ನವದೆಹಲಿ: 2-3 ದಿನ ಆರಾಮವಾಗಿ ಕಾರ್ಯನಿರ್ವಹಿಸುವ ಉತ್ತಮ ಬ್ಯಾಟರಿ ಹೊಂದಿರುವ ಹೊಸ ಸ್ಮಾರ್ಟ್‌ಫೋನ್ ಖರೀದಿಸಬಯಸಿದರೆ, ನೀವು ಕನಿಷ್ಟ 6000 mAh ಬ್ಯಾಟರಿಯ ಸ್ಮಾರ್ಟ್‌ಫೋನ್ ಖರೀದಿಸಬೇಕು. ಇಷ್ಟು ಸಾಮರ್ಥ್ಯದ ಬ್ಯಾಟರಿಯೊಂದಿಗೆ ನಿಮ್ಮ ಸ್ಮಾರ್ಟ್‌ಫೋನ್ 2-3 ದಿನ ಪವರ್ ಬ್ಯಾಕಪ್ ಅನ್ನು ಒದಗಿಸುತ್ತದೆ. ಇಂದು ನಾವು 6000 mAh ಬ್ಯಾಟರಿ ಸಾಮರ್ಥ್ಯ ಹೊಂದಿರುವ ಕೆಲವು ಶಕ್ತಿಶಾಲಿ ಸ್ಮಾರ್ಟ್‌ಫೋನ್‌ಗಳನ್ನು ನಿಮಗೆ ಪರಿಚಯಿಸುತ್ತಿದ್ದೇವೆ.
Samsung Galaxy M32: Samsung Galaxy M32 6000mah ಬ್ಯಾಟರಿಯನ್ನು ಹೊಂದಿದೆ. ಈ ಫೋನ್ ಖರೀದಿಸಲು ನೀವು ಮನಸ್ಸು ಮಾಡಿದ್ದರೆ, ಇದು ಅತ್ಯುತ್ತಮ ಆಯ್ಕೆಯಾಗಿದೆ. ಇದರ 4GB RAM ಮತ್ತು 64GB ಸ್ಟೋರೇಜ್ ರೂಪಾಂತರದ ಬೆಲೆ 16,990 ರೂ. ಇದೆ. ನೀವು ಫೋನ್‌ನಲ್ಲಿ 1TB SD ಕಾರ್ಡ್ ಹಾಕಬಹುದು. ಇದರ ಹಿಂಭಾಗದಲ್ಲಿ 4 ಕ್ಯಾಮೆರಾಗಳಿದ್ದು, ಪ್ರಾಥಮಿಕ ಕ್ಯಾಮೆರಾ 64MP ಆಗಿದೆ.
ಇದನ್ನೂ ಓದಿ: ವೆಜ್ ಆರ್ಡರ್ ಮಾಡಿದ್ದ ಗ್ರಾಹಕರಿಗೆ ನಾನ್-ವೆಜ್ ಫುಡ್ ವಿತರಣೆ: ಝೊಮಾಟೊ, ಮೆಕ್‌ಡೊನಾಲ್ಡ್ಸ್‌ಗೆ ಭಾರೀ ದಂಡ
Realme Narzo 30A: Realme Narzo 30Aನ 6.51 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದು 2 ಹಿಂಬದಿಯ ಕ್ಯಾಮೆರಾಗಳನ್ನು ಹೊಂದಿದ್ದು, ಪ್ರಾಥಮಿಕ 13 MP ಮತ್ತು ಸೆಕೆಂಡರಿ 2MP ಕ್ಯಾಮೆರಾ ಹೊಂದಿದೆ. ಇದಲ್ಲದೆ ಮುಂಭಾಗದ ಕ್ಯಾಮರಾ 8MP ಆಗಿದೆ. ಇದು 6000 mAh ಬ್ಯಾಟರಿಯನ್ನು ಸಹ ಹೊಂದಿದೆ. ಕ್ಯಾಮರಾ ಗುಣಮಟ್ಟದಲ್ಲಿ ನೀವು ರಾಜಿ ಮಾಡಿಕೊಳ್ಳಬಹುದಾದರೆ, ಈ ಫೋನ್ ತೆಗೆದುಕೊಳ್ಳಬಹುದು. ನೀವು ಇದನ್ನು 4GB RAM ಮತ್ತು 64GB ಸ್ಟೋರೇಜ್ ರೂಪಾಂತರದಲ್ಲಿ 8,999 ರೂ.ಗೆ ಪಡೆಯಬಹುದು.
Infinix HOT 10 Play: Infinixನ ಈ ಫೋನ್‌ನಲ್ಲಿ ನೀವು 6000mah ಬ್ಯಾಟರಿಯನ್ನು ಪಡೆಯುತ್ತೀರಿ. ಇದು 6.82 ಇಂಚಿನ HD+ ಡಿಸ್ಪ್ಲೇ ಹೊಂದಿದ್ದು, ಫೋನ್ 4GB RAM ಮತ್ತು 64GB ಸ್ಟೋರೇಜ್ ಹೊಂದಿದೆ. ಇದರ ಬೆಲೆ 9,499 ರೂ. ಇದೆ.
ಇದನ್ನೂ ಓದಿ: ರೈತರ ಖಾತೆಗೆ ಬೀಳಲಿದ್ಯಾ 8,000 ರೂಪಾಯಿ..?
Motorola G10 Power: Motorola G10 Power 6.51 ಇಂಚಿನ ಡಿಸ್‌ಪ್ಲೇಯೊಂದಿಗೆ ಬರುತ್ತದೆ. 6000mah ಬ್ಯಾಟರಿ ಹೊರತುಪಡಿಸಿ, ಫೋನ್ 460 ಪ್ರೊಸೆಸರ್ ಮತ್ತು ಸ್ಟಾಕ್ ಆಂಡ್ರಾಯ್ಡ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಫೋನ್ ಹಿಂಭಾಗದಲ್ಲಿ 4 ಕ್ಯಾಮೆರಾಗಳನ್ನು ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾ 48MP, ದ್ವಿತೀಯ ಕ್ಯಾಮೆರಾ 8MP ಮತ್ತು ಉಳಿದ 2 ಕ್ಯಾಮೆರಾಗಳು 2-2MP ಇವೆ. ಇದರ ಮುಂಭಾಗದ ಕ್ಯಾಮರಾ 8MP ಆಗಿದೆ. 4 GB RAM ಮತ್ತು 64 GB ಸ್ಟೋರೇಜ್ ಹೊಂದಿರುವ ಈ ಫೋನ್ 9,999 ರೂ.ಗೆ ನೀವು ಖರೀದಿಸಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.