)
UIDAI Aadhaar: ಈಗ ಆಧಾರ್ ಕಾರ್ಡ್ ಅನ್ನು ಯುಐಡಿಎಐ ಅಥವಾ ಡಿಜಿಲಾಕರ್ ಅಪ್ಲಿಕೇಶನ್ನಿಂದ ಡೌನ್ಲೋಡ್ ಮಾಡಬೇಕಿಲ್ಲ. ಇಲ್ಲವೇ, ಆಧಾರ್ ಕಾರ್ಡ್ ಡೌನ್ಲೋಡ್ ಮಾಡಲು ಸೈಬರ್ ಸೆಂಟರ್, ಬೇರೆ ಯಾವುದೇ ವೆಬ್ಸೈಟ್ಗೆ ಹೋಗುವ ಅಗತ್ಯವೂ ಇಲ್ಲ. ಈ ಡಿಜಿಟಲ್ ಯುಗದಲ್ಲಿ ಹಲವು ಸರ್ಕಾರಿ ಸೇವೆಗಳು ಈಗ ವಾಟ್ಸಾಪ್ನಲ್ಲಿ ಲಭ್ಯವಿದೆ. ಅಂತಹ ಒಂದು ಸೇವೆಯ ಲಾಭವನ್ನು ಪಡೆಯುವ ಮೂಲಕ ಇದೀಗ ವಾಟ್ಸಾಪ್ನಿಂದ ಆಧಾರ್ ಕಾರ್ಡ್ ಅನ್ನು ಕೂಡ ಡೌನ್ಲೋಡ್ ಮಾಡಬಹುದು. ಇದಕ್ಕಾಗಿ ಹೆಚ್ಚು ಕಷ್ಟಪಡುವ ಪ್ರಮೇಯವೂ ಇಲ್ಲ. ಇನ್ನಾವುದೇ ಹೆಚ್ಚುವರಿ ಅಪ್ಲಿಕೇಶನ್ ಸ್ಥಾಪಿಸದೆ ಸುಲಭವಾಗಿ ವಾಟ್ಸಾಪ್ ಮೂಲಕ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಲು ಯುಐಡಿಎಐ ಅವಕಾಶ ಕಲ್ಪಿಸಿದೆ. ಇದಕ್ಕಾಗಿ ಸರ್ಕಾರದ ಅಧಿಕೃತ ಮೈಗವ್ ಹೆಲ್ಪ್ಡೆಸ್ಕ್ (MyGov Helpdesk) ಚಾಟ್ಬಾಟ್ ಸೇವೆ ಸಹಕಾರಿ ಆಗಿದೆ.
ವಾಟ್ಸಾಪ್ನಲ್ಲಿ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಲು ಬೇಕಾಗುವ ದಾಖಲೆಗಳು:
>> ವಾಟ್ಸಾಪ್ನಿಂದ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಲು ಮೊದಲು
ಆಧಾರ್ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆ ಅಗತ್ಯವಿದೆ.
>> ಸಕ್ರಿಯ ಡಿಜಿಲಾಕರ್ ಖಾತೆ (ಇಲ್ಲದಿದ್ದರೆ, ಡಿಜಿಲಾಕರ್ ವೆಬ್ಸೈಟ್ ಅಥವಾ ಅಪ್ಲಿಕೇಶನ್ನಲ್ಲಿ ಖಾತೆಯನ್ನು ರಚಿಸಿ)
>> ನಿಮ್ಮ ಫೋನ್ನಲ್ಲಿ MyGov Helpdesk ನ ಅಧಿಕೃತ ವಾಟ್ಸಾಪ್ ಸಂಖ್ಯೆಯನ್ನು +91-9013151515 ಸೇವ್ ಮಾಡಿ.
ವಾಟ್ಸಾಪ್ನಲ್ಲಿ ಆಧಾರ್ ಕಾರ್ಡ್ ಡೌನ್ಲೋಡ್ ಮಾಡುವುದು ಹೇಗೆ? (How to download aadhar card on Whatsapp):
* ಮೊದಲನೆಯದಾಗಿ ನಿಮ್ಮ ಮೊಬೈಲ್ನಲ್ಲಿ "MyGov Helpdesk" ಹೆಸರಿನೊಂದಿಗೆ +91-9013151515 ಅನ್ನು ಸೇವ್ ಮಾಡಿ.
* ನಂತರ ವಾಟ್ಸಾಪ್ಗೆ ಹೋಗಿ MyGov Helpdesk ಸಂಪರ್ಕದಲ್ಲಿ ಚಾಟ್ ಮಾಡಲು ಪ್ರಾರಂಭಿಸಿ.
- ಮೊದಲನೆಯದಾಗಿ ಚಾಟ್ನಲ್ಲಿ "ನಮಸ್ತೆ" ಅಥವಾ "ಹಾಯ್" ಎಂದು ಬರೆಯಿರಿ.
- ನಂತರ ಚಾಟ್ಬಾಟ್ ನಿಮಗೆ ಪ್ರತ್ಯುತ್ತರಿಸಲು ಪ್ರಾರಂಭಿಸುತ್ತದೆ.
- ಚಾಟ್ಬಾಟ್ನ ಪ್ರತ್ಯುತ್ತರದಲ್ಲಿ ನಿಮಗೆ ಹಲವು ಆಯ್ಕೆಗಳನ್ನು ನೀಡಲಾಗುತ್ತದೆ.
- ನೀಡಿರುವ ಆಯ್ಕೆಗಳಿಂದ "ಡಿಜಿಲಾಕರ್ ಸೇವೆಗಳು" ಆಯ್ಕೆಮಾಡಿ.
- ನೀವು ಡಿಜಿಲಾಕರ್ ಖಾತೆಯನ್ನು ಹೊಂದಿದ್ದೀರಾ ಎಂದು ಕೇಳಲಾಗುತ್ತದೆ. ಇಲ್ಲದಿದ್ದರೆ, ಮೊದಲು ಡಿಜಿಲಾಕರ್ನಲ್ಲಿ ಖಾತೆಯನ್ನು ರಚಿಸಿ.
- ಈಗ ನಿಮ್ಮ 12-ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ.
- ಬಳಿಕ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುವ ಓಟಿಪಿಯನ್ನು ಚಾಟ್ನಲ್ಲಿ ನಮೂದಿಸಿ. ಪರಿಶೀಲನೆ ಪೂರ್ಣಗೊಂಡ ತಕ್ಷಣ, ಚಾಟ್ಬಾಟ್ ಡಿಜಿಲಾಕರ್ನಲ್ಲಿರುವ ಎಲ್ಲಾ ದಾಖಲೆಗಳನ್ನು ನಿಮಗೆ ತೋರಿಸಲು ಪ್ರಾರಂಭಿಸುತ್ತದೆ.
* ಡಿಜಿಲಾಕರ್ನಲ್ಲಿ ತೋರಿಸಲಾದ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಿ.
* ನೀವು ಆಧಾರ್ ಕಾರ್ಡ್ ಅನ್ನು ಆಯ್ಕೆ ಮಾಡಿದ ಕೆಲವೇ ಸೆಕೆಂಡುಗಳಲ್ಲಿ, ನಿಮ್ಮ ಆಧಾರ್ ಕಾರ್ಡ್ PDF ಸ್ವರೂಪದಲ್ಲಿ ವಾಟ್ಸಾಪ್ ಚಾಟ್ನಲ್ಲಿ ಲಭ್ಯವಿರುತ್ತದೆ. ಇದನ್ನು ಬಳಸಿ ನಿಮ್ಮ ಆಧಾರ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಬಹುದು.
ಮೈಗವ್ ಹೆಲ್ಪ್ಡೆಸ್ಕ್ (MyGov Helpdesk) ಚಾಟ್ಬಾಟ್ನ ಮತ್ತೊಂದು ಪ್ರಮುಖ ಲಾಭವೆಂದರೆ ಒಂದೊಮ್ಮೆ ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಡಿಜಿಲಾಕರ್ ಅಥವಾ ಎಂ-ಆಧಾರ್ ಅಪ್ಲಿಕೇಶನ್ ಇಲ್ಲದಿದ್ದರೂ ಕೂಡ ನೀವು ಚಾಟ್ಬಾಟ್ನಲ್ಲಿ ಮಾತನಾಡುವ ಮೂಲಕ ನಿಮ್ಮ ಆಧಾರ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಬಹುದು.