂ, ಸರ್ಕಾರವು ಕೆಲವು ಪ್ರಮುಖ ಆಯ್ಕೆಗಳನ್ನು ಪರಿಗಣಿಸುತ್ತಿದೆ:
1. ಮರುಬಳಕೆದಾರರ ಮೂಲಕ ಮರುಖರೀದಿ: ಗ್ರಾಹಕರು ತಮ್ಮ ಹಳೆಯ AC ಗಳನ್ನು ಪ್ರಮಾಣೀಕೃತ ಮರುಬಳಕೆದಾರರಿಗೆ ನೀಡಲು ಸಾಧ್ಯವಾಗುತ್ತದೆ ಮತ್ತು ಪ್ರತಿಯಾಗಿ ಹೊಸ AC ಖರೀದಿಯ ಮೇಲೆ ರಿಯಾಯಿತಿ ಪಡೆಯಲು ಬಳಸಬಹುದಾದ ಪ್ರಮಾಣಪತ್ರವನ್ನು ಪಡೆಯಬಹುದು.
2. ತಯಾರಕರಿಂದ ರಿಯಾಯಿತಿಗಳು: ಎಸಿ ಉತ್ಪಾದನಾ ಕಂಪನಿಗಳು ಹಳೆಯ ಎಸಿಗಳಿಗೆ ಬದಲಾಗಿ ಫಾವೆ ಸ್ಟಾರ್ ರೇಟೆಡ್ ಮಾದರಿಗಳ ಮೇಲೆ ತ್ವರಿತ ರಿಯಾಯಿತಿಗಳನ್ನು ನೀಡಬಹುದು.
3. ವಿದ್ಯುತ್ ಬಿಲ್ನಲ್ಲಿ ರಿಯಾಯಿತಿ: ವಿದ್ಯುತ್ ವಿತರಣಾ ಕಂಪನಿಗಳ ಸಹಯೋಗದೊಂದಿಗೆ ವಿದ್ಯುತ್ ಬಿಲ್ನಲ್ಲಿ ರಿಯಾಯಿತಿ ನೀಡುವ ಬಗ್ಗೆಯೂ ಸರ್ಕಾರ ಪರಿಗಣಿಸುತ್ತಿದೆ.
ಇದು ಭಾರತದ Long term India Cooling Action Plan (ICAP)ನ ಒಂದು ಭಾಗವಾಗಿದೆ. ಇದು 2038 ರ ವೇಳೆಗೆ ಕೂಲಿಂಗ್ ಎನರ್ಜಿ ಡಿಮ್ಯಾಂಡ್ ಅನ್ನು 40% ರಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಮುಂಬರುವ ವರ್ಷಗಳಲ್ಲಿ ಒಟ್ಟು ವಿದ್ಯುತ್ ಬಳಕೆಯ ಸುಮಾರು 30% ರಷ್ಟು ಸ್ಪೇಸ್ ಕೂಲಿಂಗ್ ಮಾತ್ರ ಇರುತ್ತದೆ ಎಂದು ಅಂದಾಜಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ವಿದ್ಯುತ್ ಉಳಿತಾಯ ಮಾಡಲು ಮಾತ್ರವಲ್ಲದೆ ಪರಿಸರವನ್ನು ರಕ್ಷಿಸಲು ಇಂಧನ ದಕ್ಷ ಸಾಧನಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ.
ಉದ್ಯಮದ ಪ್ರತಿಕ್ರಿಯೆ ಮತ್ತು ಮುಂದಿನ ಹಂತಗಳು :
ಈ ಯೋಜನೆಯ ಸುಗಮ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ವೋಲ್ಟಾಸ್, ಬ್ಲೂ ಸ್ಟಾರ್, ಎಲ್ಜಿ, ಸ್ಯಾಮ್ಸಂಗ್ ಮತ್ತು Lloyd ನಂತಹ ಪ್ರಮುಖ ಕಂಪನಿಗಳೊಂದಿಗೆ ಚರ್ಚೆಗಳನ್ನು ಪ್ರಾರಂಭಿಸಿದೆ. ಯೋಜನೆಯ ರೂಪುರೇಷೆ, ಬೆಲೆ ನಿಗದಿ ತಂತ್ರ, ಹಳೆಯ ಎಸಿಗಳ ಸಂಗ್ರಹ ವ್ಯವಸ್ಥೆ ಮತ್ತು ಮರುಬಳಕೆ ನಿಯಮಗಳನ್ನು ಈ ಚರ್ಚೆಗಳ ಮೂಲಕ ನಿರ್ಧರಿಸಲಾಗುತ್ತದೆ.
ದೆಹಲಿಯಲ್ಲಿಯೂ ಇದೇ ರೀತಿಯ ಯೋಜನೆ ಜಾರಿಯಲ್ಲಿದೆ :
ಬಿಎಸ್ಇಎಸ್ ಈಗಾಗಲೇ ದೆಹಲಿಯಲ್ಲಿ ಒಂದು ಯೋಜನೆಯನ್ನು ನಡೆಸುತ್ತಿದೆ. ಇದರ ಅಡಿಯಲ್ಲಿ ಗ್ರಾಹಕರು ಹಳೆಯ ಎಸಿಗೆ ಬದಲಾಗಿ ಹೊಸ ಇನ್ವರ್ಟರ್ / ಫೈವ್-ಸ್ಟಾರ್ ಎಸಿ ಮೇಲೆ 60% ವರೆಗೆ ರಿಯಾಯಿತಿ ಪಡೆಯುತ್ತಾರೆ.ಈ ಯೋಜನೆಯು 3 ಸ್ಟಾರ್ ಅಥವಾ ಅದಕ್ಕಿಂತ ಕಡಿಮೆ ರೇಟಿಂಗ್ ಹೊಂದಿರುವ ಮತ್ತು ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿರುವ AC ಗಳಿಗೆ ಮಾತ್ರ ಅನ್ವಯವಾಗುತ್ತದೆ. ಈ ಯೋಜನೆ ಅಡಿಯಲ್ಲಿ ಒಬ್ಬ ಗ್ರಾಹಕರ 3 ACಗಳನ್ನು ಬದಲಾಯಿಸಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.