ಶೀಘ್ರದಲ್ಲೇ 50MP ಟೆಲಿಫೋಟೋ ಲೆನ್ಸ್ ಹೊಂದಿರುವ Vivo X200 FE ಭಾರತದಲ್ಲಿ ಬಿಡುಗಡೆ!

 ವಿವೋ ಜೂನ್ 2025ರ ವೇಳೆಗೆ ವಿವೋ X200 FE ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಬಹುದು. ವಿವೋ X200 ಅಲ್ಟ್ರಾ ಈ ಫೋನ್‌ನೊಂದಿಗೆ ಭಾರತವನ್ನು ಸಹ ಪ್ರವೇಶಿಸಲಿದೆ. ಸೋರಿಕೆ ಮಾಹಿತಿ ಪ್ರಕಾರ, ಈ ಸ್ಮಾರ್ಟ್‌ಫೋನ್ ಕಾರ್ಯಕ್ಷಮತೆಗಾಗಿ ಡೈಮೆನ್ಸಿಟಿ 9400e SoC ಚಿಪ್‌ಸೆಟ್ ಅನ್ನು ನೀಡಬಹುದು ಎಂದು ಹೇಳಲಾಗಿದೆ.

Written by - Puttaraj K Alur | Last Updated : Apr 26, 2025, 06:04 PM IST
  • Vivo X200 Pro Mini ಬಿಡುಗಡೆ ಬದಲು, ಕಂಪನಿಯು Vivo X200 FE ಪರಿಚಯಿಸಲಿದೆ
  • 2025ರ ಜೂನ್ ವೇಳೆಗೆ ವಿವೋ X200 FE ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಬಹುದು‌
  • Vivo X200 FEನಲ್ಲಿ ಕಂಪನಿಯು 6.31 ಇಂಚಿನ 1.5k LTPO OLED ಸ್ಕ್ರೀನ್‌ ಹೊಂದಬಹುದು
ಶೀಘ್ರದಲ್ಲೇ 50MP ಟೆಲಿಫೋಟೋ ಲೆನ್ಸ್ ಹೊಂದಿರುವ Vivo X200 FE ಭಾರತದಲ್ಲಿ ಬಿಡುಗಡೆ!

Vivo X200 FE India launch: ವಿವೋ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿದೆ. ಕಂಪನಿಯ ಫೋನ್‌ಗಳು ಬಜೆಟ್ ವಿಭಾಗದಿಂದ ಮಧ್ಯಮ ಶ್ರೇಣಿ, ಮಧ್ಯಮ ಶ್ರೇಣಿಯ ಫ್ಲ್ಯಾಗ್‌ಶಿಪ್ ವಿಭಾಗಗಳವರೆಗೆ ವ್ಯಾಪಕ ಮೆಚ್ಚುಗೆ ಗಳಿಸಿವೆ. ಕಳೆದ ಒಂದು ವರ್ಷದಲ್ಲಿ ವಿವೋ ಅನೇಕ ಉತ್ತಮ ಫೋನ್‌ಗಳನ್ನು ಬಿಡುಗಡೆ ಮಾಡಿದೆ.

Add Zee News as a Preferred Source

ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ವಿವೋ X200 ಸರಣಿಯಲ್ಲಿ ವಿವೋ X200 ಮತ್ತು ವಿವೋ X200 ಪ್ರೊ ಈಗಾಗಲೇ ಬಿಡುಗಡೆಯಾಗಿದೆ. ಈಗ ಕಂಪನಿಯು X200 ಸರಣಿಯಲ್ಲಿ ಇನ್ನೂ ಎರಡು ಫೋನ್‌ಗಳನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ಈ ಸರಣಿಯಲ್ಲಿ ಕಂಪನಿಯು ವಿವೋ X200 ಪ್ರೊ ಮಿನಿ ಮತ್ತು ವಿವೋ X200 ಅಲ್ಟ್ರಾವನ್ನು ಬಿಡುಗಡೆ ಮಾಡಬಹುದು.

ಇದನ್ನೂ ಓದಿ: ಅಕ್ಷಯ ತೃತೀಯದಂದು ಚಿನ್ನ ಖರೀದಿ ಜೋರು: ಅಸಲಿ ಮತ್ತು ನಕಲಿ ಚಿನ್ನ ಗುರುತಿಸುವುದು ಹೇಗೆ?

ಇತ್ತೀಚೆಗೆ ಇಂತಹ ಕೆಲವು ವರದಿಗಳು ಹೊರಬಂದಿದ್ದು, ಭಾರತೀಯ ಮಾರುಕಟ್ಟೆಯಲ್ಲಿ Vivo X200 Pro Mini ಅನ್ನು ಬಿಡುಗಡೆ ಮಾಡುವ ಬದಲು, ಕಂಪನಿಯು Vivo X200 FE ಅನ್ನು ಪರಿಚಯಿಸುತ್ತದೆ ಎಂದು ಹೇಳಲಾಗಿದೆ. ಸ್ಮಾರ್ಟ್‌ಪ್ರಿಕ್ಸ್‌ನ ವರದಿಯಲ್ಲಿ ಇದು ಬಹಿರಂಗವಾಗಿದೆ.

ವರದಿಯನ್ನು ನಂಬುವುದಾದರೆ, ವಿವೋ ಜೂನ್ 2025ರ ವೇಳೆಗೆ ವಿವೋ X200 FE ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಬಹುದು. ವಿವೋ X200 ಅಲ್ಟ್ರಾ ಈ ಫೋನ್‌ನೊಂದಿಗೆ ಭಾರತವನ್ನು ಸಹ ಪ್ರವೇಶಿಸಲಿದೆ. ಸೋರಿಕೆ ಮಾಹಿತಿ ಪ್ರಕಾರ, ಈ ಸ್ಮಾರ್ಟ್‌ಫೋನ್ ಕಾರ್ಯಕ್ಷಮತೆಗಾಗಿ ಡೈಮೆನ್ಸಿಟಿ 9400e SoC ಚಿಪ್‌ಸೆಟ್ ಅನ್ನು ನೀಡಬಹುದು.

ಇದನ್ನೂ ಓದಿ:  ಕೋಟ್ಯಂತರ EPFO ಖಾತೆದಾರರಿಗೆ ಗುಡ್‌ ನ್ಯೂಸ್‌... ಈ ಮಹತ್ವದ ಬದಲಾವಣೆಯಿಂದ ಉದ್ಯೋಗಿಗಳಿಗೆ ಭರ್ಜರಿ ಲಾಭ

Vivo X200 FEನಲ್ಲಿ ಕಂಪನಿಯು 6.31 ಇಂಚಿನ 1.5k LTPO OLED ಪರದೆಯನ್ನು ಒದಗಿಸಬಹುದು. ಸುಗಮ ಕಾರ್ಯಕ್ಷಮತೆಗಾಗಿ ಡಿಸ್ಪ್ಲೇ ಪ್ಯಾನೆಲ್‌ನಲ್ಲಿ 120Hz ರಿಫ್ರೆಶ್ ರೇಟ್‌ಅನ್ನ ನೀಡಬಹುದು. ವೇಗದ ಚಾರ್ಜಿಂಗ್‌ಗಾಗಿ ಈ ಫೋನ್ 90W ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ಪಡೆಯಬಹುದು.

ನೀವು ಛಾಯಾಗ್ರಹಣವನ್ನು ಇಷ್ಟಪಡುವವರಾಗಿದ್ದರೆ ಈ ಫೋನ್ ನಿಮಗೆ ಇಷ್ಟವಾಗುತ್ತದೆ. ಸೋರಿಕೆ ಮಾಹಿತಿ ಪ್ರಕಾರ, ಕಂಪನಿಯು Vivo X200 FEನ ಹಿಂಭಾಗದ ಪ್ಯಾನೆಲ್‌ನಲ್ಲಿ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 50-ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್‌ನೊಂದಿಗೆ ಕ್ಯಾಮೆರಾ ಸೆಟಪ್ ಅನ್ನು ಒದಗಿಸಬಹುದು. ಇದು ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 50-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿರಬಹುದು ಎಂದು ಹೇಳಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News