ಮಹಿಳೆಯರ ಮೊದಲ ಆದ್ಯತೆ ಅಡುಗೆ ಮನೆ. ಅಡುಗೆ ಮಾಡುವುದರ ಜೊತೆಗೆ ಅಡುಗೆ ಮನೆಯನ್ನು ಶುಚಿಯಾಗಿ ಇಟ್ಟುಕೊಳ್ಳುವುದಕ್ಕೂ ಪ್ರಾಶಸ್ತ್ಯ ನೀಡಲಾಗುತ್ತದೆ. ಬಹಳಷ್ಟು ಸಲ ಕುದಿಯಲು ಇಟ್ಟ ಹಾಲು ಉಕ್ಕಿ ಬಂದು ಗ್ಯಾಸ್ ಮೇಲೆಲ್ಲಾ ಚೆಲ್ಲುವುದು ಸಾಮಾನ್ಯ. ಹಾಲು ಉಕ್ಕಿ ಬಂದು ಗ್ಯಾಸ್ ಮೇಲೆಲ್ಲಾ ಚೆಲ್ಲಿ ಹೋದಾಗ ಅದನ್ನು ಶುಚಿಗೊಳಿಸುವುದರಲ್ಲಿ ಸಮಯವೆಲ್ಲಾ ವ್ಯರ್ಥವಾಗುತ್ತದೆ. ಆದರೆ, ಹಾಲು ಎಷ್ಟೇ ಕುದ್ದರೂ ಉಕ್ಕಿ ಬಾರದಂತೆ ತಡೆಯುವ ಕೆಲವು ಸಿಂಪಲ್ ಟೆಕ್ನಿಕ್ ಗಳು ಇವೆ.
ಮನೆಯಲ್ಲಿ ಸಾವಿರ ಕೆಲಸದ ಭರಾಟೆಯಲ್ಲಿ ಗ್ಯಾಸ್ ನಲ್ಲಿ ಹಾಲು ಇಟ್ಟು ಬೇರೆ ಕೆಲಸದಲ್ಲಿ ಮಗ್ನರಾಗಿ ಬಿಡುತ್ತಾರೆ. ಮಹಿಳೆಯರು ಸಾಮಾನ್ಯವಾಗಿ ಈ ತಪ್ಪು ಮಾಡುತ್ತಾರೆ. ಕೆಲಸದ ತರಾತುರಿಯಲ್ಲಿ ಹಾಲು ಉಕ್ಕಿ ಬರುವ ತನಕ ಸ್ಟವ್ ಮುಂದೆಯೇ ನಿಲ್ಲುವಷ್ಟು ಸಮಯವೂ ಇರುವುದಿಲ್ಲ. ಹಾಗಾಗಿ ಅನೇಕ ಬಾರಿ ಗ್ಯಾಸ್ ಮೇಲೆ ಹಾಲಿಟ್ಟಿರುವುದನ್ನೇ ಮರೆತು ಬಿಡುತ್ತಾರೆ.
ಹಾಲು ಕುದಿಸುವಾಗ ಕೆಲವು ಟಿಪ್ಸ್ ಮತ್ತು ಟ್ರಿಕ್ ಗಳನ್ನು ಅನುಸರಿಸಿದರೆ ಉತ್ತಮ :
೧.ಹಾಲು ಕಾಯಿಸಲು ಬಳಸುವ ಪಾತ್ರೆಯಲ್ಲಿ ಹಾಲು ಹಾಕುವುದಕ್ಕೂ ಮುನ್ನ ಸ್ವಲ್ಪ ನೀರು ಹಾಕಿ. ನಂತರ ಹಾಲನ್ನು ಹಾಕಿ ಬಿಸಿ ಮಾಡಿದರೆ ಹಾಲು ಉಕ್ಕಿ ಬರುವುದಿಲ್ಲ.
೨.ಹಾಲು ಕುದಿಸುವ ಪಾತ್ರೆಯ ಸುತ್ತಲೂ ಸ್ವಲ್ಪ ಬೆಣ್ಣೆಯನ್ನು ಹಚ್ಚಿದರೆ ಹಾಲು ಕುದಿಯುತ್ತದೆ ವಿನಃ ಉಕ್ಕಿ ಪಾತ್ರೆಯಿಂದ ಹೊರಗೆ ಚೆಲ್ಲುವುದಿಲ್ಲ.
೩.ಹಾಲು ಉಕ್ಕಿ ಬರುವಾಗ ಹಾಲಿನ ಮೇಲೆ ಸ್ವಲ್ಪ ನೀರನ್ನು ಚಿಮುಕಿಸಿದರೆ ಹಾಲು ಉಕ್ಕುವುದು ಅಲ್ಲಿಯೇ ನಿಲ್ಲುತ್ತದೆ.
೪.ಹಾಲು ಕುದಿಸುವಾಗ ಪಾತ್ರೆಯ ಒಳಗೆ ಒಂದು ಮರದ ಚಮಚವನ್ನು ಇರಿಸಿದರೆ ಕೂಡಾ ಹಾಲು ಉಕ್ಕಿ ಬರುವುದಿಲ್ಲ.
೫. ಹಾಲು ಉಕ್ಕುತ್ತಿದೆ ಎಂದ ತಕ್ಷಣವೇ ಪಾತ್ರೆಯನ್ನು ಮೇಲೆತ್ತಿ ಅಲುಗಾಡಿಸಿ ನಂತರ ಕುದಿಯಲು ಇಟ್ಟರೆ ಹಾಲು ಉಕ್ಕುವುದನ್ನು ತಕ್ಷಣವೇ ನಿಲ್ಲಿಸಬಹುದು.
೬. ಹಾಲನ್ನು ಬಿಸಿ ಮಾಡುವಾಗ, ಸ್ಟವ್ ಉರಿಯನ್ನು ಸಿಮ್ ನಲ್ಲಿಯೇ ಇರಿಸಿ. ಹೀಗೆ ಮಾಡುವುದರಿಂದ ಹಾಲು ಕುದಿಯುತ್ತದೆ, ಪಾತ್ರೆಯಿಂದ ಉಕ್ಕಿ ಹೊರ ಬರುವುದಿಲ್ಲ.