)
ಇತ್ತೀಚಿನ ದಿನಗಳಲ್ಲಿ, ಫ್ರಿಡ್ಜ್ ಇಲ್ಲದ ಮನೆಯೇ ಇರುವುದಿಲ್ಲ. ಫ್ರಿಡ್ಜ್ ಈಗಿನ ಕಾಲಕ್ಕೆ ಐಶಾರಾಮವಲ್ಲ, ಬದಲಿಗೆ ಅನಿವಾರ್ಯತೆಯಾಗಿ ಬಿಟ್ಟಿದೆ. ಆದರೆ, ಕೆಲವೊಮ್ಮೆ ಫ್ರಿಡ್ಜ್ ಕೆಲವೊಂದು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಅದರಲ್ಲಿ ಪ್ರಮುಖ ಸಮಸ್ಯೆ ಎಂದರೆ ಸರಿಯಾಗಿ ಕೂಲಿಂಗ್ ಆಗದೇ ಇರುವಂಥದ್ದು. ಫ್ರಿಜ್ ಸರಿಯಾಗಿ ಕೂಲ್ ಆಗುವುದಿಲ್ಲ ಎಂದಾದರೆ ಫ್ರಿಡ್ಜ್ನಲ್ಲಿ ಇರಿಸಲಾಗಿರುವ ವಸ್ತುಗಳು ಬೇಗನೆ ಹಾಳಾಗುತ್ತವೆ. ಒಂದು ವೇಳೆ ಮನೆಯಲ್ಲಿರುವ ಫ್ರಿಡ್ಜ್ ಸರಿಯಾಗಿ ಕೂಲಿಂಗ್ ಆಗುತ್ತಿಲ್ಲ ಎಂದಾದರೆ ಇದೊಂದು ಕೆಲಸ ಮಾಡಿಬಿಡಿ. ತಕ್ಷಣದಿಂದಲೇ ಫ್ರಿಜ್ ಮತ್ತೆ ಕೂಲಿಂಗ್ ಆಗಲು ಶುರುವಾಗುತ್ತದೆ.
ಟೆಂಪರೆಚರ್ ಚೆಕ್ ಮಾಡಿ :
ನಿಮ್ಮ ಫ್ರಿಡ್ಜ್ ಸರಿಯಾಗಿ ಕೂಲ್ ಆಗುತ್ತಿಲ್ಲ ಎಂದಾದರೆ ಮೊದಲು ಫ್ರಿಡ್ಜ್ನ ತಾಪಮಾನ ಸೆಟ್ಟಿಂಗ್ಗಳನ್ನು ಪರಿಶೀಲಿಸಿ ಅದನ್ನು ಸರಿಯಾಗಿ ಹೊಂದಿಸಬೇಕು. ಫ್ರಿಡ್ಜ್ ಯಾವಾಗಲೂ 4-5 ಡಿಗ್ರಿಗಳಲ್ಲಿ ಕಾರ್ಯನಿರ್ವಹಿಸಬೇಕು. ಹೀಗೆ ಮಾಡುವುದರಿಂದ, ನಿಮ್ಮ ಫ್ರಿಡ್ಜ್ ಸರಿಯಾಗಿ ತಣ್ಣಗಾಗಬಹುದು.
ಫ್ರಿಡ್ಜ್ ಡೋರ್ ಸೀಲ್ :
ಫ್ರಿಡ್ಜ್ನ ತಾಪಮಾನ ಸರಿಯಾಗಿದ್ದೂ, ಸರಿಯಾಗಿ ಕೂಲಿಂಗ್ ಆಗುತ್ತಿಲ್ಲ ಎಂದಾದರೆ ಫ್ರಿಡ್ಜ್ ಡೋರ್ ಸೀಲ್ ಅನ್ನು ಪರಿಶೀಲಿಸಬೇಕು. ಫ್ರಿಡ್ಜ್ ಬಾಗಿಲಿನ ಸೀಲ್ ಸವೆದುಹೋಗಿದ್ದರೆ ಅಥವಾ ಮುರಿದಿದ್ದರೆ, ಫ್ರಿಡ್ಜ್ ಸರಿಯಾಗಿ ತಣ್ಣಗಾಗಲು ಬಿಡುವುದಿಲ್ಲ.
ಕಂಡೆನ್ಸರ್ ಕಾಯಿಲ್ :
ರೆಫ್ರಿಜರೇಟರ್ ಸರಿಯಾಗಿ ಕೂಲ್ ಆಗುತ್ತಿಲ್ಲ ಎಂದಾದರೆ, ರೆಫ್ರಿಜರೇಟರ್ನ ಕಂಡೆನ್ಸರ್ ಕಾಯಿಲ್ ಅನ್ನು ಸ್ವಚ್ಛಗೊಳಿಸಬಹುದು. ಕಂಡೆನ್ಸರ್ ಕಾಯಿಲ್ ಮೇಲೆ ಕೊಳೆ, ಧೂಳು ಸಂಗ್ರಹವಾಗುವುದರಿಂದ ರೆಫ್ರಿಜರೇಟರ್ ಸರಿಯಾಗಿ ಕೂಲ್ ಆಗುವುದಿಲ್ಲ. ಅದನ್ನು ಮೃದುವಾದ ಬ್ರಷ್ ಅಥವಾ ವ್ಯಾಕ್ಯೂಮ್ ಬಳಸಿ ಸ್ವಚ್ಚಗೊಳಿಸಬೇಕು.
(ಸೂಚನೆ : ಈ ಸುದ್ದಿಯನ್ನು ಬರೆಯುವಾಗ ನಾವು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ಜೀ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ. )