AC Gas Leak Detection: ಶಖೆಯಿಂದ ಪಾರಾಗಲು ಫ್ಯಾನ್‌ಗಳ ಬಳಕೆ ಮೊದಲು ಹೆಚ್ಚಾಗಿತ್ತು. ಆದರೆ ಇವಾಗ ಹಾಗಿಲ್ಲ. ಬೇಸಿಗೆಯಲ್ಲಿ ಫ್ಯಾನ್‌ಗಳ ಬದಲಾಗಿ ಜನರು ಎಸಿಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಸಾಮಾನ್ಯವಾಗಿ ಆಫೀಸ್ ಮತ್ತು ಮನೆಗಳಲ್ಲಿ ಎಸಿಗಳು ಇದ್ದೇ ಇರುತ್ತವೆ.
ಎಸಿಯಿಂದ ಬರಿ ತಂಪು ಗಾಳಿ ತೆಗೆದಕೊಳ್ಳುವುದಷ್ಟೇ ಅಲ್ಲ. ಇದರ ಜೊತೆಗೆ ಆಗಾಗ ಎಸಿಯನ್ನು ಸರಿಯಾಗಿ ನಿರ್ವಹಣೆ ಸಹ ಮಾಡಬೇಕು. ಇಲ್ಲಾಂದ್ರೆ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಹೌದು, ಇದೊಂದು ವಿದ್ಯುಚ್ಛಕ್ತಿ ಆಧಾರಿತ ಸಾಧನವಾಗಿರುವುದರಿಂದ ಇದನ್ನು ಜಾಗರೂಕತೆಯಿಂದ ನಿರ್ವಹಿಸಬೇಕು. ಇಲ್ಲವಾದರೆ ಇದು ಅಪಾಯ ಉಂಟುಮಾಡುತ್ತದೆ ಎನ್ನವುದಕ್ಕೆ ದೆಹಲಿಯಲ್ಲಿ ನೆಡೆದ ಘಟನೆಯೊಂದು ಸಾಕ್ಷಿಯಾಗಿದೆ.
ಇದನ್ನೂ ಓದಿ: ಫ್ರಿಡ್ಜ್ ನಿಂದ ಬರುವ ಕೆಟ್ಟ ವಾಸನೆಯಿಂದ ಬೇಸೋತ್ತಿದ್ದೀರಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ..
ಇತ್ತೀಚಿಗೆ ದೆಹಲಿಯ ಕೃಷ್ಣಾನಗರದಲ್ಲಿರುವ ಎಸಿ ರಿಪೇರಿ ಮಾಡುವ ಅಂಗಡಿಯಲ್ಲಿ ಇದ್ದಕ್ಕಿದ್ದಂತೆ ಎಸಿ ಸ್ಫೋಟಗೊಂಡು ಮೋಹನ್ ಲಾಲ್ ಎಂಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ಇದಕ್ಕೆ ಎಸಿಯನ್ನ ಸರಿಯಾಗಿ ಮೆಂಟೇನ್ ಮಾಡದಿರುವುದೇ ಕಾರಣವೆಂದು ತಿಳಿದುಬಂದಿದೆ. ಹೀಗಾಗಿ ಎಸಿಯನ್ನು ಸರಿಯಾಗಿ ಮೆಂಟೇನ್ ಮಾಡುವುದು ಬಹಳ ಮುಖ್ಯ. ನೀವೇನಾದರೂ ಹೊಸ ಎಸಿಯನ್ನು ತೆಗೆದುಕೊಳ್ಳುವ ಅಥವಾ ನಿಮ್ಮ ಹಳೆಯ ಎಸಿಗಳನ್ನು ಮತ್ತೆ ಬಳಸುವ ಮೊದಲು ಈ ಮುನ್ನೆಚ್ಚರಿಕೆಗಳನ್ನ ಪಾಲಿಸಬೇಕು.
ಎಸಿ ಸ್ಫೋಟಗೊಳ್ಳಲು ಕಾರಣ
ಬಹಳ ದಿನಗಳವರೆಗೆ ಎಸಿಯನ್ನು ಬಳಸದೇ ಒಮ್ಮೆಗೆ ಆನ್ ಮಾಡಿದಾಗ ಕಂಪ್ರೆಸರ್ ಬಿಸಿಯಾಗಿ ಬ್ಲಾಸ್ಟ್ ಆಗುವ ಸಾಧ್ಯತೆ ಇರುತ್ತದೆ. ಇದರೊಂದಿಗೆ ಕಡಿಮೆ ಸಾಮರ್ಥ್ಯವಿರುವ ವೈರ್‌ಗಳನ್ನು ಬಳಸುವುದು ಮತ್ತು ಇತರ ವಿದ್ಯುತ್ ಸಮಸ್ಯೆಗಳ ಕಾರಣವಿರಬಹುದು. ಅಷ್ಟೇ ಅಲ್ಲದೆ ಎಸಿಯಲ್ಲಿ ಬಳಸುವ ತಂತಿಗಳಲ್ಲಿ ವೋಲ್ಟೇಜ್ ಹೆಚ್ಚಾಗಿರುತ್ತದೆ. ಇದರಿಂದ ACಯ ಆಂತರಿಕ ಘಟಕಗಳಿಗೆ ಹಾನಿಯಾಗುತ್ತದೆ. ಎಸಿಯಲ್ಲಿ ಕೂಲಿಂಗ್ ಗ್ಯಾಸ್ ಲೀಕ್ ಆಗಿ ಏನಾದರೂ ಶೇಖರಣೆಗೊಂಡರೆ ಅದೂ ಸಹ ಬೆಂಕಿ ಸ್ಫೋಟಕ್ಕೆ ಕಾರಣವಾಗುತ್ತದೆ. ಒಂದು ವೇಳೆ ಎಸಿಯಲ್ಲಿ ಏನಾದರೂ ಜಾಸ್ತಿ ಧೂಳು ಶೇಖರಣೆಯಾದರೆ ಕಂಪ್ರೆಸರ್ ಮೇಲೆ ಹೆಚ್ಚು ಒತ್ತಡ ಬಿದ್ದು ಅಪಾಯನ್ನು ಉಂಟುಮಾಡುತ್ತದೆ.
ಇದನ್ನೂ ಓದಿ: ಹೊಟ್ಟೆಯಲ್ಲಿ ಸಿಕ್ತು ವಜ್ರದ ಕಿವಿಯೋಲೆ: ಇದರ ಹಿಂದಿನ ಕಥೆಯೇ ರೋಚಕ... ವಿಡಿಯೋ ವೈರಲ್
ಎಸಿ ಅವಘಡ ತಡೆಯಲು ಈ ರೀತಿ ಮಾಡಿ
*ನೀವೇನಾದರೂ ಬಹಳ ದಿನಗಳ ನಂತರ ಎಸಿಯನ್ನು ಬಳಸಲು ಮುಂದಾಗಿದ್ದರೆ ಮೊದಲು ಅದನ್ನು ಪ್ರೊಫೆಷನಲ್‌ನಿಂದ ಸರ್ವಿಸ್ ಮಾಡಿಸಿ.
* ಎಸಿಯನ್ನು ಫಿಕ್ಸ್ ಮಾಡಿದ ಸುತ್ತಮುತ್ತ ಜಾಗದಲ್ಲಿ ಚೆನ್ನಾಗಿ ಗಾಳಿ ಹೋಗುವಂತೆ ನೋಡಿಕೊಳ್ಳಿ
* ಎಸಿ ಬಳಸುವ ಮೊದಲು ಗ್ಯಾಸ್ ಲೀಕೇಜ್ ಏನಾದರು ಇದೆಯಾ ನೋಡಿಕೊಳ್ಳಬೇಕು
* ವೋಲ್ಟೇಜ್ ಸ್ಟೆಬಿಲೈಸರ್ ಅನ್ನು ತಪ್ಪದೇ ಬಳಸಬೇಕು
* ಧೂಳು ಶೇಖರಣೆಯಾಗದಂತೆ ಏರ್ ಫಿಲ್ಟರ್‌ಗಳನ್ನು ಆಗಾಗ ಸ್ವಚ್ಛಗೊಳಿಸಬೇಕು
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5 ನಲ್ಲೂ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









