)
ಮಳೆಗಾಲದಲ್ಲಿ ಸರಿಯಾಗಿ ನೆಟ್ವರ್ಕ್ ಸಿಗುವುದಿಲ್ಲ. ಮಳೆಗಾಲದಲ್ಲಿ ಯಾಕೆ ನೆಟ್ವರ್ಕ್ ಸಮಸ್ಯೆ ಎದುರಾಗುತ್ತದೆ ಎನ್ನುವುದನ್ನು ಎಂದಾದರೂ ಯೋಚಿಸಿದ್ದೀರಾ? ವಾಸ್ತವವಾಗಿ, ಮಳೆಯ ತೇವಾಂಶ ಮತ್ತು ನೀರ ಹನಿಗಳು ಸಿಗ್ನಲ್ ಅನ್ನು ನಿರ್ಬಂಧಿಸುತ್ತವೆ. ದೂರದ ಪ್ರದೇಶದಲ್ಲಿದ್ದರೆ, ಈ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಮೊಬೈಲ್ ಟವರ್ಗಳಿಲ್ಲದ ಸ್ಥಳದಲ್ಲಿದ್ದರೆ, ಮಳೆಗಾಲದಲ್ಲಿ ಸಿಗ್ನಲ್ ಮರೀಚಿಕೆಯಾಗಿ ಬಿಡುತ್ತದೆ. ಆದರೆ ಕೆಲವು ಸುಲಭ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ, ನೆಟ್ವರ್ಕ್ ಸಮಸ್ಯೆಯನ್ನು ಸರಿಪಡಿಸಬಹುದು.
ಏರ್ಪ್ಲೇನ್ ಮೋಡ್ ಆನ್-ಆಫ್ ಮಾಡಿ :
ನಿಮ್ಮ ಫೋನ್ನಲ್ಲಿ ನೆಟ್ವರ್ಕ್ ನಲ್ಲಿ ಸಮಸ್ಯೆಗಳಿದ್ದರೆ ಮೊಬೈಲ್ ಅನ್ನು ಸ್ವಲ್ಪ ಸಮಯದವರೆಗೆ ಏರ್ಪ್ಲೇನ್ ಮೋಡ್ನಲ್ಲಿ ಇರಿಸಿ. ನಂತರ ಅದನ್ನು ಆನ್-ಆಫ್ ಮಾಡಲು ಪ್ರಯತ್ನಿಸಿ. ಹೀಗೆ ಮಾಡುವುದರಿಂದ ನೆಟ್ವರ್ಕ್ ರಿಫ್ರೆಶ್ ಆಗುತ್ತದೆ ಮತ್ತು ಸಿಗ್ನಲ್ ಸಿಗುತ್ತವೆ.
ನೆಟ್ವರ್ಕ್ ಸೆಟ್ಟಿಂಗ್ಗಳನ್ನು ರಿಸೆಟ್ ಮಾಡಿ :
ಪದೇ ಪದೇ ಸಿಗ್ನಲ್ ಸಿಗುತ್ತಿಲ್ಲ ಎಂದು ತಲೆಕೆಡಿಸಿಕೊಳ್ಳಬೇಡಿ. ಫೋನ್ ಸೆಟ್ಟಿಂಗ್ಗಳಿಗೆ ಹೋಗಿ 'Reset Network Settings’ ಆಯ್ಕೆಯನ್ನು ಕ್ಲಿಕ್ ಮಾಡಿ. ಹೀಗೆ ಮಾಡುವುದರಿಂದ, ಮೊಬೈಲ್ನ ಎಲ್ಲಾ ಹಳೆಯ ನೆಟ್ವರ್ಕ್ ಸೆಟ್ಟಿಂಗ್ಗಳನ್ನು ಮರುಹೊಂದಿಸಲಾಗುತ್ತದೆ. ಇದರಿಂದಾಗಿ ನಿಮ್ಮ ಫೋನ್ ಮತ್ತೆ ನೆಟ್ವರ್ಕ್ಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ.
ಸಿಮ್ ತೆಗೆದು ಮತ್ತೆ ಹಾಕಿ :
ಕೆಲವೊಮ್ಮೆ ಸಿಮ್ ಕಾರ್ಡ್ನಲ್ಲಿನ ಸಣ್ಣ ದೋಷವೂ ನೆಟ್ವರ್ಕ್ ಸಮಸ್ಯೆಗಳನ್ನು ಉಂಟುಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ಫೋನ್ನಿಂದ ಸಿಮ್ ಕಾರ್ಡ್ ಅನ್ನು ತೆಗೆದು ಮೃದುವಾದ ಬಟ್ಟೆಯಿಂದ ಸ್ವಚ್ಛಗೊಳಿಸಿ. ನಂತರ ಅದನ್ನು ಸಿಮ್ ಸ್ಲಾಟ್ನಲ್ಲಿ ಸರಿಯಾಗಿ ಹಾಕಿ. ಸಿಮ್ ನೇರವಾಗಿದೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಹೀಗೆ ಮಾಡುವುದರಿಂದ, ಸಿಮ್ ಸಂಪರ್ಕಗಳು ಸರಿಯಾಗಿರುತ್ತವೆ ಮತ್ತು ಸಿಗ್ನಲ್ ಸಮಸ್ಯೆಯನ್ನು ಪರಿಹರಿಸಬಹುದು.
ವೈ-ಫೈ ಬಳಸಿ ಕರೆಗಳನ್ನು ಮಾಡಿ :
ಸ್ಮಾರ್ಟ್ಫೋನ್ ನೆಟ್ವರ್ಕ್ ನಿಧಾನವಾಗಿದ್ದರೂ ನಿಮ್ಮ ಮನೆಯಲ್ಲಿ ವೈ-ಫೈ ಇದ್ದರೆ, ಚಿಂತಿಸಬೇಡಿ. ಮೊಬೈಲ್ ಸೆಟ್ಟಿಂಗ್ಗಳಿಗೆ ಹೋಗಿ ವೈ-ಫೈ ಕಾಲಿಂಗ್ ಅನ್ನು ಆನ್ ಮಾಡಿ. ಇದರ ಸಹಾಯದಿಂದ, ನೆಟ್ವರ್ಕ್ ಇಲ್ಲದೆಯೂ ಸುಲಭವಾಗಿ ಕರೆಗಳನ್ನು ಮಾಡಬಹುದು. ಹೀಗೆ ಮಾಡುವುದರಿಂದ ಧ್ವನಿ ಸ್ಪಷ್ಟವಾಗಿರುತ್ತದೆ.
ಕಿಟಕಿ ಬಳಿ ಅಥವಾ ಟೆರೇಸ್ಗೆ ಹೋಗಿ :
ಮನೆಯೊಳಗೆ ನೆಟ್ವರ್ಕ್ ಸಮಸ್ಯೆ ಎದುರಿಸುತ್ತಿದ್ದರೆ, ನಿಮ್ಮ ಮನೆಯ ಛಾವಣಿಯ ಮೇಲೆ ಅಥವಾ ಕಿಟಕಿಯ ಬಳಿ ಹೋಗಿ ಫೋನ್ ಬಳಸಿ. ಎತ್ತರದ ಮತ್ತು ತೆರೆದ ಸ್ಥಳದಲ್ಲಿ ಸಿಗ್ನಲ್ ಬಹಳ ಬೇಗ ಸಿಗುತ್ತದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.