Cheapest 7 Seater Car : ಭಾರತದಲ್ಲಿ 7 ಆಸನಗಳ ಕಾರಿನ ವಿಷಯಕ್ಕೆ ಬಂದಾಗಲೆಲ್ಲಾ, ಇನ್ನೋವಾ ಮತ್ತು ಎರ್ಟಿಗಾವನ್ನು ಖಂಡಿತವಾಗಿಯೂ ಉಲ್ಲೇಖಿಸಲಾಗುತ್ತದೆ. ಆದರೆ ಈ ಎರಡೂ 7 ಸೀಟರ್ ಕಾರುಗಳಿಗಿಂತ ಅಗ್ಗದ ಬೆಲೆಯಲ್ಲಿ ಸಿಗುವ ಕಾರೊಂದಿದೆ. ಮೈಲೇಜ್ ಮತ್ತು ಸುರಕ್ಷತೆಯ ವಿಷಯದಲ್ಲಿ ಉತ್ತಮ ದಾಖಲೆಯನ್ನು ಹೊಂದಿರುವ ಈ ಕಾರಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯೂ ಹೆಚ್ಚಿದೆ. ಈ 7 ಆಸನಗಳ ಕಾರು ಇನ್ನೋವಾ ಮತ್ತು ಎರ್ಟಿಗಾದಂತೆಯೇ MPV (ಮಲ್ಟಿ ಪರ್ಪಸ್ ವೆಹಿಕಲ್) ಆಗಿದೆ.
ಇದು ಯಾವ ಕಾರು? :
ನಾವಿಲ್ಲಿ ಹೇಳುತ್ತಿರುವ ಕಾರು ರೆನಾಲ್ಟ್ ಟ್ರೈಬರ್. ಇದು ಒಂದು MPV ಆಗಿದೆ. ಅಗ್ಗದ ಕಾರಾಗಿದ್ದರೂ, ಲುಕ್ ಮತ್ತು ಸುಧಾರಿತ ವೈಶಿಷ್ಟ್ಯಗಳನ್ನು ನೋಡಬಹುದು.
ಇದನ್ನೂ ಓದಿ : ಭಾರತದಲ್ಲಿ ಬಿಡುಗಡೆಯಾಯಿತು Motorola Edge 60 Stylus ! ಅಗ್ಗದ ಬೆಲೆಗೆ ಸಿಗುತ್ತಿದೆ ಸೂಪರ್ ಕ್ಯಾಮೆರಾ, ವೈಶಿಷ್ಟ್ಯಗಳಿರುವ ಫೋನ್
ರೆನಾಲ್ಟ್ ಟ್ರೈಬರ್ ಬೆಲೆ ಮತ್ತು ರೂಪಾಂತರಗಳು :
ರೆನಾಲ್ಟ್ ಟ್ರೈಬರ್ ನಾಲ್ಕು ರೂಪಾಂತರಗಳಲ್ಲಿ ಬರುತ್ತದೆ. RXE, RXL, RXT ಮತ್ತು RXZ. ಇದನ್ನು ಬಿಳಿ, ಸಿಲ್ವರ್, ನೀಲಿ, ಮಸ್ಟರ್ಡ್ ಮತ್ತು ಕಂದು ಹೀಗೆ ಐದು ಬಣ್ಣಗಳಲ್ಲಿ ಖರೀದಿಸಬಹುದು. ಇದರ ಬೆಲೆ 6.09 ಲಕ್ಷ ರೂ.ಗಳಿಂದ ಪ್ರಾರಂಭವಾಗಿ 8.74 ಲಕ್ಷ ರೂ.ಗಳವರೆಗೆ (ಎಕ್ಸ್ ಶೋ ರೂಂ) ಇರುತ್ತದೆ.
ವಿನ್ಯಾಸ ಮತ್ತು ವೈಶಿಷ್ಟ್ಯಗಳು :
ಇದು ಸುಂದರವಾದ ಗ್ರಿಲ್ ಮತ್ತು ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳೊಂದಿಗೆ ಬರುತ್ತದೆ. ಆದರೆ ಸೈಡ್ಸ್ ಬ್ಲಾಕ್ ಕ್ಲಾಡಿಂಗ್ ಮತ್ತು ಫ್ಲೇರ್ಡ್ ರಿಯರ್ ವ್ಹಿಲ್ ಆರ್ಚ್ ಅನ್ನು ಹೊಂದಿವೆ. ಟ್ರೈಬರ್ 625-ಲೀಟರ್ ಬೂಟ್ ಸ್ಪೇಸ್ ಪಡೆಯುತ್ತದೆ.ಇದಕ್ಕಾಗಿ ನೀವು ಕೊನೆಯ ಸಾಲಿನ ಸೀಟುಗಳನ್ನು ಮುಚ್ಚಬೇಕಾಗುತ್ತದೆ. ಇದರ ಟಾಪ್ ಮಾಡೆಲ್ RXZ, ಎರಡನೇ ಸಾಲಿನ ವೆಂಟ್‌ಗಳೊಂದಿಗೆ AC ಮತ್ತು ಕೂಲ್ಡ್ ಗ್ಲೋವ್‌ಬಾಕ್ಸ್, ಹೈಟ್ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್, ಮಲ್ಟಿಪಲ್ ಸ್ಟೋರೇಜ್ ಸ್ಪೇಸ್, ಡ್ಯುಯಲ್ ಫ್ರಂಟ್ ಗ್ಲೋವ್ ಬಾಕ್ಸ್ ಮತ್ತು ಆಪಲ್ ಕಾರ್‌ಪ್ಲೇ/ಆಂಡ್ರಾಯ್ಡ್ ಆಟೋದೊಂದಿಗೆ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನಂತಹ ವೈಶಿಷ್ಟ್ಯಗಳನ್ನು ಪಡೆಯುತ್ತದೆ.
ರೆನಾಲ್ಟ್ ಟ್ರೈಬರ್ 1.0 ಲೀಟರ್ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 72 ಬಿಎಚ್‌ಪಿ ಮತ್ತು 96 ಎನ್ಎಂ ಟಾರ್ಕ್ ಜನರೇಟ್ ಮಾಡುತ್ತದೆ. ಇದು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಜೊತೆಗೆ ಐದು-ಸ್ಪೀಡ್ AMT ಯುನಿಟ್ ನೊಂದಿಗೆ ಬರುತ್ತದೆ. ಈ ರೂಪಾಂತರಗಳು ಕ್ರಮವಾಗಿ 19kmpl ಮತ್ತು 18.29kmpl ಇಂಧನ ಆರ್ಥಿಕತೆಯನ್ನು ನೀಡುತ್ತವೆ.
ಸುರಕ್ಷತೆ :
ಸುರಕ್ಷತೆಯ ಬಗ್ಗೆ ಹೇಳುವುದಾದರೆ, ಇದರಲ್ಲಿ 4 ಏರ್‌ಬ್ಯಾಗ್‌ಗಳು (2 ಮುಂಭಾಗ, 2 ಬದಿ) ಸಿಗುತ್ತವೆ. ಗ್ಲೋಬಲ್ NCAP ಈ ಕಾರಿಗೆ ವಯಸ್ಕರಿಗೆ 4-ಸ್ಟಾರ್ ಸುರಕ್ಷತಾ ರೇಟಿಂಗ್ ನೀಡಿದೆ. ಮಕ್ಕಳಿಗೆ 3 ಸ್ಟಾರ್ ಸುರಕ್ಷತಾ ರೇಟಿಂಗ್ ನೀಡಲಾಗಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









