)
ದೇಶಾದ್ಯಂತ ಹಬ್ಬದ ಋತು ಆರಂಭವಾಗಿದೆ. ನವರಾತ್ರಿ, ನಂತರ ದೀಪಾವಳಿ ಹಬ್ಬದ ಸಡಗರ. ಹೀಗಾಗಿ ಹಬ್ಬದ ಋತುವಿನಲ್ಲಿ ದೂರದ ಊರುಗಳಿಂದ ತಮ್ಮ ಮನೆಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಹೀಗಾದಾಗ ರೈಲು ಟಿಕೆಟ್ ಪಡೆಯುವುದು ಅಷ್ಟು ಸುಲಭದ ಮಾತಲ್ಲ. ರೈಲು ಟಿಕೆಟ್ ಗಾಗಿ ಹರಸಾಹಸ ಪಡಬೇಕಾಗುತ್ತದೆ. ಗಂಟೆ ಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ. ಇಷ್ಟಾದರೂ ನಿಮಗೆ ಬೇಕಾದ ದಿನಕ್ಕೆ ಟಿಕೆಟ್ ಸಿಗುತ್ತದೆ ಎನ್ನುವುದು ಗ್ಯಾರಂಟಿ ಇಲ್ಲ. ಆದರೆ ಈಗ ನೀವು ಚಿಂತಿಸಬೇಕಾಗಿಲ್ಲ. ಸರ್ಕಾರವು ಹೊಸ ಯೋಜನೆಯೊಂದನ್ನು ಪ್ರಾರಂಭಿಸಿದೆ. ಇದರ ಮೂಲಕ, ಸುಲಭವಾಗಿ ರೈಲು ಟಿಕೆಟ್ಗಳನ್ನು ಬುಕ್ ಮಾಡಬಹುದು.
ಯುಟಿಎಸ್ ಆಪ್ ಎಂದರೇನು? :
ಭಾರತೀಯ ರೈಲ್ವೆಯು CRIS (Unreserved Ticketing Sysytem) ಅಭಿವೃದ್ಧಿಪಡಿಸಿದ UTS (Unreserved Ticketing Sysytem) ಎಂಬ ಅಪ್ಲಿಕೇಶನ್ ಅನ್ನು ಹೊಂದಿದೆ. ಈ ಅಪ್ಲಿಕೇಶನ್ ಅನ್ನು ಪ್ರಯಾಣಿಕರು, ಸ್ಥಳೀಯ ಮತ್ತು ರಿಸರ್ವ್ ಆಗದ ರೈಲು ಟಿಕೆಟ್ಗಳನ್ನು ಬುಕ್ ಮಾಡಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಈ ಅಪ್ಲಿಕೇಶನ್ ನಿಮ್ಮ ಫೋನ್ನಲ್ಲಿ ಸುಲಭವಾಗಿ ಟಿಕೆಟ್ ಜನರೇಟ್ ಮಾಡಲು ಅನುವು ಮಾಡಿಕೊಡುತ್ತದೆ.
ಆಂಡ್ರಾಯ್ಡ್ ಮತ್ತು ಐಫೋನ್ ಎರಡಕ್ಕೂ ಲಭ್ಯವಿರುವ ಯುಟಿಎಸ್ ಅಪ್ಲಿಕೇಶನ್ :
ಪ್ರಯಾಣಿಕರು ಗಂಟೆಗಟ್ಟಲೆ ಸಾಲಿನಲ್ಲಿ ಕಾಯದೆ ಪ್ಲಾಟ್ಫಾರ್ಮ್ ಟಿಕೆಟ್ಗಳು, ಅನ್ ರಿಸರ್ವ್ದ್ ಟಿಕೆಟ್ಗಳು ಮತ್ತು ಸೀಸನ್ ಟಿಕೆಟ್ಗಳನ್ನು ಬುಕ್ ಮಾಡಬಹುದು. ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ನಿಂದ ಮತ್ತು ಐಫೋನ್ ಬಳಕೆದಾರರು ಆಪಲ್ ಆಪ್ ಸ್ಟೋರ್ನಿಂದ ಅಪ್ಲಿಕೇಶನ್ ಡೌನ್ಲೋಡ್ ಮಾಡಬಹುದು.
ಯಾವುದೇ ತೊಂದರೆಯಿಲ್ಲದೆ ರೈಲು ಟಿಕೆಟ್ಗಳನ್ನು ಬುಕ್ ಮಾಡಿ :
1. ಮೊದಲು, ನಿಮ್ಮ ಫೋನ್ನಲ್ಲಿ UTS ಅಪ್ಲಿಕೇಶನ್ ಡೌನ್ಲೋಡ್ ಮಾಡಿ.
2. ನಂತರ, ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಅಗತ್ಯವಿರುವ ವಿವರಗಳನ್ನು ನಮೂದಿಸುವ ಮೂಲಕ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
3. ಈಗ, ನೀವು ಪಾಸ್ವರ್ಡ್ ಅನ್ನು ಹೊಂದಿಸಬೇಕಾಗುತ್ತದೆ. ನಂತರ, ಲಾಗಿನ್ ಮಾಡಲು ನಿಮ್ಮ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಅನ್ನು ನಮೂದಿಸಿ.
4. ನಿಮ್ಮ ಟಿಕೆಟ್ ಬುಕ್ ಮಾಡಲು "Book Ticket" ಮೇಲೆ ಕ್ಲಿಕ್ ಮಾಡಿ. ನಿಮ್ಮ ಪ್ರಯಾಣಕ್ಕಾಗಿ ರೈಲು ವಿವರಗಳನ್ನು ನಮೂದಿಸಿ.
5. ನಂತರ, ಹಣ ಪಾವತಿಸಿ. ಪ್ರಕ್ರಿಯೆ ಪೂರ್ಣಗೊಂಡ ತಕ್ಷಣವೇ ನಿಮ್ಮ ಅಕೌಂಟ್ ನಲ್ಲಿ ಡಿಜಿಟಲ್ ಟಿಕೆಟ್ ಕಾಣಿಸುತ್ತದೆ.