)
Vivo Y500 Pro Smartphone: ವಿವೋ 200MP ಕ್ಯಾಮೆರಾ ಮತ್ತು 7000mAh ಬ್ಯಾಟರಿಯೊಂದಿಗೆ ಶಕ್ತಿಶಾಲಿ ಫೋನ್ ಬಿಡುಗಡೆ ಮಾಡಿದೆ. ಈ ವಿವೋ ವೈ ಸರಣಿಯ ಫೋನ್ಅನ್ನ ಮಧ್ಯಮ ಬಜೆಟ್ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಫೋನ್ ಹಿಂಭಾಗದಲ್ಲಿ ವೃತ್ತಾಕಾರದ ರಿಂಗ್-ವಿನ್ಯಾಸದ ಕ್ಯಾಮೆರಾವನ್ನ ಹೊಂದಿದೆ. ಈ ಫೋನ್ ಕಳೆದ ವರ್ಷದ ವಿವೋ ವೈ 400 ಪ್ರೊಗಿಂತ ಅಪ್ಗ್ರೇಡ್ ಆಗಿದೆ. ವಿವೋ ವೈ 500 ಪ್ರೊವನ್ನ ಇದೀಗ ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಶೀಘ್ರದಲ್ಲೇ ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ. ಈ ವಿವೋ ಫೋನ್ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
ವಿವೋ ವೈ500 ಪ್ರೊ ಬೆಲೆ
ಈ ವಿವೋ ಫೋನ್ನ ಆರಂಭಿಕ ಬೆಲೆ CNY 1799 ಅಂದರೆ ಸರಿಸುಮಾರು 22,000 ರೂ. ಇದೆ. ಕಂಪನಿಯು ಈ ಫೋನ್ ಅನ್ನ 8GB RAM + 128GB, 8GB RAM + 256GB, 12GB RAM + 256GB ಮತ್ತು 12GB RAM + 512GB ಎಂಬ ನಾಲ್ಕು ಸ್ಟೋರೇಜ್ ರೂಪಾಂತರಗಳಲ್ಲಿ ಪರಿಚಯಿಸಿದೆ. ಇದರ ಇತರ ಮೂರು ರೂಪಾಂತರಗಳ ಬೆಲೆ ಕ್ರಮವಾಗಿ CNY 1999 (ಸರಿಸುಮಾರು 25,000 ರೂ.), CNY 2299 (ಸರಿಸುಮಾರು 28,000 ರೂ.) ಮತ್ತು CNY 2599 (ಸರಿಸುಮಾರು 32,000 ರೂ.). ಇದನ್ನ ಆಶ್ಪಿಯಸ್ ಕ್ಲೌಡ್, ಲೈಟ್ ಗ್ರೀನ್, ಸಾಫ್ಟ್ ಪೌಡರ್ ಮತ್ತು ಟೈಟಾನಿಯಂ ಬ್ಲ್ಯಾಕ್ ಬಣ್ಣಗಳಲ್ಲಿ ಪರಿಚಯಿಸಲಾಗಿದೆ.
ವಿವೋ ವೈ500 ಪ್ರೊ ವೈಶಿಷ್ಟ್ಯಗಳು
ಈ ವಿವೋ ಫೋನ್ 6.67-ಇಂಚಿನ 1.5K OLED ಡಿಸ್ಪ್ಲೇಯೊಂದಿಗೆ ಬರುತ್ತದೆ. ಡಿಸ್ಪ್ಲೇ 120Hz ಹೆಚ್ಚಿನ ರಿಫ್ರೆಶ್ ರೇಟ್ಅನ್ನ ಬೆಂಬಲಿಸುತ್ತದೆ. ಫೋನ್ನ ಗರಿಷ್ಠ ಹೊಳಪು 1600 ನಿಟ್ಗಳವರೆಗೆ ಇರುತ್ತದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7400 ಪ್ರೊಸೆಸರ್, 12GB RAM ಮತ್ತು 512GBವರೆಗಿನ ಸ್ಟೋರೇಜ್ನಿಂದ ಚಾಲಿತವಾಗಿದೆ. ಫೋನ್ 90W ವೇಗದ ಚಾರ್ಜಿಂಗ್ನೊಂದಿಗೆ 7000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ.
Vivo Y500 Pro ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನ್ 200MP ಪ್ರಾಥಮಿಕ ಕ್ಯಾಮೆರಾ ಜೊತೆಗೆ 2MP ದ್ವಿತೀಯ ಕ್ಯಾಮೆರಾವನ್ನ ಹೊಂದಿದೆ. ಸೆಲ್ಫಿಗಳು ಮತ್ತು ವಿಡಿಯೋ ಕರೆಗಾಗಿ 32MP ಮುಂಭಾಗದ ಕ್ಯಾಮೆರಾ ಲಭ್ಯವಿದೆ. ಈ Vivo ಫೋನ್ IP68 ಮತ್ತು IP69 ರೇಟಿಂಗ್ ಹೊಂದಿದ್ದು, ಇದು ನೀರು ಮತ್ತು ಧೂಳು ನಿರೋಧಕವಾಗಿದೆ. ಇದು ಆಂಡ್ರಾಯ್ಡ್ 16 ಆಧಾರಿತ OriginOS 6ನಲ್ಲಿ ಕಾರ್ಯನಿರ್ವಹಿಸುತ್ತದೆ. ಭದ್ರತೆಗಾಗಿ ಈ ಫೋನ್ ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್ ಅನ್ನ ಹೊಂದಿದೆ.