)
Sam Altman: AI ಜಗತ್ತಿನ ಅತ್ಯಂತ ಪ್ರಸಿದ್ಧ ಮುಖ ಸ್ಯಾಮ್ ಆಲ್ಟ್ಮನ್ ಇತ್ತೀಚೆಗೆ ನೀವು ಚಾಟ್ ಮಾಡುವುದನ್ನು ಮುಗಿಸಿದಾಗ, ನಿಮ್ಮ AI ಮಾದರಿಗೆ "ಧನ್ಯವಾದಗಳು" ಎಂದು ಹೇಳಿ ಲಾಗ್ ಆಫ್ ಮಾಡಬೇಡಿ ಎಂದಿದ್ದಾರೆ. ಅಷ್ಟೇ ಅಲ್ಲ ಅವರು ಇದರ ಹಿಂದಿನ ಅಪಾಯದ ಕುರಿತು ಮಾತನಾಡಿದ್ದಾರೆ.
AIನ ಬಳಕೆ ಪರಿಣಾಮದ ಬಗ್ಗೆ ಎಲ್ಲ ಕಡೆ ಚರ್ಚೆಯುಗುತ್ತಿದೆ. ಜಾಗತಿಕವಾಗಿ ಸಾಕಷ್ಟು ಸುದ್ದಿಯಲ್ಲಿರುವ ಈ ಚಾಟ್ಬಾಟ್ ಭವಿಷ್ಯದಲ್ಲಿ ಜನರ ಉದ್ಯೋಗಗಳನ್ನು ಕಸಿದುಕೊಳ್ಳುತ್ತದೆ ಎಂಬ ಭಯ ಎಲ್ಲರಲ್ಲಿ ಮೂಡಿದೆ. ಆದರೆ ಇದು ಕೇವಲ ನಮ್ಮ ಆರ್ಥಿಕ ಮತ್ತು ಮಾನಸಿಕ ಅಂಶಗಳ ಮೇಲೆ ಕೆಟ್ಟ ಪರಿಣಾಮ ಬೀರುವುದಷ್ಟೇ ಅಲ್ಲ, ಇದು ನಮ್ಮ ಸುತ್ತಲಿನ ನಿಸರ್ಗಕ್ಕೂ ಕೂಡ ಗಂಡಾಂತರವನ್ನು ನೀಡುತ್ತದೆ. ಇದನ್ನು ಸ್ವತಃ AI ನ CEO ಅವರೇ ಒಪ್ಪಿಕೊಂಡಿದ್ದಾರೆ
ಕೃತಕ ಬುದ್ಧಿಮತ್ತೆ (AI) ಜಗತ್ತಿನ ಅತ್ಯಂತ ಪ್ರಸಿದ್ಧ ಮುಖ ಸ್ಯಾಮ್ ಆಲ್ಟ್ಮನ್ ಇತ್ತೀಚೆಗೆ ನೀವು ಚಾಟ್ ಮಾಡುವುದನ್ನು ಮುಗಿಸಿದಾಗ, ನಿಮ್ಮ AI ಮಾದರಿಗೆ "ಧನ್ಯವಾದಗಳು" ಎಂದು ಹೇಳಿ ಲಾಗ್ ಆಫ್ ಮಾಡಬೇಡಿ ಎಂದು ಹೇಳಿದರು. ಈ ಸಭ್ಯ ವಿನಿಮಯವು ಶಕ್ತಿಯ ಬಳಕೆಯನ್ನು ಹೆಚ್ಚಿಸುತ್ತದೆ, ಇದು ಪರಿಸರದ ಮೇಲೆ ಒತ್ತಡವನ್ನು ಬೀರುತ್ತದೆ ಎಂದು ಅವರು ವಾದಿಸುತ್ತಾರೆ.
ಏಕೆಂದರೆ, ಪ್ರತಿ AI ಬಳಕೆಗೂ ದೊಡ್ಡ ಮಟ್ಟದ ವಿದ್ಯುತ್ ಅಗತ್ಯವಿದೆ. ತಜ್ಞರ ಪ್ರಕಾರ, ಒಂದು AI ಹುಡುಕಾಟ Google ಹುಡುಕಾಟಕ್ಕಿಂತ ಕನಿಷ್ಠ 10 ಪಟ್ಟು ಹೆಚ್ಚು ವಿದ್ಯುತ್ ಬಳಸುತ್ತದೆ. ಪ್ರತಿ ದಿನ ChatGPT ಸುಮಾರು 1 ಬಿಲಿಯನ್ಗಿಂತಲೂ ಹೆಚ್ಚು ವಿನಂತಿಗಳನ್ನು ಸ್ವೀಕರಿಸುತ್ತದೆ. ವಾರಕ್ಕೆ 300 ಮಿಲಿಯನ್ ಬಳಕೆದಾರರು ಇದನ್ನು ಬಳಸುತ್ತಿದ್ದಾರೆ.
ಈ ದೊಡ್ಡ ಪ್ರಮಾಣದ ಬಳಕೆಯಿಂದಾಗಿ ಡೇಟಾ ಸೆಂಟರ್ಗಳು ಭಾರೀ ವಿದ್ಯುತ್ ಸೇವಿಸುತ್ತವೆ. ಇದರ ಪರಿಣಾಮವಾಗಿ ವರ್ಷಕ್ಕೆ 300 ಟನ್ ಇಂಗಾಲದ ಡೈಆಕ್ಸೈಡ್ ವಾತಾವರಣಕ್ಕೆ ಸೇರುತ್ತದೆ. ಸಂಶೋಧನೆಯ ಪ್ರಕಾರ, ChatGPT-3 ಬಳಕೆ ಮಾಡುವಾಗ ಹೊರಹೊಮ್ಮುವ ಕಾರ್ಬನ್ ಪ್ರಮಾಣವು ನ್ಯೂಯಾರ್ಕ್ನಿಂದ ಸ್ಯಾನ್ ಫ್ರಾನ್ಸಿಸ್ಕೋವರೆಗೆ 550 ಬಾರಿ ವಿಮಾನ ಹಾರಾಟ ಮಾಡಿದಷ್ಟೇ ಸಮಾನವಾಗಿದೆ.
ಇಷ್ಟೇ ಅಲ್ಲ, AI ಸರ್ವರ್ಗಳನ್ನು ತಂಪಾಗಿಡಲು ಕೇವಲ ವಿದ್ಯುತ್ ಮಾತ್ರವಲ್ಲ, ಅಪಾರ ಪ್ರಮಾಣದ ಶುದ್ಧ ನೀರು ಬೇಕಾಗುತ್ತದೆ. ಅಮೆರಿಕಾದಲ್ಲಿ ಒಂದು ಗೂಗಲ್ ಡೇಟಾ ಸೆಂಟರ್ ವರ್ಷಕ್ಕೆ 16 ಬಿಲಿಯನ್ ಲೀಟರ್ ಶುದ್ಧ ನೀರು ಬಳಸುತ್ತದೆ. ಮೈಕ್ರೋಸಾಫ್ಟ್ ಬಳಸುವ ನೀರಿನ ಪ್ರಮಾಣವು ಪರಮಾಣು ರಿಯಾಕ್ಟರ್ ತಂಪಾಗಿಸಲು ಸಾಕಾಗುವಷ್ಟು ಎಂದು ಹೇಳಲಾಗಿದೆ.
ಈ ಅಪಾಯಕಾರಿ ಬದಲಾವಣೆಯಿಂದ 2027ರ ವೇಳೆಗೆ ಜಗತ್ತಿನ 40% ಡೇಟಾ ಸೆಂಟರ್ಗಳು ವಿದ್ಯುತ್ ಕೊರತೆಯನ್ನು ಎದುರಿಸಬಹುದು ಎಂಬ ಭಯ ತಜ್ಞರಲ್ಲಿ ಮೂಡಿದೆ. ಅಂದರೆ AI ಕ್ರಾಂತಿ ಮುಂದುವರಿದಂತೆ ಪರಿಸರದ ಮೇಲಿನ ಒತ್ತಡವೂ ಹೆಚ್ಚುತ್ತಿದೆ.
ಆದ್ದರಿಂದಲೇ ಸ್ಯಾಮ್ ಆಲ್ಟ್ಮನ್ “ಪ್ರತಿ ಬಾರಿ ChatGPTಗೆ ಧನ್ಯವಾದ ಹೇಳುವ ಅಗತ್ಯವಿಲ್ಲ” ಎಂದು ಹೇಳಿದ್ದು, ನಮ್ಮ ಪರಿಸರವನ್ನು ಕಾಪಾಡುವ ಉದ್ದೇಶದಿಂದಾಗಿದೆ. AI ತಂತ್ರಜ್ಞಾನದ ಪ್ರಯೋಜನಗಳ ಜೊತೆ ಅದರ ಪರಿಸರದ ಹೊರೆಗಳನ್ನೂ ಅರ್ಥಮಾಡಿಕೊಳ್ಳುವ ಸಮಯ ಬಂದಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ.